Get Updates
Get notified of breaking news, exclusive insights, and must-see stories!

ಫೆ. 14ರಿಂದ ರಾಯಬಾಗ-ಬೆಂಗಳೂರು ಹೊಸ ಸ್ಲೀಪರ್ ಬಸ್ ಸೇವೆ

ಬೆಳಗಾವಿ, ಫೆಬ್ರವರಿ 12: ವಾಯುಯ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗ ರಾಯಬಾಗ-ಬೆಂಗಳೂರು ನಡುವೆ ನಾನ್ ಎಸಿ ಸ್ಲೀಪರ್ ಕೋಚ್ ಬಸ್‌ ಸೇವೆಯನ್ನು ಆರಂಭಿಸಲಿದೆ. ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ರಾಯಬಾಗ-ಬೆಂಗಳೂರು ನಾನ್ ಎಸಿ ಸ್ಲೀಪರ್ ಕೋಚ್ (ಸ್ಲೀಪರ್ 2+1) ಕಬ್ಬೂರ, ಬಾಗೇವಾಡಿ, ಹುಕ್ಕೇರಿ, ಬೆಳಗಾವಿ ಮತ್ತು ಹುಬ್ಬಳ್ಳಿ ಮಾರ್ಗವಾಗಿ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಫೆಬ್ರವರಿ 14ರಿಂದ ರಾಯಬಾಗ-ಬೆಂಗಳೂರು ಮಾರ್ಗದಲ್ಲಿ 2 ನೂತನ ಹವಾನಿಯಂತ್ರಣ ರಹಿತ ರಾತ್ರಿ ಬಸ್‌ಗಳನ್ನು ಆರಂಭಿಸಲಾಗಿದೆ. ರಾಯಬಾಗ-ಬೆಂಗಳೂರು ನಡುವಿನ ಪ್ರಯಾಣ ದರ 850 ರೂ.ಗಳು.

 Belagavi NWKRTC Non Ac Sleeper Bus From Raibag Bengaluru

ರಾಯಬಾಗದಿಂದ ಸಂಜೆ 18.30ಕ್ಕೆ ಹೊರಡುವ ಬಸ್ ರಾಯಬಾಗ-ಕಬ್ಬೂರ- ಬಾಗೇವಾಡಿ-ಹುಕ್ಕೇರಿ-ಬೆಳಗಾವಿ-ಹುಬ್ಬಳ್ಳಿ ಮೂಲಕ ಸಂಚಾರ ನಡೆಸಿ ಬೆಳಗ್ಗೆ 7 ಗಂಟೆಗೆ ಬೆಂಗಳೂರು ನಗರವನ್ನು ತಲುಪಲಿದೆ.

ಬೆಂಗಳೂರು ನಗರದಿಂದ ಸಾಯಂಕಾಲ 19:30ಕ್ಕೆ ಹೊರಡುವ ಬಸ್ ಸದರಿ ಮಾರ್ಗದಲ್ಲಿಯೇ ಸಂಚಾರ ನಡೆಸಲಿದೆ. ಬೆಳಗ್ಗೆ 7.50ಕ್ಕೆ ರಾಯಬಾಗ ತಲುಪಲಿದೆ.

ಪ್ರಯಾಣದರ; ರಾಯಬಾಗ-ಬೆಂಗಳೂರು ನಡುವೆ ಪ್ರಯಾಣದರ 850 ರೂ.ಗಳು. ಹುಕ್ಕೇರಿ-ಬೆಂಗಳೂರು 810, ಬೆಳಗಾವಿ-ಬೆಂಗಳೂರು 800, ಹುಬ್ಬಳ್ಳಿ-ಬೆಂಗಳೂರು 710 ರೂ.ಗಳಾಗಿದೆ.

ಪ್ರಯಾಣಿಕರು ಮುಂಗಡ ಆಸನಗಳನ್ನು ಬುಕ್ ಮಾಡಲು ವೆಬ್ ಸೈಟ್‌ ವಿಳಾಸಕ್ಕೆ ಭೇಟಿ ನೀಡಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+