ಬೆಳಗಾವಿಯಲ್ಲಿ ವಿದ್ಯುತ್ ಅವಘಡ, 2 ಜನ ಸಾವು, 6 ಜನರಿಗೆ ಗಾಯ
ಬೆಳಗಾವಿ, ಜುಲೈ 16: ವಿದ್ಯುತ್ ಅವಘಡವೊಂದರಲ್ಲಿ ಇಬ್ಬರು ಮೃತಪಟ್ಟು 6 ಜನ ಗಾಯಗೊಂಡ ಘಟನೆ ಇಲ್ಲಿನ ಗಾಂಧಿನಗರದಲ್ಲಿ ಶನಿವಾರ ನಡೆದಿದೆ.
ಬೆಳಗಾವಿ ನಗರದ ನಿವಾಸಿಗಳಾದ ಗೋಪಾಲ ಸೊಲಗನ್ನವರ (25) ಮತ್ತು ಪರಶುರಾಮ ಕಠಾರೆ (48) ಕರೆಂಟ್ ಶಾಕ್ ಗೆ ತುತ್ತಾಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಬೆಳಗಾವಿ ನಗರದ ಗಾಂಧಿನಗರದಲ್ಲಿ ಅಂಗಡಿಯೊಂದಕ್ಕೆ ಒಂದಷ್ಟು ಜನ ಸೇರಿಕೊಂಡು ಬೋರ್ಡ್ ಹಾಕುತ್ತಿದ್ದರು. ಈ ವೇಳೆ ಬೋರ್ಡ್ ಸಮೀಪದಲ್ಲೇ ಇದ್ದ ವಿದ್ಯುತ್ ತಂತಿಗೆ ತಾಗಿದೆ. ಪರಿಣಾಮ ಬೋರ್ಡ್ ಹಿಡಿದುಕೊಂಡಿದ್ದವರಿಗೆಲ್ಲಾ ಶಾಕ್ ನ ಅನುಭವವಾಗಿದ್ದು.
ವೈರ್ ನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಹರಿಯುತ್ತಿದುದರಿಂದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 6 ಜನರು ಗಂಭೀರ ಗಾಯಗೊಂಡಿದ್ದು ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಡಿಸಿಪಿ ಸೀಮಾ ಲಾಟಕರ್ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಇಲ್ಲಿನ ಮಾಳ ಮಾರುತಿ ಪೋಲಿಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.












Click it and Unblock the Notifications