ಪಾಕಿಸ್ತಾನ್ ಕಿ ಜೈಹೊ ಎಂದು ಪೋಸ್ಟ್ ಮಾಡಿದ ಬೆಳಗಾವಿ ಶಿಕ್ಷಕಿ ಪೊಲೀಸರ ವಶಕ್ಕೆ
ಬೆಳಗಾವಿ, ಫೆಬ್ರವರಿ 17:ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ದೇಶದ್ರೋಹಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಸ್ಥಳೀಯರು ಟೈಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ
ಯರಗಟ್ಟಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಡಬಿ- ಶಿವಾಪೂರ ಗ್ರಾಮದ ಜೀಲೇಕಾ ಮಮದಾಪುರ್ ಎಂಬ ಯುವತಿ ಫೇಸ್ ಬುಕ್ ಮತ್ತು ವಾಟ್ಸ್ ಆಪ್ ನಲ್ಲಿ ಪಾಕಿಸ್ತಾನದ ಧ್ವಜ ಹಾಕಿ, ಪಾಕಿಸ್ತಾನ ಕಿ ಜೈಹೊ ಎಂದು ಪೋಸ್ಟ್ ಮಾಡಿದ್ದಾಳೆ.

ವಾಟ್ಸ್ ಆಪ್ ಡಿಪಿಯಲ್ಲಿ ಕೂಡ ಪಾಕಿಸ್ತಾನ ಧ್ವಜ ಹಾಕಿಕೊಂಡಿದ್ದಾಳೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಯುವತಿ ಮನೆಗೆ ಕಲ್ಲು ತೂರಾಟ ನಡೆಸಿ, ಮನೆಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಜೀಲೆಕಾಳನ್ನು ಮುರಗೋಡ ಪೊಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications