• search
  • Live TV
ಬೆಳಗಾವಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶರಣ್ರೀ..ಮಹಾಮೇಳಾವ ಫ್ಲಾಶ್ ಬ್ಯಾಕ್ ಓದ್ರಲ್ಲಾ

By ಏನ್ಗುರು ಬ್ಲಾಗ್
|

ಶರಣ್ರೀ ಸಾಹೇಬ್ರಾ... ನೀವಾರ ಈ ಮಂದೀಗ ತುಸಾ ಬುದ್ದೀ ಹೇಳ್ರಲಾ... ನಮ್ ಬೆಳಗಾವಿಯಾಗ ಸರ್ಕಾರ ವಿಧಾನಸಭಾ ಅಧಿವೇಶನಾ ನಡ್ಸಾಕ್ ಮುಂದಾಗಾರಾ ಅಂದ್ ಕೂಡ್ಲಾ ತಿಗಿಣಿ ಕಡ್ದಾಂಗ್ ಆಡಾಕ್ ಹತ್ಯಾರಾ! ಕರ್ನಾಟಕದ ವಿಧಾನ ಸಭಾ ಅಧಿವೇಶನ ನಡ್ಯೂ ದಿನಾನ ನಾವು 'ಮಹಾಮೇಳಾವ' ಮಾಡ್ತೇವ ಅಂತ ಹಟ ಹಿಡ್ಕೊಂಡ್ ಕುಂತಾರಾ ಈ ಎಂಇಎಸ್ ಮಂದಿ.

ಇದಾ ಮೊದಲಲ್ಲಾ...

ಬೆಳಗಾವೀನಾ ಮಾರಾಷ್ಟ್ರಾದೊಳಗ ಸೇರಿಸೋಣು ಅನ್ನೊ ಹಟ ಹಿಡ್ದಿರೋ ಮಹಾರಾಷ್ಟ್ರ ಏಕೀಕರಣ ಸಮಿತಿ ಮಂದಿ, ಹೀಂಗ್ ಆಡ್ತಿರೋದೂ ಇದಾ ಮೊದಲಲ್ರೀ ಸರಾ... [ಮೊದಲ ದಿನದ ಕಲಾಪದ ಮುಖ್ಯಾಂಶ]

ಹಿಂದ ಎಮ್.ಇ.ಎಸ್ ಮೋರೆಗೆ ಮಸಿ ಬಳ್ದಾಗಿಂದ ಬಾಲ ಸುಟ್ಟ ಬೆಕ್ಕಂಗಾಗಿರೋ ಎಂ.ಇ.ಎಸ್ ಮಂದಿ 2006, ಸೆಪ್ಟೆಂಬರ್ 25ಕ್ಕ ಕುಮಾರಸ್ವಾಮಿಗೋಳ ಸರ್ಕಾರ, ಮೊದಲ ಸರತಿ ಬೆಳಗಾವ್ಯಾಗ ಕರ್ನಾಟಕ ವಿಧಾನ ಮಂಡಲದ ಅಧಿವೇಶನಕ್ ಮುಂದಾದಾಗ ಈ ಮಹಾಮೇಳಾವ ನಡ್ಸಿದ್ರುರೀಪಾ. ಆಗ ಮಾರಾಷ್ಟ್ರದ ಉಪಮುಖ್ಯಮಂತ್ರಿ ಹುದ್ಯಾಗ್ ಕುಂತಿದ್ ಆರ್.ಆರ್.ಪಾಟೀಲ ಸಾಯೇಬ್ರು ಬೆಳಗಾವಿಗ್ ಬಂದು ಹುಳಿ ಹಿಂಡೊ ಬಾಷಣ ಮಾಡಿದ್ರುರೀ. ಹೀಂಗಾ ಕರ್ನಾಟಕದೊಳಗ ನಿಂತು ಕನ್ನಡ ನಾಡ್ ಒಡೀತೀವಿ ಅಂದ್ರೂ, ಕರ್ನಾಟಕ ಸರ್ಕಾರ ಸುಮ್ಮನ ಗಪ್ ಕೂಡ್ತೈತ್ ಅಂದ್ರ ಏನ್ ಬಡ್ಕೊಬೇಕ್ರೀಪಾ?

ಪಾಕಿಗಿಂತ ಹೊಲಸು ಕನ್ನಡನಾಡು ಅಂದ ಮಹಾಮೇಳವಾ!

