ಗೋಕಾಕ್ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಕೊರೊನಾ ವೈರಸ್: ಕಚೇರಿ ಸೀಲ್ ಡೌನ್

ಬೆಳಗಾವಿ, ಜುಲೈ 9: ಬೆಳಗಾವಿ ಜಿಲ್ಲೆಯ ಗೋಕಾಕ್ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ 48 ಗಂಟೆಗಳ ಕಾಲ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿದೆ.

Recommended Video

      Facebook , Instagram , tinder ಸೇರಿದಂತೆ ಬಾರತೀಯ ಸೇನೆಯು 89 ಆ್ಯಪ್‌ಗಳನ್ನು ನಿಷೇಧಿಸಿದೆ.| Oneindia Kannada

      ಕಚೇರಿ ಸೀಲ್ ಡೌನ್ ಬಗ್ಗೆ ಮಾಹಿತಿ ನೀಡಿರುವ ಗೋಕಾಕ್ ತಹಶೀಲ್ದಾರ ಪ್ರಕಾರ ಹೊಳೆಪ್ಪಗೋಳ, ಕಚೇರಿಗೆ ಸ್ಯಾನಿಟೈಸ್ ಮಾಡಬೇಕು, ನಂತರ ಸೋಮವಾರದ ಸಭೆ ಬಳಿಕ ಕಚೇರಿ ಪ್ರಾರಂಭಿಸುವಂತೆ ಸೂಚನೆ ನೀಡಿದರು.

      ಕೊರೊನಾ ವೈರಸ್‌ ಸೋಂಕಿನಿಂದ ಗೋಕಾಕ್ ಪಟ್ಟಣದ ಜನರಿಗೆ ಆಂತಕಗೊಂಡಿದ್ದು, ಸಾರ್ವಜನಿಕ ಅಭಿಪ್ರಾಯದ ಮೇರೆಗೆ ಗೋಕಾಕ್ ನಲ್ಲಿ "ಷರತ್ತು ಬದ್ಧ' ಲಾಕ್ ಡೌನ್ ಹೇರಲಾಗಿದೆ.

      Coronavirus Infection For Gokak Tahasildar Office Staff

      ಗುರುವಾರದಿಂದ ವ್ಯಾಪಾರ-ವಹಿವಾಟುಗಳು ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರಗೆ ಮಾತ್ರ ಇರುತ್ತದೆ. ನಂತರ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಆಗಲಿದೆ.

      ಗೋಕಾಕ್ ತಾಲೂಕಿನಲ್ಲಿ ಕೊರೊನಾ ವೈರಸ್ ಪಾಸಿಟಿವ್ ವರದಿಗಳು ಕಡಿಮೆ ಯಾಗುವವರೆಗೂ ಷರತ್ತು ಬದ್ಧ ಲಾಕ್ ಡೌನ್ ಮುಂದುವರಿಯಲಿದೆ. ಇನ್ಮುಂದೆ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್, ಕ್ರೀಡಾ ಚಟುವಟಿಕೆ ನಡೆಯದಂತೆ ಸೂಚನೆ ನೀಡಿದ್ದಾರೆ.

      ತಾಲ್ಲೂಕಿನಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಸೀಲ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಸೀಲ್ ಡೌನ್ ಪ್ರದೇಶದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಗೋಕಾಕ್ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಸೂಚನೆ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+