ಕಷ್ಟಕ್ಕೆ ಕಣ್ಣೀರು ಹಾಕುವ ಜಾಯಮಾನ ಡಿಕೆಶಿಯದ್ದಲ್ಲ; ಗುಡುಗಿದ ಲಕ್ಷ್ಮಿ ಹೆಬ್ಬಾಳ್ಕರ್
Recommended Video
ಟ್ಯೂಶನ್ ಗೆ ಬರ್ತೀನಿ ವೇಯ್ಟ್ ಮಾಡಿ ಅಂದ್ರು ಲಕ್ಷ್ಮಿ ಹೆಬ್ಬಾಳ್ಕರ್..? | lakshmi hebbalkar
ಬೆಳಗಾವಿ, ಸೆಪ್ಟೆಂಬರ್ 6: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಐಟಿ ಮತ್ತು ಇಡಿ ದಾಳಿ ವಿಚಾರವಾಗಿ ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗುಡುಗಿದ್ದಾರೆ.
"ಇಡಿ ದಾಳಿ ಆಗಿದ್ದರಿಂದ ಕಷ್ಟಕ್ಕೆ ಕಣ್ಣೀರು ಹಾಕುವ ಜಾಯಮಾನ ಡಿಕೆಶಿಯದ್ದಲ್ಲ. ಹಿರಿಯರ ಪೂಜೆಗೆ ಹೋಗಲು ಅಧಿಕಾರಿಗಳು ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಕಣ್ಣೀರು ಹಾಕಿದ್ದಾರೆಯೇ ಹೊರತು ಕಷ್ಟಕ್ಕೆ ಕಣ್ಣೀರು ಹಾಕಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಇಡೀ ದೇಶದಲ್ಲಿ ಜನರಿಗೆ ಗೊತ್ತಿದೆ, ಶಾರದಾ ಚಿಟ್ ಫಂಡ್ ಹಗರಣ ಏನೆಂದು, ಅದರಲ್ಲಿ ಭಾಗಿಯಾಗಿದ್ದವರು ಬಿಜೆಪಿ ಸೇರಿದ್ದಾರೆ. ಬಿಜೆಪಿ ಸೇರಿದ ಬಳಿಕ ಅವರು ಪವಿತ್ರ ಆದರಾ?" ಎಂದು ಪ್ರಶ್ನಿಸಿದ್ದಾರೆ.

ಈಗಿರುವ ಕಾಂಗ್ರೆಸ್ ಇಟಾಲಿಯನ್ ಕಾಂಗ್ರೆಸ್ ಆಗಿದೆ. ತತ್ವ ಸಿದ್ಧಾಂತಗಳೇ ಇಲ್ಲ ಎಂಬ ಕೇಂದ್ರ ಸಚಿವ ಸುರೇಶ ಅಂಗಡಿ ಹೇಳಿಕೆಗೆ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ. "ಸುರೇಶ ಅಂಗಡಿ ಅವರ ಹತ್ತಿರ ಟ್ಯೂಷನ್ ತಗೋತೀವಿ" ಎಂದು ವ್ಯಂಗ್ಯ ಮಾಡಿದ್ದಾರೆ.












Click it and Unblock the Notifications