ಸುಖಾಸುಮ್ಮನೆ ಆರೋಪ, ಆಕ್ಷೇಪ ಎತ್ತಬೇಡಿ ಎಂದ ಸುರೇಶ ಅಂಗಡಿ
Recommended Video
ಬೆಳಗಾವಿ, ಸೆಪ್ಟೆಂಬರ್ 6: ಮಾಜಿ ಸಚಿವ ಡಿಕೆಶಿ ಮೇಲೆ ಇಡಿ ದಾಳಿ ವಿಚಾರವಾಗಿ ಬೆಳಗಾವಿಯಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ ಪ್ರತಿಕ್ರಿಯೆ ನೀಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಡಿಕೆಶಿ ಇಡಿ ಅಧಿಕಾರಿಗಳ ತನಿಖೆಗೆ ಸಹಕರಿಸಬೇಕು, ಸುಖಾಸುಮ್ಮನೆ ಆರೋಪ, ಆಕ್ಷೇಪ ಎತ್ತಬಾರದು" ಎಂದಿದ್ದಾರೆ.
ಡಿಕೆಶಿ ಬಂಧನಕ್ಕಾಗಿ ಅವರ ಅಭಿಮಾನಿಗಳು ಪ್ರತಿಭಟನೆ ಕೈಗೊಂಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, "ಡಿಕೆಶಿ ಅಭಿಮಾನಿಗಳು ಸುಮ್ಮನೆ ಸಾರ್ವಜನಿಕರ ಆಸ್ತಿ ಹಾನಿ ಮಾಡಬಾರದು. ಈ ಹಿಂದೆ ನನ್ನ ಮತ್ತು ಬಿಜೆಪಿ ಸಂಸದ ಸಿದ್ದೇಶ ಅವರ ಮೇಲೂ ಐಟಿ ದಾಳಿ ಆಗಿದೆ. ಕಾನೂನಿನ ಪ್ರಕಾರ ಎಲ್ಲವೂ ನಡೆಯುತ್ತದೆ. ಕಾಂಗ್ರೆಸ್ ಅಂತ ತಿಳಿದು ಯಾರೂ ದಾಳಿ ಮಾಡಲ್ಲ. ಅನುಮಾನ ಬಂದವರ ಮೇಲೆ ದಾಳಿ ಮಾಡಲಾಗುತ್ತದೆ" ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಕೇಂದ್ರದಲ್ಲಿ 370 (a) ಜಾರಿ ವಿಚಾರವಾಗಿಯೂ ಮಾತನಾಡಿದ ಅವರು, "ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಂದ ಇದೆಲ್ಲಾ ಸಾಧ್ಯವಾಗಿದೆ. ಅವರಿಗೆ ಅಭಿನಂದನೆ" ಎಂದಿದ್ದಾರೆ. ಜೊತೆಗೆ "ಹಿಂದಿನ ಕಾಂಗ್ರೆಸ್ ಗಾಂಧಿ ಕಾಂಗ್ರೆಸ್ ಆಗಿತ್ತು. ಆದರೆ ಇವತ್ತಿನ ಕಾಂಗ್ರೆಸ್ ಇಟಾಲಿಯನ್ ಕಾಂಗ್ರೆಸ್ ಆಗಿದೆ" ಎಂದು ಕಾಂಗ್ರೆಸ್ ವಿರುದ್ಧ ಟೀಕಿಸಿದ್ದಾರೆ.











Click it and Unblock the Notifications