ಬೆಳಗಾವಿಯ ಧರೆಪ್ಪನಿಗೆ ಹುಡುಗಿಯರ ಮೊಬೈಲ್ ನಂಬರ್ ಸಿಕ್ಕರೆ ಆಡಿದ್ದೇ ಆಟ

ಬೆಳಗಾವಿ, ಡಿಸೆಂಬರ್ 1: ಈ ವರದಿಯನ್ನು ಫೂರ್ತಿಯಾಗಿ ಓದಿದ ಮೇಲೆ ಹೆಣ್ಣುಮಕ್ಕಳು ಯಾವ ತೀರ್ಮಾನ ತೆಗೆದುಕೊಳ್ಳಬೇಕು ಅನ್ನೋದನ್ನು ಓದುಗರೇ ನಿರ್ಧರಿಸಬೇಕು. ಈ ವ್ಯಕ್ತಿ ಹೇಗೆಂದರೆ, ಹುಡುಗಿಯರ ಮೊಬೈಲ್ ನಂಬರ್ ಸಿಕ್ಕರೆ ಮೆಸೇಜ್, ಚಾಟಿಂಗ್ ಶುರು ಮಾಡುತ್ತಾನೆ. ಪರಿಚಯ ಮಾಡಿಕೊಂಡು, ಪ್ರೀತಿ- ಪ್ರೇಮದ ನಾಟಕವಾಡಿ ಮೊಬೈಲ್ ನಲ್ಲಿ ಫೋಟೊ ತೆಗೆದುಕೊಳ್ಳುತ್ತಾನೆ.

ಹುಡುಗಿಯರೊಂದಿಗೆ ಆಪ್ತವಾಗಿರುವ ಫೋಟೊ ತೆಗೆದುಕೊಳ್ಳುತ್ತಾನೆ, ಅವುಗಳನ್ನು ಪೆನ್ ಡ್ರೈವ್ ನಲ್ಲಿ ಸೇವ್ ಮಾಡಿಟ್ಟುಕೊಳ್ಳುತ್ತಾನೆ. ಇಂಥ ವಂಚಕನ ಬಣ್ಣ ತನ್ನ ಹೆಂಡತಿ ಎದುರೇ ಬಯಲಾಗಿದೆ. ಆತನ ಹೆಸರು ಧರೆಪ್ಪ ಕಂಕಣವಾಡಿ. ಹೆಸರಲ್ಲಿರುವ ಕಂಕಣ ಎಂಬ ಪದವನ್ನು ಅದೇನು ಎಂದು ಅರ್ಥ ಮಾಡಿಕೊಂಡನೋ ಏನೋ, ಅಂತೂ ಈಗ ಧರೆಪ್ಪನ ಕಾಮಪುರಾಣ ಬೀದಿಗೆ ಬಿದ್ದಿದೆ.

‌ಬೆಳಗಾವಿ ಜಿಲ್ಲೆಯ ಕಂಕಣವಾಡಿ ಗ್ರಾಮದ ಯುವಕ ಧರೆಪ್ಪ. ಇದೀಗ ಇಂದಿರಾ ಕಂಕಣವಾಡಿ ಎಂಬ ಮಹಿಳೆಯಿಂದ ಸಾಕ್ಷಿ ಸಮೇತ ಗಂಡ ಧರೆಪ್ಪನ ಅಸಲಿ ಮುಖವಾಡ ಬಯಲಾಗಿದೆ. 2011ನೇ ಇಸವಿಯಲ್ಲಿ ಇಂದಿರಾಳನ್ನು ಪ್ರೇಮವಿವಾಹ ಆಗಿರುವ ಧರೆಪ್ಪ ಕಂಕಣವಾಡಿ, ಆಕೆಯನ್ನೂ ಹೀಗೆ ಮೆಸೇಜ್ ಮಾಡಿ, ಪರಿಚಯಿಸಿಕೊಂಡು, ಪ್ರೀತಿಸಿ, ನಂತರ ಮದುವೆ ಆಗಿದ್ದ.

Crime

ಇಂದಿರಾ ಮನೆಯವರ ವಿರೋಧದ ಮಧ್ಯೆಯೂ ತನ್ನ ಕುಟುಂಬದವರನ್ನು ಒಪ್ಪಿಸಿ, ವಿವಾಹವಾಗಿದ್ದ ಧರೆಪ್ಪ. ಮದುವೆಯಾಗಿ ಆರು ವರ್ಷಕ್ಕೆ ಬಯಲಾಯಿತು ಧರೆಪ್ಪನ ಅಸಲಿ ಮುಖ. ಪತಿಯ ಮೊಬೈಲ್ ಹಾಗೂ ಪೆನ್ ಡ್ರೈವ್ ನೋಡಿದಾಗ ಬೇರೆ ಹುಡುಗಿಯರೊಂದಿಗೆ ಇರುವ ಫೋಟೊಗಳು, ಕಾಲ್ ರೆಕಾರ್ಡಿಂಗ್ಸ್, ವಾಟ್ಸಪ್ ಸ್ಕ್ರೀನ್ ಶಾಟ್ಸ್ ಪತ್ತೆಯಾಗಿತ್ತು.

ಫೋಟೊಗಳು, ಕಾಲ್ ರೆಕಾರ್ಡಿಂಗ್ಸ್, ವಾಟ್ಸಪ್ ಸ್ಕ್ರೀನ್ ಶಾಟ್ಸ್ ಸಂಗ್ರಹಿಸಿಟ್ಟುಕೊಂಡಿದ್ದ ಧರೆಪ್ಪ ಹುಡುಗಿಯರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದನಾ ಎಂಬ ಅನುಮಾನ ಮೂಡುತ್ತಿದೆ. ಗಂಡ ಧರೆಪ್ಪನ ವಿರುದ್ಧ ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಪತ್ನಿ ಇಂದಿರಾ. ದೂರು ಹಿಂತೆಗೆದುಕೊಳ್ಳುವಂತೆ ಪತಿ ಧರೆಪ್ಪ ಹಾಗೂ ಆತನ ಕುಟುಂಬದವರು ಧಮ್ಕಿ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+