ಬೆಳಗಾವಿಯಲ್ಲಿ ಮಾತು ಬಾರದ ಯುವತಿ ಮೇಲೆ ಅತ್ಯಾಚಾರ
ಬೆಳಗಾವಿ, ಜನವರಿ 6: ಬೆಳಗಾವಿಯಲ್ಲಿ ಮಾತುಬಾರದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಖಾನಾಪುರ ತಾಲೂಕಿನಲ್ಲಿ ಕೃತ್ಯ ನಡೆದು ಒಂದು ವಾರದ ಜನರ ಬಾಯಲ್ಲಿ ಗುಸುಗುಸು ಕೇಳಿಬಂದಿತ್ತು. ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅಸಾಹಾಯಕ ಹಾಗೂ ಮೂಕ ಯುವತಿಯರನ್ನೇ ಗ್ಯಾಂಗ್ ಟಾರ್ಗೆಟ್ ಮಾಡುತ್ತಿದ್ದು, ಅತ್ಯಾಚಾರವೆಸಗಿ ಪರಾರಿಯಾಗಿದ್ದಾರೆ. ಈಗ ಸಂತ್ರಸ್ತೆಗೆ ಆರೋಪಿಗಳು ಯಾರೆಂದು ತಿಳಿಸಲು ಕೂಡ ಸಾಧ್ಯವಾಗುತ್ತಿಲ್ಲ. ಬೆಳಗಾವಿ ಜಿಲ್ಲೆಯ ಗೋಕಾಕ್ ಹಾಗೂ ಖಾನಾಪುರ ತಾಲೂಕಿನ ಎರಡು ಪ್ರತ್ಯೇಕಗಳು ಪ್ರಕರಣ ನಡೆದಿದೆ.

ಗೋಕಾಕ್ ತಾಲೂಕಿನಲ್ಲಿ ಮೂಕ ಯುವತಿಯನ್ನು ಟಾರ್ಗೆಟ್ ಮಾಡಿದ ಆರೋಪಿ ಆಕೆಯ ಬಾಯಲ್ಲಿ ಬಟ್ಟೆ ಹಾಕಿ ಕ್ರೂರವಾಗಿ ವರ್ತಿಸಿ ಅತ್ಯಾಚಾರವೆಸಗಿದ್ದಾನೆ. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಪೊಲೀಸರು ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ.
ದೇಶದೆಲ್ಲೆಡೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇದೆ, ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.












Click it and Unblock the Notifications