ಬೆಳಗಾವಿ ಪಾಲಿಕೆ ಎದುರು ಭಗವಾ ಧ್ವಜ ನೆಡಲು ಎಂಇಎಸ್ ಯತ್ನ, ಹೈಡ್ರಾಮಾ
ಬೆಳಗಾವಿ, ಮಾರ್ಚ್ 8: ಮಹಿಳಾ ಎಂಇಎಸ್ ನಾಯಕಿಯರನ್ನು ಮುಂದೆಬಿಟ್ಟು ಬೆಳಗಾವಿ ಮಹಾನಗರ ಪಾಲಿಕೆ ಎದುರು ಭಗವಾ ಧ್ವಜ ನೆಡಲು ಎಂಇಎಸ್ ಹಾಗೂ ಶಿವಸೇನೆ ಮುಂದಾಗಿದೆ.
ಬೆಳಗಾವಿ ಮಹಾನಗರ ಪಾಲಿಕೆ ಎದುರು ಭಗವಾ ಧ್ವಜಸ್ತಂಭ ನೆಡಲು ಪ್ರಯತ್ನಿಸಿದವರನ್ನು ತಡೆ ಹಿಡಿಯಲಾಯಿತು. ಧ್ವಜಸ್ತಂಭದೊಂದಿಗೆ ಮಹಾನಗರ ಪಾಲಿಕೆ ಎದುರು ಮಹಿಳಾ ಎಂಇಎಸ್ ನಾಯಕಿಯರು ಧಾವಿಸಿದರು.

ಈ ವೇಳೆ ಬೆಳಗಾವಿ ಮಾರ್ಕೆಟ್ ಠಾಣೆಯ ಎಸಿಪಿ ಸದಾಶಿವ ಕಟ್ಟಿಮನಿ ಅವರ ಜೊತೆ ಶಿವಸೇನೆ ಹಾಗೂ ಎಂಇಎಸ್ ನಾಯಕರು ವಾಗ್ವಾದ ನಡೆಸಿದರು. ನಂತರ ಬೆಳಗಾವಿ ಪೊಲೀಸರು ಧ್ವಜಸ್ತಂಭವನ್ನು ವಶಕ್ಕೆ ಪಡೆದರು. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಮಹಾನಗರ ಪಾಲಿಕೆ ಎದುರು ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.













Click it and Unblock the Notifications