ಬೆಳಗಾವಿ-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ ಸೇರ್ಪಡೆ

ಬೆಳಗಾವಿ, ಜುಲೈ 16 : ಬೆಳಗಾವಿ-ಬೆಂಗಳೂರು ನಡುವಿನ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸೀಟುಗಳಿಗೆ ಹೆಚ್ಚಿನ ಬೇಡಿಕೆ ಇರುವ ಹಿನ್ನಲೆಯಲ್ಲಿ ಒಂದು ಹೆಚ್ಚುವರಿ ಬೋಗಿ ಅಳವಡಿಕೆ ಮಾಡಲಾಗಿದೆ.

ಜೂನ್ 29ರಂದು ಬೆಳಗಾವಿ-ಬೆಂಗಳೂರು ರೈಲು ಸೇವೆಗೆ ಚಾಲನೆ ಸಿಕ್ಕಿತು. ಆಗ 14 ಬೋಗಿ ಇತ್ತು, ರೈಲಿನ ಎಲ್ಲಾ ಸೀಟುಗಳು ಭರ್ತಿಯಾಗುತ್ತಿದ್ದು, ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದ, ಫಸ್ಟ್‌ ಕ್ಲಾಸ್ ಎಸಿ ಕೋಚ್‌ ಹೆಚ್ಚುವರಿಯಾಗಿ ಸೇರಿಸಲಾಗಿದೆ.

ಈಗ ರೈಲಿನಲ್ಲಿ 15 ಕೋಚ್‌ಗಳಿದ್ದು, ಸೀಟುಗಳ ಸಂಖ್ಯೆ 868ಕ್ಕೆ ಏರಿಕೆಯಾಗಿದೆ. ಜೂನ್ 29ರಿಂದ ಜುಲೈ 14ರ ತನಕ ರೈಲಿನಲ್ಲಿ 21,678 ಪ್ರಯಾಣಿಕರು ಸಂಚಾರ ನಡೆಸಿದ್ದಾರೆ. ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಜನರಿಗೆ ಈ ರೈಲು ಹೆಚ್ಚಿನ ಅನುಕೂಲ ಒದಗಿಸಿದೆ.

Extra coach added to Belagavi Bengaluru tatkal super fast train

ಬೆಳಗಾವಿ-ಬೆಂಗಳೂರು ನಡುವಿನ ಸುಮಾರು 610 ಕಿ.ಮೀ.ದೂರವನ್ನು ಸೂಪರ್ ಫಾಸ್ಟ್ ರೈಲು ಕೇವಲ 10 ಗಂಟೆಯಲ್ಲಿ ಕ್ರಮಿಸುತ್ತದೆ. ಆದ್ದರಿಂದ, ಜನರು ರೈಲು ಸೇವೆಯನ್ನು ಹೆಚ್ಚು ಬಳಕೆ ಮಾಡುತ್ತಿದ್ದು, ಸೀಟುಗಳಿಗೆ ಬೇಡಿಕೆ ಹೆಚ್ಚಿದೆ.

ಮೊದಲು ಕೇವಲ ಒಂದು ತಿಂಗಳು ಮಾತ್ರ ರೈಲನ್ನು ಓಡಿಸಲು ತೀರ್ಮಾನಿಸಲಾಗಿತ್ತು. ಈಗ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಅಕ್ಟೋಬರ್ 31ರ ತನಕ ವಿಸ್ತರಣೆ ಮಾಡಿ ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ.

ಬೆಳಗಾವಿಯಿಂದ ಹೊರಡುವ ರೈಲು ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ಅರಸೀಕೆರೆ, ತುಮಕೂರು, ಯಶವಂತಪುರ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದ್ದು, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲು ನಿಲ್ದಾಣಕ್ಕೆ ಬಂದು ತಲುಪಲಿದೆ.

ಬೆಳಗಾವಿಯಿಂದ ರಾತ್ರಿ 9ಕ್ಕೆ ಹೊರಡುವ ರೈಲು ಬೆಳಗ್ಗೆ 7 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದೆ. ಬೆಂಗಳೂರಿನಿಂದ ರಾತ್ರಿ 9ಕ್ಕೆ ಹೊರಡುವ ರೈಲು ಬೆಳಗ್ಗೆ 7ಕ್ಕೆ ಬೆಳಗಾವಿಗೆ ತಲುಪುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+