ಬೆಳಗಾವಿ : ಬೀದಿನಾಯಿಗಳಿಗೆ ಐದು ತಿಂಗಳ ಮಗು ಬಲಿ

ಬೆಳಗಾವಿ, ಜ. 9 : ಐದು ತಿಂಗಳ ಗಂಡುಮಗುವೊಂದು ಬೀದಿ ನಾಯಿಗಳಿಗೆ ಆಹಾರವಾದ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಶಿವಬಸವ ನಗರದ ಧರ್ಮನಾಥ ಭವನ ಬಳಿ ಗುರುವಾರ ಸಂಜೆ ಬೀದಿ ನಾಯಿ ಮಗುವನ್ನು ತಿಂದು ಹಾಕಿದೆ.

ಶಿವಬಸವ ನಗರದ ಧರ್ಮನಾಥ ಭವನ ಬಳಿ ಶ್ರೀನಗರದತ್ತ ತೆರಳುವ ಡಬಲ್ ರಸ್ತೆ ಬದಿಯಲ್ಲಿ ಎಳೆಯ ಗಂಡು ಮಗು ವೊಂದನ್ನು ಬೀದಿನಾಯಿ ತಿಂದು ಹಾಕಿದೆ. ಆದರೆ, ಈ ಮಗುವಿನ ಪೋಷಕರು ಯಾರೆಂಬುದು ಇನ್ನೂ ಪತ್ತೆಯಾಗಿಲ್ಲ. [ಜೆಪಿ ನಗರದಲ್ಲಿ ಮಗುವಿನ ಮೇಲೆ ಬೀದಿನಾಯಿ ದಾಳಿ]

Stray Dog

ಸುಮಾರು ಐದು ತಿಂಗಳ ಮಗುವಿನ ತಲೆ ಮತ್ತು ಹೊಟ್ಟೆ ಭಾಗವನ್ನು ನಾಯಿ ತಿಂದು ಹಾಕಿದ್ದು, ಜನರು ಇದನ್ನು ಮೊದಲು ಗಮನಿಸಿದರು. ಮಗುವಿನ ಶವವನ್ನು ಕಚ್ಚಿಕೊಂಡ ನಾಯಿ, ಧರ್ಮನಾಥ ಭವನದ ಕಡೆಯಿಂದ ಶಿವಬಸವನಗರದ ಡಬಲ್ ರೋಡ್‌ವರೆಗಿನ ಪ್ರದೇಶದಲ್ಲಿ ಓಡಾಡುತ್ತಿತ್ತು. [ಮೂರು ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ]

ಸ್ಥಳೀಯರು ನಾಯಿಯ ಬಾಯಿಯಿಂದ ಮಗುವಿನ ಶವವನ್ನು ಬಿಡಿಸಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದರು. ಮಾಳಮಾರುತಿ ಪೊಲೀಸರು ಮಗುವಿನ ಶವವನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ಜೋಪಡಿಪಟ್ಟಿ ಪ್ರದೇಶದಿಂದ ಮಗುವನ್ನು ನಾಯಿ ಹೊತ್ತು ತಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇಲ್ಲವೇ ಮಗುವನ್ನು ಯಾರಾದರೂ ರಸ್ತೆ ಪಕ್ಕ ಎಸೆದು ಹೋಗಿದ್ದರೆ? ಎಂಬುದು ತನಿಖೆಯ ನಂತರ ತಿಳಿದುಬೆಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+