ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳಗಾವಿ ಜಿಲ್ಲಾ ಉಸ್ತುವಾರಿ ಯಾರ ಪಾಲಾಗಲಿದೆ?

By Mahesh
|
Google Oneindia Kannada News

ಬೆಂಗಳೂರು, ಮೇ 30: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಬೆಳಗಾವಿಗೆ ಎಷ್ಟರಮಟ್ಟಿಗೆ ಪ್ರಾಶಸ್ತ್ಯ ಸಿಗಲಿದೆ, ಯಾರಿಗೆ ಜಿಲ್ಲಾ ಉಸ್ತುವಾರಿ ಸಿಗಲಿದೆ? ಎಂಬ ಕುತೂಹಲ ಮುಂದುವರೆದಿದೆ.

ಕರ್ನಾಟಕ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಒಂದು ಕಡೆ ಲಾಬಿ ಜೋರಾಗಿದ್ದಾರೆ. ಇನ್ನೊಂದೆಡೆ ಸಚಿವ ಸ್ಥಾನ ತಪ್ಪಿಸಲು ಜಾರಕಿಹೊಳೆ ಬಣ ಯತ್ನಿಸುತ್ತಿರುವ ಸುದ್ದಿ ಇದೆ.

Karnataka election Results 2018 : Belagavi District Winners Losers

ಯಶ ಕಂಡರೂ ಅಧಿಕಾರವಿಲ್ಲ: ಈ ಬಾರಿ ಚುನಾವಣೆಯಲ್ಲಿ 18 ಕ್ಷೇತ್ರಗಳ ಪೈಕಿ 10ರಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. 8 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಜಯ ಗಳಿಸಿದೆ. 2013ರ ಫಲಿತಾಂಶದಂತೆ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಕಾಂಗ್ರೆಸ್ 6 ಹಾಗೂ ಬಿಜೆಪಿ 8, ಪಕ್ಷೇತರರು 2, ಇತರೆ 2 ಗಳಿಸಿದ್ದರು.

ಲಕ್ಷ್ಮೀ ಹೆಬ್ಬಾಳ್ಕರ್ ಸಚಿವೆಯಾಗಲು ಜಾರಕಿಹೊಳಿ ಅಡ್ಡಗಾಲು?ಲಕ್ಷ್ಮೀ ಹೆಬ್ಬಾಳ್ಕರ್ ಸಚಿವೆಯಾಗಲು ಜಾರಕಿಹೊಳಿ ಅಡ್ಡಗಾಲು?

ಜಿಲ್ಲಾ ಉಸ್ತುವಾರಿ : ಈ ಜವಾಬ್ದಾರಿಯನ್ನು ಸತೀಶ್ ಜಾರಕಿಹೊಳಿ ಅವರಿಗೆ ವಹಿಸಲಿ, ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರ ಗೆಲುವಿಗೆ ಜಾರಕಿಹೊಳಿ ಸೋದರರು ಶ್ರಮಿಸಿದ್ದಾರೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇದಲ್ಲದೆ, ಜಿಲ್ಲೆಯ ಬೈಲಹೊಂಗಲದ ಮಹಾಂತೇಶ್ ಕೌಜಲಗಿ, ಚಿಕ್ಕೋಡಿಯ ಗಣೇಶ್ ಹುಕ್ಕೇರಿ, ಅಥಣಿಯ ಮಹೇಶ್ ಕುಮಠಳ್ಳಿ ಕೂಡಾ ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದಾರೆ.

ಬೆಳಗಾವಿ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ: ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಗಳಿಸಿದ ಮತಗಳು ಪಕ್ಷ ಸೋತವರು ಪಕ್ಷ ಗಳಿಸಿದ ಮತಗಳು
ನಿಪ್ಪಾಣಿ ಶಶಿಕಲಾ ಜೊಲ್ಲೆ
87006 ಬಿಜೆಪಿ ಕಾಕಾಸಾಹೇಬ ಪಾಟೀಲ
ಕಾಂಗ್ರೆಸ್
78500
ಚಿಕ್ಕೋಡಿ-ಸದಲಗ ಗಣೇಶ ಹುಕ್ಕೇರಿ
91467 ಕಾಂಗ್ರೆಸ್
ಅಣ್ಣಾಸಾಹೇಬ ಜೊಲ್ಲೆ ಬಿಜೆಪಿ 80898
ಅಥಣಿ ಮಹೇಶ ಕುಮಠಳ್ಳಿ
82094 ಕಾಂಗ್ರೆಸ್ ಲಕ್ಷ್ಮಣ ಸವದಿ
ಬಿಜೆಪಿ 79763
ಕಾಗವಾಡ
ಶ್ರೀಮಂತ ಪಾಟೀಲ
83060 ಕಾಂಗ್ರೆಸ್ ಬರಮಗೌಡ ಕಾಗೆ
ಬಿಜೆಪಿ 50,118
ಕುಡಚಿ (ಎಸ್ ಸಿ)
ಪಿ.ರಾಜೀವ್ 67781 ಬಿಜೆಪಿ ಅಮಿತ ಘಾಟಗೆ
ಕಾಂಗ್ರೆಸ್ 52,773