ಆ ಸಭಾಗ ಭಾಳ ಮಂದೀನ ಕರ್ಕೊಂಡು ಬಂದಿದ್ರು, ಅದು ಜನರ ಅಭಿಪ್ರಾಯ ಅನ್ನೋದಾದ್ರಾ... ಹಾಂಗ ಜನಾಭಿಪ್ರಾಯ ತೋರ್ಸಕ್ಕ ಕನ್ನಡ ಮಂದಿಗೂ ಅವಕಾಶ ಕೊಡಬೇಕು, ಹೌದಲ್ಲೋ? ಹಿಂದಿನ ಸಾರ್ತಿ ಮಹಾಮೇಳವದಾಗ ಆರ್.ಆರ್.ಪಾಟೀಲ್ರು ಅಂದದ್ದಾರ ಏನ್ ಗೊತ್ತನು? "ಈ ಕರ್ನಾಟಕ ಸರ್ಕಾರ ಪಾಕಿಸ್ತಾನದ ಸೈನ್ಯಕ್ಕಿಂತ ಹೊಲಸದಾ" "ನಿಪ್ಪಾಣಿ, ಖಾನಾಪುರಾ, ಬೆಳಗಾವಿಯಾಗ ಕೇಂದ್ರ ಸರ್ಕಾರದ ಆಡಳಿತ ಹೇರಬೇಕು" ಅಂತ ನಾಲ್ಗಿ ಮ್ಯಾಗಿನ ಹಿಡ್ತ ಇಲ್ಲದೋರಂಗ ವದರಿದ್ದರೀ. [ಬೆಳಗಾವಿ ಅಧಿವೇಶನ ಹೋರಾಟಗಳ ಕರ್ಮಭೂಮಿ!]

ಒಂದು ರಾಜ್ಯದ ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ಇರೋ ಮನಷಾ ಹೀಂಗ್ ಹುಚ್ಚರ ಗತಿ ಮಾತಾಡ್ತಾರಾ ಅಂದ್ರಾ ಅಂಥಾ ಮಾತು ನಾಡಿನ ಭಾಷಾ ಸಾಮರಸ್ಯ ಕದಡೋ ಕೆಲಸಾ ಅಲ್ಲನು? ಇಂಥಾ ಮನಶಾನ್ನ ಮತ್ ಕರ್ಸಿ ವಿಧಾನ ಸಭಾ ಅಧಿವೇಶನದ ದಿನಾ ಗಲಭಿ ಮಾಡ್ಸಿ ಸಭಾ ಮಾಡ್ತೀವಿ ಅನ್ನೋ ಮಹಾಮೇಳಾವಾಗ ಹ್ಯಾಂಗಾರಾ ಅನುಮತಿ ಕೊಡ್ತಾರಾ?

ಯಾ ಮಂದಿ, ಎಲ್ಲಾರಾ ಸಭಿ ಮಾಡಬೋದು ಅನ್ನೋದು ಖರೀ ಆದ್ರೂ ವಿಧಾನ ಸಭಾ ಅಧಿವೇಶನದ ದಿನಾನಾ ಮಾಡಕ್ ಎದುಕ್ ಅವಕಾಶ ಕೊಡಕ್ ಮುಂದಾಗ್ತಾರಾ? ಅದೂ ನಾವಾ ಜಗಾ ಕೊಟ್ಟು ನಮ್ ಮಾರೀಗಾ ಉಗೀರಿ ಅಂದಂಗಲ್ಲೇನು ಮತ್ತಾ? ಇಂಥಾ ಸಭಿಗಾ ಅನುಮತಿ ಕೊಡ್ಸಕ್ ಮುಂದಾಗಿರೋದೂ ಹಿಂದೂವಾದಿ ರಾಷ್ಟ್ರೀಯ ಪಕ್ಷದಂವಾ ಆಗಿರೂ ಒಬ್ಬ ಅಚ್ಚ ಕನ್ನಡದ ಸಂಸದ ಅನ್ನೂ ಮಾತ ಬೆಳಗಾವಿ ತುಂಬೆಲ್ಲಾ ಹೊಗಿಯಾಡ್ತೈತ್ರೀಪಾ.

ಅಂವಾ ಮುಂದಾ ಲೋಕಸಭಾ ಚುನಾವಣೀಗ ಮರಾಠಿಗರ ಮತಗ್ ಲ್ಲಕ್ ಹೀಂಗ್ ಮಾಡಾಕ್ ಹತ್ಯಾರಾ ಅಂತ ಮಂದಿ ಪಿಸುಗುಡಕ್ ಹತ್ಯಾರಾ. ನೀವಾ ಹೇಳ್ರಲಾ? ಇದು ಹೀಂಗ ಆಗೋದ್ ಸರಿ ಏನಾ? ಹಾಂಗಾಂದ್ರಾ ಆವತ್ತೇ ಕನ್ನಡ ಮಂದೀ ಜಾಗೃತಿ ಸಮಾವೇಶ ಮಾಡಾಕ್ ಬಿಡ್ತಾರೇನೂ, ಈ ಸರ್ಕಾರದೋರೂ? ಇಲ್ಲಾ ಗಲಭಿ ಆಗ್ತೈತಿ ಕೊಡಾಂಗಿಲ್ಲಾ ಅಂದ್ರ ಈಗ ಎಂಇಎಸ್ ಮಂದೀಗೂ ಕೊಡಾಕ್ ಬರಾಂಗಿಲ್ಲಾ... ಹೌದಲ್ರೀ ಗುರುಗಳಾ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Belagavi Karnataka Winter Session and MES Mahamelav a re call by enguru blog.The MES has been holding such rallies since 2006 when the state legislature met for the first time in Belagavi without any success.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more