ಯಡಿಯೂರಪ್ಪ ಹಗಲು ಕನಸು ಕಾಣುತ್ತಿದ್ದಾರೆ : ಸಿದ್ದರಾಮಯ್ಯ
ಬೆಳಗಾವಿ, ಏಪ್ರಿಲ್ 29: 'ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರಕ್ಕೆ ಮುಹೂರ್ತ ನಿಗದಿ ಪಡಿಸಲಾಗಿದೆ' ಎಂಬ ಬಿಎಸ್ ಯಡಿಯೂರಪ್ಪ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ಬಿಎಸ್ವೈ ಅವರು ಹಗಲು ಕನಸು ಕಾಣುತ್ತಿದ್ದಾರೆ. ಸಿಎಂ ಆಗೋ ಭ್ರಮೆಯಲ್ಲಿ ಯಡಿಯೂರಪ್ಪ ಇದ್ದಾರೆ.
ಬಿಜೆಪಿ ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ. ಬಿಎಸ್ವೈ ಕಳಂಕಿತ ವ್ಯಕ್ತಿ, ರಾಜ್ಯದ ಜನ ಒಪ್ಪಿಕೊಳ್ಳಲು ತಯಾರಿಲ್ಲ ಎಂದರು. ಮತ್ತೆ ಬಿಎಸ್ ವೈ ಹಾಗೂ ರೆಡ್ಡಿ ಬ್ರದರ್ಸ್ ಒಟ್ಟಾಗಿದ್ದಾರೆ. ಅದು ಹೇಗೆ ಕರ್ನಾಟಕ ಜನತೆ ಈ ಲೂಟಿಕೋರರನ್ನ ಒಪ್ಪಿಕೊಳ್ಳತ್ತಾರೆ ಎಂದು ಪ್ರಶ್ನಿಸಿದರು.

ಬಿಎಸ್ವೈ ಸಿಎಂ ಆದ್ರೆ ಸಿದ್ದರಾಮಯ್ಯ ಜೈಲಿಗೆ ಹಾಕ್ತಿನಿ ಅಂತ ನೀಡಿದ ಹೇಳಿಕೆ ಸಿಎಂ ಖಾರವಾಗಿ ಪ್ರತಿಕ್ರಿಯಿಸಿ, ಮೊದಲು ಅವರು ಜೈಲಿಗೆ ಹೋಗಿ ಬಂದಿದ್ದನ್ನ ಹೇಳಲಿ, ಏನಾದರೂ ನನ್ನ ವಿರುದ್ಧ ದಾಖಲೆ ಇದ್ದರೆ ಎಸಿಬಿ, ಲೋಕಾಯುಕ್ತಗೆ ಕೊಡಲಿ ಎಂದರು.
ಯಡಿಯೂರಪ್ಪ ಗೆ 75 ವರ್ಷ ವಯಸ್ಸಾಗಿದೆ, ಇನ್ನೂ ಅವರಿಗೆ ಭಾಷೆ ಬಳಸುವುದನ್ನೆ ಗೊತ್ತಿಲ್ಲ. ಒಂದು ಸಂಸದೀಯ ಭಾಷೆ ಬಳಸುವುದೇ ಗೊತ್ತಿಲ್ಲ, ಏಕ ವಚನದಲ್ಲಿ ನನ್ನ ವಿರುದ್ಧ ಮಾತಾಡುತ್ತಾರೆ. ಅಂತಹ ಭಾಷೆಯನ್ನ ನಾನು ಮಾತಾಡಲ್ಲ. ಯಡಿಯೂರಪ್ಪನ ಮಾತಿಗೆ ಕಿಮ್ಮತು ಕೊಡುವ ಅಗತ್ಯವಿಲ್ಲ.
ಅಮಿತ್ ಶಾ ವಿರುದ್ಧ ಕಿಡಿಕಾರಿದ ಸಿಎಂ ಸಿದ್ದರಾಮಯ್ಯ, ಅಮಿತ್ ಶಾ ಮಾತುಗಳಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ. ಅಮಿತ ಶಾನೂ ಕಳಂಕಿತ ವ್ಯಕ್ತಿ, ಅಮಿತ್ ಶಾ ಮಗಾ ಕರಪ್ಟ್, ಇವರು ಜೈಲಿಗೆ ಹೋದವರು. ಬಿಎಸ್ವೈ, ಕುಮಾರಸ್ವಾಮಿ ಪ್ರಮಾಣ ವಚನಕ್ಕೆ ಮೂರ್ಹತ ನಿಗದಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಅವರು ಅಧಿಕಾರಕ್ಕೆ ಬರುವುದಿಲ್ಲ, ಅದಕ್ಕೆ ಮೂರ್ಹತ ನಿಗದಿ ಮಾಡಿಕೊಂಡಿದ್ದಾರೆ, ನಾವೇ ಅಧಿಕಾರಕ್ಕೆ ಬರ್ತಿವಿ, ಅಧಿಕಾರಕ್ಕೆ ಬರುವ ನಾವೇ ಸುಮ್ಮನಿದ್ದೇವೆ ಎಂದರು.
ಕುಮಾರಸ್ವಾಮಿ ಮತ್ತು ಅಮಿತ್ ಶಾ ಇಬ್ಬರು ವಿಮಾನದಲ್ಲಿ ಹೋಗಿದ್ದಾರೆ. ದೆಹಲಿಯಲ್ಲಿ ಇಬ್ಬರೂ ಒಟ್ಟಿಗೆ ಹೋಗಿದ್ದಾರೆ. ಸಮಯ ಬಂದಾಗ ದಾಖಲೆ ಬಿಡುಗಡೆ ಮಾಡೋಣ ಎಂದರು. ಜೆಡಿಎಸ್ ಬಿಜೆಪಿಯ ಬಿ ಟೀಮ್, ಬೆಳಗಾವಿ ಜಿಲ್ಲೆಯ 12 ಸೀಟ್ ಗೆಲ್ಲುತ್ತೇವೆ ಎಂದರು.












Click it and Unblock the Notifications