ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಸಿದ್ಧವಾಗಿರುವುದು ಯಾಕೆ?

ಬೆಳಗಾವಿ, ಡಿ. 10 : ಸದ್ಯ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಡೆಯುತ್ತಿದೆ. ಕಬ್ಬು ಬೆಳೆಗಾರರ ಸಮಸ್ಯೆ ಇಟ್ಟುಕೊಂಡು ಹೋರಾಟಕ್ಕಿಳಿದಿರುವ ವಿಪಕ್ಷಗಳ ಮಾತಿಗೆ ಸರ್ಕಾರ ತನ್ನದೇ ಆದ ಸಮರ್ಥನೆ ನೀಡುತ್ತಾ ಕುಳಿತಿದೆ.

ಸುವರ್ಣಸೌಧದ ಅಧಿವೇಶನ ಡಿಸೆಂಬರ್ 20 ಕ್ಕೆ ಮುಕ್ತಾಯವಾಗಲಿದ್ದು, ಡಿಸೆಂಬರ್ 21 ರಂದು ಕಾಂಗ್ರೆಸ್ ಬೆಳಗಾವಿಯಲ್ಲೇ ಶಕ್ತಿ ಪ್ರದರ್ಶನ ಮಾಡಲು ಸಿದ್ಧವಾಗಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ, ಡಿಸೆಂಬರ್ 21ಕ್ಕೆ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಳಗಾವಿಗೆ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.[ಬೆಳಗಾವಿ : ಬುಧವಾರದ ಕಲಾಪದ ಮುಖ್ಯಾಂಶಗಳು]

siddaramaaiah

ಚುನಾವಣೆ ಸಿದ್ಧತೆ
ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷವನ್ನು ಸದೃಢ ಮಾಡುವುದು ಮತ್ತು ಪ್ರತಿಪಕ್ಷಗಳ ಟೀಕೆಗೆ ಉತ್ತರ ನೀಡುವುದು ಸಭೆಯ ಮುಖ್ಯ ಅಂಶ. ಮುಂದೆ ಪಕ್ಷ ನಡೆಯಬೇಕಾದ ಹಾದಿ, ಸಂಘಟನೆ ಬಗ್ಗೆ ಚರ್ಚೆಗಳು ನಡೆದರೂ ಆಶ್ಚರ್ಯವಿಲ್ಲ. ಜತೆಗೆ ಉತ್ತರ ಕರ್ನಾಟಕದಲ್ಲಿ ಒಮ್ಮೆ ಶಕ್ತಿ ಪ್ರದರ್ಶನ ಮಾಡಿದರೆ ಒಳಿತು ಎಂಬ ಭಾವನೆಯೂ ನಾಯಕರಲ್ಲಿ ಇದೆ.

ಇಷ್ಟು ದಿನ ಇಲ್ಲದ ಸಭೆ ಈಗೇಕೆ?
ಕಾಂಗ್ರೆಸ್ ಸರ್ಕಾರದ ಮೇಲೆ ಮಾಜಿ ಸಿಎಂ ಬಿಎಸ್ ವೈ ಸೇರಿದಂತೆ ಅನೇಕ ನಾಯಕರು ಮುಗಿಬಿದ್ದು ವಾಗ್ದಾಳಿ ನಡೆಸುತ್ತಿದ್ದಾರೆ. ಇತ್ತ ಅತ್ಯಾಚಾರ ಪ್ರಕರಣಗಳು, ಕಬ್ಬು ಬೆಳೆಗಾರರ ಬಾಕಿ, ಸಚಿವರ ಭೂ ಅಕ್ರಮ ಆರೋಪಗಳು ರಾಜ್ಯದಲ್ಲೂ ಕಾಂಗ್ರೆಸ್ ಇಮೇಜ್ ಕುಂದುವಂತೆ ಮಾಡಿದೆ. ಇದಕ್ಕೆಲ್ಲ ಉತ್ತರ ನೀಡುವುದರೊಂದಿಗೆ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬುವುದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಅನಿವಾರ್ಯವಾಗಿದೆ.

ನಿಗಮ ಸುಗಮವಾಯಿತೆ?
ನಿಗಮ ಮಂಡಳಿ ನೇಮಕ ವೇಳೆ ಕಾಂಗ್ರೆಸ್ ನೊಳಗೆ ಭಿನ್ನಮತ ಭುಗಿಲೆದ್ದಿತ್ತು. ವಸತಿ ಸಚಿವ ಅಂಬರೀಶ್, ಪ್ರವಾಸೋದ್ಯಮ ಸಚಿವ ದೇಶಪಾಂಡೆ ಬಹಿರಂಗವಾಗೇ ಅಸಮಾಧಾನ ಹೊರಹಾಕಿದ್ದರು. ಇದಕ್ಕೆಲ್ಲ ತೇಪೆ ಹಚ್ಚಬೇಕಾಗಿದ್ದು ಜನರೆದುರು ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಕಾಂಗ್ರೆಸ್ ನಾಯಕರಿಗೆ ತೋರಿಸಬೇಕಾಗಿದೆ.[ಸಿಎಂ ಸಿದ್ದು, ಪರಮೇಶ್ವರ್ ಗೆ ದಿಗ್ವಿಜಯ್ ಗುದ್ದು]

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ?
ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಿರೀಕ್ಷಿತ. ಆದರೆ ಯಾವ ವಿಷಯ ಆಯ್ಕೆ ಮಾಡಿಕೊಳ್ಳುತ್ತಾರೇ ಎಂಬುದು ಕಾಂಗ್ರಸ್ ನಾಯಕರಿಗೆ ಬಿಟ್ಟಿದ್ದು. ಸದಾನಂದ ಗೌಡರಿಗೆ ರೈಲ್ವೆ ಖಾತೆ ತಪ್ಪಿಸಿದ್ದು ರಾಜ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಅಂದೇ ಹೇಳಿದ್ದನ್ನು ಗಮನಿಸಿದರೆ ಅದನ್ನಿಟ್ಟಿಕೊಂಡೇ ರಾಜ್ಯದ ಜನರಿಗೆ ಅನ್ಯಾಯವಾಗಿದೆ ಎಂದು ವಾದ ಮಂಡಿಸಬಹುದು.

ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದ ರೀತಿ ನೀತಿಗಳನ್ನು ಖಂಡಿಸುತ್ತಿರುವವರಿಗೆ ಉತ್ತರ. ಜಾರಿ ಮಾಡಿದ ಜನಪರ ಯೋಜನೆಗಳನ್ನು ಮತ್ತೆ ನೆನಪು ಮಾಡುವುದು. ಹೈ ಕಮಾಂಡ್ ಗೆ ರಾಜ್ಯ ನಾಯಕರ ಮೇಲೆ ವಿಶೇಷ ಭರವಸೆ ಇದೆ ಎಂಬುದನ್ನು ತೋರಿಸಲು ಬೆಳಗಾವಿ ಸಮಾವೇಶ ವೇದಿಕೆಯಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+