Chikkodi Lok Sabha Election 2024 Results Live: ಬಿಜೆಪಿ ಮಣಿಸಿದ ಸತೀಶ್ ಜಾರಕಿಹೊಳಿ ಪುತ್ರಿ, ಸಂಸತ್‌ಗೆ ಆಯ್ಕೆ
ಚಿಕ್ಕೋಡಿ, ಜೂನ್ 04: ತಾಲೂಕು ಕೇಂದ್ರವು ಆಗಿರುವ ಬೆಳಗಾವಿ ಜಿಲ್ಲೆಯ 'ಚಿಕ್ಕೋಡಿ' ಇದು ಲೋಕಸಭಾ ಕ್ಷೇತ್ರವು ಹೌದು. ಇಲ್ಲಿ ಈ ವರ್ಷ ನಡೆದ 2024ರ ಲೋಕಸಭಾ ಚುನಾವಣೆಗೆ ಮೇ 7ರಂದು ಮತದಾನ ಜರುಗಿತು. ಇಲ್ಲಿ ಬರೋಬ್ಬರಿ ಶೇ. 78.66 ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಲಿಂಗಾಯತರು ಅಧಿಕವಾಗಿರುವ ಈ ಕ್ಷೇತ್ರದಲ್ಲಿ ಮತದಾರರು ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಯಾರಿಗೆ ಮಣೆ ಹಾಕಲಿದ್ದಾರೆ? ಎಂಬುದು ಇಂದು ತಿಳಿಯಲಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯಿಂದ ಅಣ್ಣಾಸಾಹೇಬ್ ಜೊಲ್ಲೆ ಮತ್ತು ಕಾಂಗ್ರೆಸ್‌ನಿಂದ ಹಾಲಿ ಸಚಿವ ಸತೀಶ್ ಜಾರಕಿಹೊಳಿಯವರ ಪ್ರಿಯಾಂಕಾ ಜಾರಕಿಹೊಳಿ ಅಖಾಡಕ್ಕೆ ಇಳಿದಿದ್ದಾರೆ. ಇವರಿಬ್ಬರು ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಉಭಯ ನಾಯಕರು ಗೆಲ್ಲಲೇಬೇಕೆಂದು ಪಣ ತೊಟ್ಟಿದ್ದಾರೆ. ಅದಕ್ಕಾಗಿ ಕ್ಷೇತ್ರದ ತುಂಬೆಲ್ಲ ಓಡಾಡಿ ಭರ್ಜರಿ ಪ್ರಚಾರ ನಡೆಸಿದ್ದರು.

ಹಿಂದಿನ ಚಿಕ್ಕೋಡಿ ಲೋಕಸಭಾ ಚುನಾವಣೆ (2019) ಯಲ್ಲಿ ಇದೇ ಬಿಜೆಪಿ ಅಭ್ಯರ್ಥಿ ಅಣ್ಣ ಸಾಹೇಬ್ ಜೊಲ್ಲೆಯವರು ಗೆದ್ದಿದ್ದರು. ಆಗಲೂ ಕಾಂಗ್ರೆಸ್‌ನ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಸೋತಿದ್ದರು. ನಿರಂತರವಾಗಿ ಸೋತಿದ್ದ ಕಾಂಗ್ರೆಸ್ 2014ರಲ್ಲಿ ಗೆದ್ದು, ಕಳೆದ ಬಾರಿ ಮತ್ತೆ ಸೋಲಾಗಿತ್ತು. ಈ ಬಾರಿ ಚಿಕ್ಕೋಡಿ ಅಧಿಕಾರ ಯಾರ ಮುಡಿಗೆ ಎಂಬುದು ಇಂದು ಗೊತ್ತಾಗಲಿದೆ.
ಇಂದಿನ ಚುನಾವಣಾ ಫಲಿತಾಂಶದ ಲೈವ್ ನೇರ ಪ್ರಸಾರ, ಕ್ಷಣ ಕ್ಷಣದ ಮಾಹಿತಿಯನ್ನು ನೀವು 'ಒನ್ ಇಂಡಿಯಾ ಕನ್ನಡ' ವೀಕ್ಷಿಸಬಹುದು.
* ಚಿಕ್ಕೋಡಿ ಕ್ಷೇತ್ರವು ಬಿಜೆಪಿಯ ಭದ್ರಕೋಟೆ ಎನ್ನಬಹುದು. ಲಿಂಗಾಯತರು ಇಲ್ಲಿ ಹೆಚ್ಚಿದ್ದಾರೆ. ಹಲವು ಲಾಭಿ ಬಳಿಕ ಈ ಬಾರಿಯು ಬಿಜೆಪಿಯಿಂದ ಹಾಲಿ ಸಂಸದ ಅಣ್ಣಸಾಹೇಬ್ ಜೊಲ್ಲೆಯವರೇ ಕಣಕ್ಕಿಳಿದಿದ್ದಾರೆ. ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇವರ ವಿರುದ್ಧ ಕಾಂಗ್ರೆಸ್‌ನಿಂದ ಪ್ರಕಾಶ್ ಹುಕ್ಕೇರಿಯವರು ವಿಧಾನಸಭಾ ಚುಣಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ, ಈಗಲೂ ಕಾಂಗ್ರೆಸ್ ಗೆ ಜನ ಆಶೀರ್ವಾದ ಮಾಡಲಿದ್ದಾರೆ ಎಂದು ಅವರು ನಂಬಿಕೆ ಇಟ್ಟಿದ್ದಾರೆ.
