ಕಾರ್ ಡ್ರೈವರ್ ಜತೆ ಲವ್ವಿ-ಡವ್ವಿ, ರಜೆಗೆ ಬಂದ ಯೋಧನನ್ನೇ ಕೊಂದ ಪತ್ನಿ!

ಬೆಳಗಾವಿ, ಫೆಬ್ರವರಿ.23: ಭಾರತದ ಗಡಿ ಕಾಯುಲು ತೆರಳಿದ್ದ ಯೋಧ ಇನ್ನೇನು ಆರು ತಿಂಗಳಿನಲ್ಲಿ ನಿವೃತ್ತಿ ಪಡೆಯಬೇಕು. ಕುಟುಂಬದ ಜೊತೆಗೆ ಎಲ್ಲರಂತೆ ಜೀವನ ಸಾಗಿಸಬೇಕು ಎಂದು ಕನಸು ಕಟ್ಟಿದ್ದನು. ಅದಕ್ಕಾಗಿ ಎಲ್ಲ ತಯಾರಿ ಮಾಡಿದ್ದನು. ಊರಿನಲ್ಲೊಂದು ಮನೆ ನಿರ್ಮಿಸಿದ್ದ ಯೋಧ ದೀಪಕ್, ಪತ್ನಿಯ ಅನುಕೂಲಕ್ಕಾಗಿ ಕಾರ್ ಕೊಡಿಸಿದ್ದು ಅಲ್ಲದೇ ಕಾರ್ ಚಾಲಕನನ್ನೂ ನೇಮಿಸಿದ್ದರು.

ಕಾರ್ ಚಾಲಕನನ್ನು ನೇಮಿಸಿದ್ದೇ ಯೋಧ ದೀಪಕ್ ಪಾಲಿಗೆ ಉರುಳಾಯಿತು. ಕಾರ್ ಚಾಲಕನ ಜೊತೆಗೆ ಸೇರಿಕೊಂಡು ಪತ್ನಿಯೇ ತನ್ನ ಪತಿಯ ಹತ್ಯೆಗೈದಿದ್ದಾಳೆ. ಅಷ್ಟಕ್ಕೂ ಇಂಥದಂದು ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಗೊಡಚನಮಲ್ಕಿ ಜಲಪಾತದ ಬಳಿ ನಡೆದಿದೆ.

ಪತ್ನಿ ಅಂಜಲಿ ಮತ್ತು ಕಾರ್ ಚಾಲಕ ಪ್ರಶಾಂತ್ ಪಾಟೀಲ್ ಹಾಗೂ ಮತ್ತಿಬ್ಬರು ಸೇರಿಕೊಂಡು ಯೋಧ ದೀಪಕ್ ರನ್ನು ಹತ್ಯೆ ಮಾಡಿದ್ದಾರೆ. ಅದಾದ ಬಳಿಕ ಸ್ವತಃ ಪತ್ನಿ ಅಂಜಲಿಯೇ ಮಾಡ್ಯಾಳ್ ಪೊಲೀಸ್ ಠಾಣೆಗೆ ತನ್ನ ಪತಿ ಕಾಣೆಯಾಗಿದ್ದಾಗಿ ದೂರು ನೀಡಿದ್ದಳು.

ಯೋಧನ ಪತ್ನಿ ಮತ್ತು ಕಾರ್ ಡ್ರೈವರ್ ನಡುವೆ ಲವ್ವಿ-ಡವ್ವಿ

ಯೋಧನ ಪತ್ನಿ ಮತ್ತು ಕಾರ್ ಡ್ರೈವರ್ ನಡುವೆ ಲವ್ವಿ-ಡವ್ವಿ

ಪತ್ನಿ ಚೆನ್ನಾಗಿರಲಿ ಎಂದು ಯೋಧ ದೀಪಕ್ ಕಾರು ಕೊಡಿಸಿದ್ದರೆ, ಆ ಕಾರ್ ಚಾಲಕ ಪ್ರಶಾಂತ್ ಪಾಟೀಲ್ ಜೊತೆಗೇ ಅಂಜಲಿ ಲವ್ವಿ-ಡವ್ವಿ ಶುರು ಮಾಡಿದ್ದಾಳೆ. ಪತಿ ಊರಿಗೆ ವಾಪಸ್ ಬಂದರೆ ತಮ್ಮ ಸಂಬಂಧಕ್ಕೆ ಎಲ್ಲಿ ಉರುಳಾಗುತ್ತಾರೋ ಎಂಬ ಚಿಂತೆ ಅಂಜಲಿಯ ತಲೆಗೆ ಹೊಕ್ಕಿದೆ. ಕೊನೆಗೆ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯ ಹತ್ಯೆಗೆ ಪತ್ನಿಯೇ ಸ್ಕೆಚ್ ಹಾಕಿದ್ದಾಳೆ.

