ನೇಸಲ್ ಕೆನೂಲಾ ಆಕ್ಸಿಜನ್ ಉಪಕರಣ ಬಿಮ್ಸ್ ಗೆ ಸಮರ್ಪಿಸಿದ ಸಿಎಂ ಯಡಿಯೂರಪ್ಪ
ಬೆಳಗಾವಿ, ಆಗಸ್ಟ್ 25: ಕೋವಿಡ್-19 ಸೋಂಕಿತರಿಗೆ ವೆಂಟಿಲೇಟರ್ ಬದಲಾಗಿ ಸುಲಭ ಚಿಕಿತ್ಸೆ ನೀಡಬಹುದಾದ ನಾಲ್ಕು ಹೈ ಫ್ಲೋ ನೇಸಲ್ ಕೆನೂಲಾ ಆಕ್ಸಿಜನ್ ಉಪಕರಣಗಳನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಬಿಮ್ಸ್ ಆಸ್ಪತ್ರೆಗೆ ಸಮರ್ಪಿಸಿದರು.
Recommended Video
ಬೆಳಗಾವಿ ದಕ್ಷಿಣ ಮತ ಕ್ಷೇತ್ರದ ಶಾಸಕ ಅಭಯ್ ಪಾಟೀಲರು ಕೊಡುಗೆಯಾಗಿ ನೀಡಿದ್ದ ಈ ಉಪಕರಣಗಳನ್ನು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯ ಬಳಿಕ ಈ ಉಪಕರಣಗಳನ್ನು ಮುಖ್ಯಮಂತ್ರಿಗಳು ಬಿಮ್ಸ್ ಆಸ್ಪತ್ರೆಗೆ ಅರ್ಪಿಸಿದರು.
ರಾಜ್ಯದಲ್ಲಿ ಮೊದಲ ಬಾರಿ ಈ ಉಪಕರಣವನ್ನು ಶಾಸಕ ಅಭಯ್ ಪಾಟೀಲ ಅವರು ನೀಡಿದ್ದಾರೆ. ಇದೇ ರೀತಿ ಉಳಿದ ಕ್ಷೇತ್ರದ ಶಾಸಕರೂ ಈ ರೀತಿಯ ಹೈ ಫ್ಲೋ ನೇಸಲ್ ಕೆನೂಲಾ ಆಕ್ಸಿಜನ್ ಉಪಕರಣಗಳನ್ನು ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಲಹೆ ನೀಡಿದರು.

ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವತಿಯಿಂದ ಸುತ್ತೋಲೆ ಕೂಡ ಹೊರಡಿಸಲಾಗುತ್ತದೆ ಎಂದರು. ತಮ್ಮ ಅನುದಾನದಲ್ಲಿ ಬಿಮ್ಸ್ ಗೆ ಆಕ್ಸಿಜನ್ ಉಪಕರಣ ಕೊಡುಗೆ ನೀಡಿದ ಶಾಸಕ ಅಭಯ್ ಪಾಟೀಲ ಅವರನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು.












Click it and Unblock the Notifications