* 2019ರಲ್ಲಿ ಪ್ರಕಾಶ್ ಹುಕ್ಕೇರಿ ಅವರಿಗೆ ಸೋಲಾಗಿದೆ. ಆದರೆ ಅದಕ್ಕೂ ಮೊದಲು ರಮೇಶ್ ಕತ್ತಿ ಅವರನ್ನು ಅತೀ ಕಡಿಮೆ ಅಂತರದಲ್ಲಿ ಸೋಲಿಸಿದ್ದರು. ಇದರ ಹೊರತಾಗಿ ಇಲ್ಲಿ ಕಾಂಗ್ರೆಸ್ ಅಷ್ಟಕಷ್ಟಕ್ಕೆ ಎಂಬಂತಿದೆ. ಹೀಗಾಗಿ ಇಲ್ಲಿ ಕಾಂಗ್ರೆಸ್‌ಗೆ ಅಷ್ಟಾಗಿ ಒಲವು ಇಲ್ಲ ಎನ್ನಲಾಗಿದೆ.
* ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಇಲ್ಲಿ ಐದರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಉಳಿದ ಮೂರು ಕ್ಷೇತ್ರಗಳಲ್ಲಿ ಮಾತ್ರವೇ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಲೋಕಸಭಾ ಚುಣಾವಣೆಯಲ್ಲಿ ಈ ರೀತಿ ಆಗದಂತೆ ಬಿಜೆಪಿ ಎಚ್ಚರಿಕೆ ವಹಿಸಿದೆ.
ಪ್ರಿಯಾಂಕಾ ಜಾರಕಿಹೊಳಿಗೆ ಮುನ್ನಡೆ: ಬಿಜೆಪಿಗೆ ಹಿನ್ನಡೆ
ಕ್ಷೇತ್ರದಲ್ಲಿ ಮತ ಎಣಿಕೆ ಆರಂಭವಾಗಿದ್ದು, ಇಲ್ಲಿ 1300 ಮತಗಳಿಂದ ಪ್ರಿಯಾಂಕಾ ಜಾರಕಿಹೊಳಿ ಮುನ್ನಡೆ ಸಾಧಿಸಿದ್ದಾರೆ. ಇವರ ವಿರುದ್ಧ ನಿಂತಿರುವ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆಯವರು ಆರಂಭಿಕವಾಗಿ ಹಿನ್ನಡೆ ಸಾಧಿಸಿದ್ದಾರೆ.
ಪ್ರಿಯಾಂಕಾ ಜಾರಕಿಹೊಳಿ ಬಾರೀ ಮುನ್ನಡೆ
ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಬಾರೀ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಅಣ್ಣಾಸಾಹೇಬ್ ಜೊಲ್ಲೆ ಅವರಿಗಿಂತಲೂ ಬರೋಬ್ಬರಿ 20,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಹಾಲಿ ಸಂಸದರಿಗಿಂತ ಮುನ್ನಡೆಯನ್ನು ನಿರಂತರವಾಗಿ ಕಾಯ್ದುಕೊಂಡಿದ್ದಾರೆ.
ಪ್ರಿಯಾಂಕಾಗೆ 35 ಸಾವಿರ ಮತಗಳ ಮುನ್ನಡೆ
ನಾಲ್ಕನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆ ಆಗಿದೆ.
ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೆಬ್ ಜೊಲ್ಲೆ ಅವರು ಒಟ್ಟು 104189 ಮತ ಪಡೆದು ಹಿಂದಿದ್ದರೆ, ಅವರಿಗಿಂತ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೋಳಿ ಅವರು 126727 ಮತಗಳನ್ನು ಪಡೆದು ನಿರಂತರವಾಗಿ ಮುನ್ನಡೆ ಸಾಧಿಸಿದ್ದಾರೆ. ಪ್ರಿಯಂಕಾ ಅವರು 35 ಸಾವಿರ ಮತಗಳ ಅಂತರ ಕಾಯ್ದುಕೊಂಡಿದ್ದಾರೆ.
43453 ಮತಗಳಿಂದ ಮುಂದಿರುವ ಕಾಂಗ್ರೆಸ್
ಬೆಳಗ್ಗೆ 11.20 ಗಂಟೆವರೆಗೆ ಚಿಕ್ಕೋಡಿಯಲ್ಲಿ ಕಾಂಗ್ರೆಸ್ ಪ್ರಿಯಾಂಕಾ ಜಾರಕಿಹೊಳಿಯವರು ಬಿಜೆಪಿ ಹಾಲಿ ಸಂಸದರ ವಿರುದ್ಧ 43453 ಮತಗಳ ಅಂತದಲ್ಲಿ ಮುಂದಿದ್ದಾರೆ. ಸದ್ಯ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ್ ಜೊಲ್ಲೆಯವರಿಗೆ 181722 ಮತಗಳು, ಪ್ರಿಯಾಂಕಾ ಅವರು ಬರೊಬ್ಬರಿ 225175 ಮತಗಳಿಂದ ಮುಂದಿದ್ದಾರೆ.
