ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ನಿಶ್ಚಿತಾರ್ಥ
ಬೆಂಗಳೂರು, ಆ. 16: ರಾಜ್ಯದಲ್ಲಿ ಮತ್ತೊಂದು ಹೈಪ್ರೊಫೈಲ್ ಬೀಗತನ ಆಗಿದೆ. ಈ ಬಾರಿ ಉತ್ತರ ಕರ್ನಾಟಕದ ಬಯಲು ಸೀಮೆ ಹಾಗೂ ಮಲೆನಾಡಿನ ಪ್ರಭಾವಿ ರಾಜಕಾರಣಿಗಳ ಮಧ್ಯೆ ಸಂಬಂಧ ಬೆಳೆದಿದೆ. ಕೊರೊನಾ ವೈರಸ್ ಸಂಕಷ್ಟದ ಮಧ್ಯೆಯೂ ನಾಳೆ ನಿಶ್ಚಿತಾರ್ಥ ನಿಗದಿಯಾಗಿದ್ದು, ವಿವಾಹ ದಿನ ನಿಗದಿ ಆಗಬೇಕಿದೆ.
ಬೆಳಗಾವಿ ಗ್ರಾಮಾಂತರ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಂಗಮೇಶ್ ಇನ್ಮುಂದೆ ಬೀಗರು. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಲ್ ಹಾಗೂ ಶಾಸಕ ಸಂಗಮೇಶ್ ಅವರ ಸಹೋದರ ಶಿವಕುಮಾರ್ ಅವರ ಪುತ್ರಿ ಡಾ. ಹಿತಾ ಅವರೊಂದಿಗೆ ನಾಳೆ ನಿಶ್ಚಿತಾರ್ಥ ನಡೆಯಲಿದೆ. ಆ ಮೂಲಕ ಭದ್ರಾ ದಂಡೆಯ ಹುಡುಗಿ ಕುಂದಾನಗರಿಯ ಪ್ರಭಾವಿ ಕುಟುಂಬದ ಸೊಸೆ ಆಗುತ್ತಿದ್ದಾರೆ.

ಕುಟುಂಬದ ಗುರು-ಹಿರಿಯರ ನಿಶ್ಚಯದಂತೆ ಶಿವಮೊಗ್ಗದ ಸರ್ಜಿ ಛತ್ರದಲ್ಲಿ ಮೃನಾಲ್ ಹಾಗೂ ಡಾ. ಹಿತಾ ನಿಶ್ಚಿತಾರ್ಥ ನಡೆಯಲಿದೆ. ಇಂದಿನಿಂದಲೇ ನಿಶ್ಚಿತಾರ್ಥದ ಕಾರ್ಯಕ್ರಮಗಳು ಆರಂಭವಾಗಿವೆ.












Click it and Unblock the Notifications