ಸಂಪುಟ ವಿಸ್ತರಣೆ ಯಾವಾಗ? ಸ್ಪಷ್ಟನೆ ನೀಡಿದ ಯಡಿಯೂರಪ್ಪ

ಬೆಳಗಾವಿ, ಆಗಸ್ಟ್ 11: ಇದೇ ತಿಂಗಳ 15ನೇ ತಾರೀಖಿನ ನಂತರ ಸಚಿವ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಪಕ್ಷದ ವರೀಷ್ಠರು ಸೂಚನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಬೆಳಗಾವಿಯಲ್ಲಿ ಪ್ರವಾಹ ಪರಿಸ್ಥಿತಿ ವೈಮಾನಿಕ ಸಮೀಕ್ಷೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿರುವುದರಿಂದ ಮೊದಲು ಪರಿಹಾರ ಹಾಗೂ ಸಂತ್ರಸ್ತರ ಪುನರ್ವಸತಿಗೆ ಆದ್ಯತೆ ನೀಡಬೇಕು‌ ಹಾಗಾಗಿ ಸಂಪುಟ ವಿಸ್ತರಣೆ ತಡವಾಗಿದೆ ಎಂದರು.

ಯಡಿಯೂರಪ್ಪ ಸಂಪುಟ ರಚನೆ ವಿಳಂಬಕ್ಕೆ 'ಕೆಜೆಪಿ' ಎಫೆಕ್ಟ್ ಕಾರಣ?
ವರೀಷ್ಠರ ಸೂಚನೆಯಂತೆ ಆಗಸ್ಟ್ 15 ರವರೆಗೆ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಆಗಸ್ಟ್ 16 ರಂದು ನವದೆಹಲಿಗೆ ತೆರಳಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

Cabinet Expansion Will Be Done After August 15: Yeddyurappa

ಯಡಿಯೂರಪ್ಪ ಅವರು ಸಿಎಂ ಆಗಿ ಜುಲೈ 26 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು ಆದರೆ ಈ ವರೆಗೆ ಸಂಪುಟ ವಿಸ್ತರಣೆ ಆಗಿಲ್ಲ. ಈ ಮಧ್ಯೆ ರಾಜ್ಯದ ಹಲವೆಡೆ ಪ್ರವಾಹ ತಲೆದೂರಿದ್ದರಿಂದ ಸಂಪುಟ ವಿಸ್ತರಣೆಯನ್ನು ಮುಂದೂಡಲಾಯಿತು.

ಇದೀಗ ಸಂಪುಟ ವಿಸ್ತರಣೆಯ ದಿನಾಂಕ ಪಕ್ಕಾ ಆಗಿದ್ದು, ಆಗಸ್ಟ್ 16 ರಂದು ದೆಹಲಿಗೆ ತೆರಳುವ ಯಡಿಯೂರಪ್ಪ, ಹೈಕಮಾಂಡ್ ಜೊತೆ ಚರ್ಚೆ ಬಳಿಕ ಆಗಸ್ಟ್ 18 ರಂದು ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+