ರಾಯಬಾಗ

(ಎಸ್ ಸಿ)

ದುರ್ಯೋಧನ ಐಹೊಳೆ 67502 ಬಿಜೆಪಿ ಪ್ರದೀಪ ಮಾಳಗಿ
ಕಾಂಗ್ರೆಸ್ 50954
ಹುಕ್ಕೇರಿ ಉಮೇಶ್ ಕತ್ತಿ
83588 ಬಿಜೆಪಿ ಎ. ಬಿ ಪಾಟೀಲ
ಕಾಂಗ್ರೆಸ್ 68203
ಅರಬಾವಿ
ಬಾಲಚಂದ್ರ ಜಾರಕಿಹೊಳಿ 96144 ಬಿಜೆಪಿ ಭೀಮಪ್ಪ ಗಡಾಡ
ಜೆಡಿಎಸ್ 48,816
ಗೋಕಾಕ ರಮೇಶ ಜಾರಕಿಹೊಳಿ
90249 ಕಾಂಗ್ರೆಸ್ ಅಶೋಕ ಪೂಜಾರಿ
ಬಿಜೆಪಿ 75969

ಯಮಕನಮರಡಿ

(ಎಸ್ ಟಿ)

ಸತೀಶ ಜಾರಕಿಹೊಳಿ
73512 ಕಾಂಗ್ರೆಸ್ ಮಾರುತಿ ಅಷ್ಟಗಿ
ಬಿಜೆಪಿ
70662
ಬೆಳಗಾವಿ ಉತ್ತರ
ಅನಿಲ ಬೆನಕೆ
79060 ಬಿಜೆಪಿ ಫಿರೋಜ್ ಸೇಠ್
ಕಾಂಗ್ರೆಸ್
61793
ಬೆಳಗಾವಿ ದಕ್ಷಿಣ
ಅಭಯ ಪಾಟೀಲ 84498 ಬಿಜೆಪಿ ಎಂ. ಡಿ ಲಕ್ಷ್ಮೀನಾರಾಯಣ
ಕಾಂಗ್ರೆಸ್
25806
ಬೆಳಗಾವಿ ಗ್ರಾಮಾಂತರ
ಲಕ್ಷ್ಮೀ ಹೆಬ್ಬಾಳ್ಕರ್
1,02,040 ಕಾಂಗ್ರೆಸ್ ಸಂಜಯ ಪಾಟೀಲ
ಬಿಜೆಪಿ
50316
ಖಾನಾಪುರ ಡಾ. ಅಂಜಲಿ ನಿಂಬಾಳ್ಕರ್
36649 ಕಾಂಗ್ರೆಸ್ ವಿಠಲ ಹಲಗಕೇರ್
ಬಿಜೆಪಿ
31516
ಕಿತ್ತೂರು ಮಹಾಂತೇಶ ದೊಡಗೌಡ್ರ
73155 ಬಿಜೆಪಿ ಡಿ. ಬಿ ಇನಾಂದರ
ಕಾಂಗ್ರೆಸ್
40293
ಬೈಲಹೊಂಗಲ ಮಹಾಂತೇಶ ಕೌಜಲಗಿ
47040 ಕಾಂಗ್ರೆಸ್ ಜಗದೀಶ ಮೆಟಗುಡ್ಡ
ಪಕ್ಷೇತರ
41,918
ಸವದತ್ತಿ ಯಲ್ಲಮ್ಮ
ಆನಂದ ಮಾಮನಿ
62480 ಬಿಜೆಪಿ ಆನಂದ್ ಚೋಪ್ರಾ
ಪಕ್ಷೇತರ
56189
ರಾಮದುರ್ಗ ಮಹಾದೇವಪ್ಪ ಯಾದವಾಡ 68349 ಬಿಜೆಪಿ ಅಶೋಕ ಪಟ್ಟಣ ಕಾಂಗ್ರೆಸ್ 65474
English summary
Karnataka election Results 2018 : Here is Belagavi district results. Get complete information about winners and losers with their constituencies and party. In 2018 Congress secured 8 out of 18 constituencies losing 10 constituencies to BJP. Who will get the district in charge minister post?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X