ಸಾವಿನಲ್ಲೂ ಜೊತೆ ನಡೆದರು ಬೆಳಗಾವಿಯ ಈ ಶಿಕ್ಷಕ ದಂಪತಿ
ಬೆಳಗಾವಿ, ಸೆಪ್ಟೆಂಬರ್ 26: ಗಂಡನ ಸಾವಿನ ಸುದ್ದಿ ಕೇಳಿದ ಒಂದೇ ಗಂಟೆಯ ಒಳಗೆ ಹೆಂಡತಿಯೂ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ನಿವೃತ್ತ ಶಿಕ್ಷಕ ಗುರುರಾಜ (89) ಅವರು ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಿಧನರಾಗಿದ್ದರು. ಪತಿಯ ಸಾವನ್ನು ಕಂಡ ನಂತರ 45 ನಿಮಿಷದ ಅಂತರದಲ್ಲೇ ಪತ್ನಿ ಅಲಕಾ (84) ಅವರು ಕೂಡ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಬೆಳಗಾವಿ ಭಾಗ್ಯ ನಗರದಲ್ಲಿ ಈ ದಂಪತಿ ನೆಲೆಸಿದ್ದರು. ಗುರುರಾಜ ಅವರು ಸರಸ್ವತಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಪತ್ನಿ ಅಲಕಾ ಅವರು ಗೋಮಟೇಶ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದರು.
ಈ ವೃದ್ಧ ದಂಪತಿಗಳು ಈಗ ಸಾವಿನಲ್ಲೂ ಒಂದಾಗಿ ಸಾಗಿದ್ದಾರೆ.












Click it and Unblock the Notifications