ಬೆಳಗಾವಿಯಲ್ಲಿ ಹೋಮ್ ಕ್ವಾರಂಟೈನ್ ಲ್ಲಿದ್ದ ವೃದ್ಧೆ ಸಾವು
ಬೆಳಗಾವಿ, ಏಪ್ರಿಲ್ 13: ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿಯ 128 ನೇ ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯ ಮನೆಯಲ್ಲಿದ್ದ ಅಜ್ಜಿಯ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
Recommended Video
ನಂ. 128 ಕೊರೊನಾ ವೈರಸ್ ಸೋಂಕಿತನ ಅಜ್ಜಿಯ ವಯಸ್ಸು(85) ಆಗಿತ್ತು. ಹೋಮ್ ಕ್ವಾರಂಟೈನ್ ನಲ್ಲಿ ಅಜ್ಜಿ ಇದ್ದರು. ಹೋಮ್ ಕ್ವಾರಂಟೈನ್ ನಲ್ಲಿದ್ದ ಹೇಗೆ ಸಾವನ್ನಪ್ಪಿದರು ಎಂದು ಇನ್ನು ತಿಳಿದುಬಂದಿಲ್ಲ.
ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯ ಮನೆಯಲ್ಲಿ ಇದ್ದವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಹೋಮ್ ಕ್ವಾರಂಟೈನ್ ನಲ್ಲಿದ್ದಾಗ ಚಿಕಿತ್ಸೆ ಇದ್ದರೂ ಕೂಡ ಸಾವನ್ನಪ್ಪಿದ್ದು ಹೇಗೆ? ಎಂಬ ಪ್ರಶ್ನೆ ಕಾಡತೊಡಗಿದೆ.

ತಮ್ಮ ಮನೆಯಲ್ಲಿದ್ದವರಿಗೆ ಕೊರೊನಾ ಬಂದಿರುವುದು ತಿಳಿದು ಅಜ್ಜಿ ಮನನೊಂದಿದ್ದರು. ಇಂದು ಮುಂಜಾನೆ ಅಜ್ಜಿಯನ್ನು ಮನೆಯಲ್ಲಿ ಬಿಟ್ಟು ಹೋಮ್ ಕ್ವಾರಂಟೈನ್ ನಲ್ಲಿದ್ದವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು.
೮೫ ವಯಸ್ಸಾಗಿರುವ ಅಜ್ಜಿ ಒಬ್ಬರನ್ನೇ ಮನೆಯಲ್ಲಿ ಬಿಟ್ಟು ಉಳಿದವರನ್ನು ಜಿಲ್ಲಾಸ್ಪತ್ರೆಗೆ ಆರೋಗ್ಯ ಅಧಿಕಾರಿಗಳು ಕರೆತಂದಿದ್ದರು. ವಿಶೇಷವೆಂದರೆ ಮನೆಯಲ್ಲಿ ಐವರು ಸೋಂಕಿತರು ಅಜ್ಜಿಯ ಜೊತೆ ನೇರ ಸಂಪರ್ಕ ಹೊಂದಿದ್ದರು. ಅಜ್ಜಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಜಿಲ್ಲಾಡಳಿತ ಎಡವಟ್ಟು ಮಾಡಿದೆಯಾ ಎಂಬ ಪ್ರಶ್ನೆ ಕಾಡತೊಡಗಿದೆ.












Click it and Unblock the Notifications