ರಾಜ್ಯದಲ್ಲಿ 35 ಮಹಿಳಾ ಪೊಲೀಸ್ ಠಾಣೆ ಮಂಜೂರು : ಪರಮೇಶ್ವರ್

ರಾಜ್ಯ ಸರ್ಕಾರ 35 ಮಹಿಳಾ ಪೊಲೀಸ್ ಠಾಣೆಗಳನ್ನು ಮಂಜೂರು ಮಾಡಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಬೆಳಗಾವಿ ಅಧಿವೇಶನದಲ್ಲಿ ಗುರುವಾರ ಪರಿಷತ್ ಗೆ ತಿಳಿಸಿದರು.

ಬೆಳಗಾವಿ, ಡಿಸೆಂಬರ್, 1: ರಾಜ್ಯದಲ್ಲಿ ಒಟ್ಟು 35 ಮಹಿಳಾ ಪೊಲೀಸ್ ಠಾಣೆಗಳು ಮಂಜೂರಾಗಿವೆ. ಮಹಿಳಾ ಪೊಲೀಸ್ ಠಾಣೆಗೆ ಒಟ್ಟು 1,461 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ ಎಂದು ಗುರುವಾರ ಸುವರ್ಣಸೌಧದಲ್ಲಿ ಪರಿಷತ್ ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ತಿಳಿಸಿದರು.

ಮಹಿಳಾ ಪೊಲೀಸ್ ಠಾಣೆಗಳ ನಿರ್ವಹಣೆಗಾಗಿ ಪ್ರತ್ಯೇಕವಾಗಿ ಅನುದಾನ ನಿಗದಿಯಾಗಿಲ್ಲ. ಜಿಲ್ಲಾ ಪೊಲೀಸ್ ನಿಗದಿಪಡಿಸಿದ ಲೆಕ್ಕ ಶೀರ್ಷಿಕೆಯಡಿ 15,84,62.00 ಲಕ್ಷ ರೂ ಹಾಗೂ ರಾಜ್ಯ ಕೇಂದ್ರ ಸ್ಥಾನ ಪೊಲೀಸ್ (ಪೊಲೀಸ್ ಆಯುಕ್ತರ) ನಿಗದಿನ ಪಡಿಸಿದ ಲೆಕ್ಕ ಶೀರ್ಷಿಕೆಯಡಿ 89,325.00 ಲಕ್ಷ ರೂ. ವೆಚ್ಚವನ್ನು ಮಹಿಳಾ ಪೊಲೀಸ್ ಠಾಣೆಗಳ ನಿರ್ವಹಣೆಗೆ ಭರಿಸಲಾಗುತ್ತಿದೆ ಎಂದು ಹೇಳಿದರು.

State government approves for 35 women police stations: Parameshwar

ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ರಾಜ್ಯದಲ್ಲಿ 6887 ನಿವೇಶನಗಳ ಹಂಚಿಕೆ : ಸಚಿವ ಆರ್. ರೋಷನ್ ಬೇಗ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ರಾಜ್ಯದಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಒಟ್ಟು 6,887 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಹಜ್ ಸಚಿವ ಆರ್ ರೋಷನ್ ಬೇಗ್ ತಿಳಿಸಿದರು.

ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಿವೇಶನ ಹಂಚಿಕೆ) ನಿಯಮಗಳು 1991 ರನ್ವಯ ಹಾಗೂ ಮೂಲೆ ನಿವೇಶನಗಳನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ವಾಣಿಜ್ಯ ಮತ್ತು ಮೂಲೆ ನಿವೇಶನಗಳ ಹಂಚಿಕೆ) ನಿಯಮಗಳು 1991 ರನ್ವಯ ಹಂಚಿಕೆ ಮಾಡಲು ಕ್ರಮವಹಿಸಲಾಗುತ್ತಿದೆ ಎಂದು ಅವರು ಸದನಕ್ಕೆ ಉತ್ತರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+