ಟ್ರಿಪ್ ಹೆಸರಿನಲ್ಲಿ ಯೋಧನ ಹತ್ಯೆಗೆ ಸ್ಕೆಚ್ ಹಾಕಿದ್ದ ಹಂತಕರು

ಟ್ರಿಪ್ ಹೆಸರಿನಲ್ಲಿ ಯೋಧನ ಹತ್ಯೆಗೆ ಸ್ಕೆಚ್ ಹಾಕಿದ್ದ ಹಂತಕರು

ಕಳೆದ ಜನವರಿ.28ರಂದು ಮನೆಗೆ ಆಗಮಿಸಿದ್ದ ಯೋಧ ದೀಪಕ್ ನನ್ನು ಪ್ರವಾಸದ ನೆಪದಲ್ಲಿ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಗೊಡಚನಮಲ್ಕಿ ಜಲಪಾತಕ್ಕೆ ಕರೆದುಕೊಂಡು ಹೋಗಿದ್ದಾರೆ. ಪತ್ನಿ ಅಂಜಲಿ ಮತ್ತು ಕಾರ್ ಚಾಲಕ ಪ್ರಶಾಂತ್ ಪಾಟೀಲ್ ಸೇರಿಕೊಂಡು ಯೋಧನನ್ನು ಹತ್ಯೆ ಮಾಡಿದ್ದಾರೆ.

ಮೃತ ಯೋಧನನ್ನು ಮಣ್ಣಿನಲ್ಲಿ ಹೂತಿಟ್ಟ ಹಂತಕರು

ಮೃತ ಯೋಧನನ್ನು ಮಣ್ಣಿನಲ್ಲಿ ಹೂತಿಟ್ಟ ಹಂತಕರು

ಪ್ರವಾಸದ ನೆಪದಲ್ಲಿ ಹತ್ಯೆಗೆ ಸ್ಕೆಚ್ ಹಾಕಿದ್ದ ಪತ್ನಿ ಅಂಜಲಿ ಮತ್ತು ಪ್ರಿಯಕರ ಪ್ರಶಾಂತ್, ಯೋಧನನ್ನು ಕೊಲೆಗೈದು ಅಲ್ಲಿಯೇ ಮಣ್ಣಿನಲ್ಲಿ ಹೆಣವನ್ನು ಸಮಾಧಿ ಮಾಡಿದ್ದಾರೆ. ಅಲ್ಲಿಂದ ವಾಪಸ್ ಬಂದ ಪತ್ನಿ ತನ್ನ ಪತಿ ನಾಪತ್ತೆಯಾಗಿರುವ ಬಗ್ಗೆ ಊರಿನಲ್ಲಿ ಕಟ್ಟುಕಥೆ ಕಟ್ಟಿದ್ದಾಳೆ. ಈ ಸಂಬಂಧ ಪೊಲೀಸರಿಗೂ ದೂರು ನೀಡಿದ್ದಾಳೆ.

ಯೋಧನ ಪತ್ನಿ ಮತ್ತು ಪ್ರಿಯಕರ ಅರೆಸ್ಟ್, ಮತ್ತಿಬ್ಬರಿಗೆ ಯೋಧ

ಯೋಧನ ಪತ್ನಿ ಮತ್ತು ಪ್ರಿಯಕರ ಅರೆಸ್ಟ್, ಮತ್ತಿಬ್ಬರಿಗೆ ಯೋಧ

ಪತ್ನಿ ಅಂಜಲಿ ನೀಡಿದ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರಿಗೆ ಅನೈತಿಕ ಸಂಬಂಧವಿರವ ಬಗ್ಗೆ ಸುಳಿವು ಸಿಕ್ಕಿದೆ. ಈ ಆಯಾಮದಲ್ಲಿ ತನಿಖೆ ಶುರು ಮಾಡಿದ ಪೊಲೀಸರಿಗೆ ಅಂಜಲಿ ಮತ್ತು ಕಾರ್ ಡ್ರೈವರ್ ಪ್ರಶಾಂತ್ ನಡುವಿದ್ದ ಲವ್ವಿ-ಡವ್ವಿಯ ಸೀಕ್ರೆಟ್ ಗೊತ್ತಾಗಿದೆ. ಸದ್ಯ ಇಬ್ಬರನ್ನು ಬಂಧಿಸಿರುವ ಪೊಲೀಸರು, ಹತ್ಯೆಗೆ ಸಹಾಯ ಮಾಡಿದ ಮತ್ತಿಬ್ಬರು ಆರೋಪಿಗಳ ಪತ್ತೆಗೆ ಶೋಧಕಾರ್ಯ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+