ಫಲಿತಾಂಶಕ್ಕೂ ಮೊದಲೇ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ
ಕಾಂಗ್ರೆಸ್ ಪಕ್ಷದ ಪ್ರಿಯಾಂಕಾ ಜಾರಕಿಹೋಳಿ ಸತತವಾಗಿ ಚಿಕ್ಕೋಡಿಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ ಅಬ್ಯರ್ಥಿ ಅಣ್ಣಾಸಾಬ ಜೊಲ್ಲೆ ಅವರು ನಿಂತರವಾಗಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಚಿಕ್ಕೋಡಿ ಆರ್ ಡಿ ಕಾಲೇಜು ಎದುರು ಕೈ ಕಾರ್ಯಕರ್ತರ ಸಂಭ್ರಮ ಶುರು ಮಾಡಿದ್ದಾರೆ. ಮುನ್ನಡೆ ಘೋಷಣೆ ಆಗುತ್ತಿದ್ದ ಪ್ರಿಯಾಂಕಾ ಜಾರಕಿಹೋಳಿ ಪರ ಕಾರ್ಯಕರ್ತರು ಕೈಕಾರ ಹಾಕುತ್ತಿದ್ದಾರೆ.
ಕಾಂಗ್ರೆಸ್ ಪರ ಸಂಭ್ರಮಾಚರಣೆ: ಪಾಕ್ ಪರ ಘೋಷಣೆ?
ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಮುನ್ನಡೆ: ಕಾಂಗ್ರೆಸ್ ವಿಜಯೋತ್ಸವ ವೇಳೆ ಪಾಕಿಸ್ತಾನ ಪರ ಘೋಷಣೆ. ಪೋಲಿಸರ ಸಮ್ಮುಖದಲ್ಲಿ ವ್ಯಕ್ತಿಯೊಬ್ಬರ ದೇಶ ದ್ರೋಹ ಘೋಷಣೆ ಕೂಗಿದ್ದಾನೆ. ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಹಿನ್ನೆಲೆಯಲ್ಲಿ ಪ್ರಿಯಾಂಕಾ ಜಾರಕಿಹೊಳಿ ಪರ ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಲಾಗುತ್ತಿತ್ತು. ಈ ವೇಳೆ ಘಟನೆ ನಡೆದಿದೆ. ಚಿಕ್ಕೋಡಿಯಲ್ಲಿ ಬಿಜೆಪಿಯ ಅಣ್ಣ ಸಾಹೇಬ್ ಜೊಲ್ಲೆ ನಿರಂತರವಾಗಿ ಹಿನ್ನಡೆ ಅನುಭವಿಸುತ್ತಿದ್ದಾರೆ.
ಕಾಂಗ್ರೆಸ್‌ಗೆ ಚಿಕ್ಕೋಡಿ ಅಧಿಕಾರ
ಚಿಕ್ಕೋಡಿ ಲೋಕಸಭಾ ಚುನಾವಣೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರು ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಗೆದ್ದು ಬೀಗಿದ್ದ ಬಿಜೆಪಿಗೆ ಕಾಂಗ್ರೆಸ್ ಆಘಾತ ನಡಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿ ಅಣ್ಣಾಸಾಹೇಬ್ ಜೊಲ್ಲೆ ಅವರು ಅತ್ಯಧಿಕ ಮತಗಳಿಂದ ಸೋಲುಂಡಿದ್ದಾರೆ. ಸಂಜೆ ಚುನಾವಣೆ ಆಯೋಗದಿಂದ ಅಧಿಕೃತ ಘೋಷಣೆ ಆಗುತ್ತದೆ.
ಬಿಜೆಪಿ ವಿರುದ್ಧ 90834 ಮತಗಳಿಂದ ಕಾಂಗ್ರೆಸ್ ಜಯ
ಪ್ರಿಯಾಂಕಾ ಜಾರಕಿಹೊಳಿ ಅವರು 713461 ಬಹುಮತ ಗಳಿಸಿ ಬಿಜೆಪಿಯ ಹಾಲಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆಯವರನ್ನು ಮಣಿಸಿದ್ದಾರೆ. ಬಿಜೆಪಿ ಅಭ್ಯರ್ಥಿಗೆ 622627 ಮತಗಳು ಬಂದಿವೆ. ಇವರಿಬ್ಬರು ಮಧ್ಯೆ ಬರೋಬ್ಬರಿ 90834 ಮತಗಳ ಅಂತರ ಇದ್ದು, ಇದೇ ಮೊದಲ ಬಾರಿಗೆ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಸಂಸತ್‌ಗೆ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಆಯೋಗದ ವೆಬ್‌ಸೈಟ್ ಮಾಹಿತಿ ನೀಡಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications