ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ರದರ್ಸ್ ವಾರ್ ಮಧ್ಯೆ ರಾಜಕೀಯ ಪ್ರವೇಶಿಸಿದ ಜಾರಕಿಹೊಳಿ ಪುತ್ರ

|
Google Oneindia Kannada News

Recommended Video

ರೆಬೆಲ್ ಶಾಸಕ ರಮೇಶ್ ಜಾರಕಿಹೊಳಿ ಮಗ ಅಮರ್ ಜಾರಕಿಹೊಳಿ ರಾಜಕೀಯಕ್ಕೆ ಪ್ರವೇಶ | Oneindia Kannada

ಬೆಳಗಾವಿ, ಏ.27: ಕಾಂಗ್ರೆಸ್‌ನಲ್ಲಿ ಧೂಳೆಬ್ಬಿಸಿರುವ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಪುತ್ರ ಅಮರ್ ಜಾರಕಿಹೊಳಿ ರಾಜಕೀಯ ಪ್ರವೇಶಿಸಿದ್ದಾರೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಮಧ್ಯೆ ರಮೇಶ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡುವ ವಿಚಾರವಾಗಿ ನಿತ್ಯವೂ ಜಗಳ ಏರ್ಪಡುತ್ತಲೇ ಇದೆ. ಈ ಗೊಂದಲಗಳ ಮಧ್ಯೆ ರಮೇಶ್ ಪುತ್ರ ಅಮರ್ ಜಾರಕಿಹೊಳಿ ಸದ್ದಿಲ್ಲದೆ ರಾಜಕೀಯ ಪ್ರವೇಶಿಸಿದ್ದಾರೆ.

ರಮೇಶ್ ಜಾರಕಿಹೊಳಿ ಏಕಾಂಗಿ: ಆಪರೇಷನ್ ಕಮಲ ಠುಸ್ಸ್‌?ರಮೇಶ್ ಜಾರಕಿಹೊಳಿ ಏಕಾಂಗಿ: ಆಪರೇಷನ್ ಕಮಲ ಠುಸ್ಸ್‌?

ಬೆಳಗಾವಿ ಕೆಎಂಎಫ್‌ಗೆ ಅಮರ್ ಜಾರಕಿಹೊಳಿ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಇದೇ ತಿಂಗಳ 28 ರಂದು ನಡೆಯಲಿರುವ ಕೆಎಂಎಫ್ ನಿರ್ದೇಶಕರ ಚುನಾವಣೆಯಲ್ಲಿ ಒಟ್ಟು 14 ಸ್ಥಾನಗಳಿಗೆ ಚುನಾವಣೆ ನಡೆಯಬೇಕಾಗಿದ್ದು, ಆದರೆ ಇದೀಗ 7 ಸ್ಥಾನಗಳು ನಿರ್ದೇಶಕ ಹುದ್ದೆಗೆ ಅವಿರೋಧ ಆಯ್ಕೆಯಾಗಿದೆ.

MLA Ramesh jarkiholi son Amar enters the politics

ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹಿಡಿತದಲ್ಲಿ ಇರುವ ಕೆಎಂಎಫ್. ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಕೆಎಂಎಫ ಮತ್ತು ಡಿಸಿಸಿ ಬ್ಯಾಂಕ್ ಪ್ರಮುಖ ಪಾತ್ರವಹಿಸುತ್ತದೆ. ಇನ್ನೂ ಚಿಕ್ಕಪ್ಪ ಬಾಲಚಂದ್ರ ಜಾರಕಿಹೊಳಿಯಿಂದ ಅಮರ್ ಕೆಎಂಎಫ್ ಎಂಟ್ರಿಯಾಗಿದ್ದಾರೆ ಎನ್ನಲಾಗಿದೆ.

ಅಮರ್​ ರಾಜಕೀಯ ಪ್ರವೇಶಕ್ಕೆ ಮೊದಲ ಮೆಟ್ಟಿಲು ಕೆಎಂಎಫ್ ನಿರ್ದೇಶಕರಾಗಿ ನೇಮಕವಾಗುತ್ತಿದ್ದಾರೆ ಎಂದು ಹೇಳಲಾಗುತ್ತಾದೆ. ಕಳೆದ ಒಂದು ವರ್ಷದಿಂದ ತಂದೆ ರಮೇಶ್ ಜಾರಕಿಹೊಳಿ ಜೊತೆ ಸಾರ್ವಜನಿಕವಾಗಿ ಅಮರ್ ಜಾರಕಿಹೊಳಿ ಕಾಣಿಸಿಕೊಳ್ಳುತ್ತಿದ್ದಾರೆ.

English summary
MLA Ramesh Jarkiholi's Son Amar Jarkiholi Enters into the politics he directly elected as chairmen of the KMF.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X