ಬೆಳಗಾವಿ-ಬೆಂಗಳೂರು ವಿಶೇಷ ರೈಲು ಅಕ್ಟೋಬರ್ ತನಕ ವಿಸ್ತರಣೆ

ಬೆಳಗಾವಿ, ಜುಲೈ 10 : ಬೆಳಗಾವಿ-ಬೆಂಗಳೂರು ವಿಶೇಷ ಸೂಪರ್ ಫಾಸ್ಟ್ ರೈಲಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೈಋತ್ಯ ರೈಲ್ವೆ ವಿಶೇಷ ರೈಲಿನ ಪ್ರಾಯೋಗಿಕ ಸಂಚಾರವನ್ನು 2019ರ ಅಕ್ಟೋಬರ್ 31ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಜೂನ್ 29 ಬೆಳಗಾವಿ-ಬೆಂಗಳೂರು ವಿಶೇಷ ಸೂಪರ್ ಫಾಸ್ಟ್ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿತ್ತು. ಶೇ 95ಕ್ಕಿಂತ ಹೆಚ್ಚು ಆಸನಗಳು ಭರ್ತಿ ಆಗುತ್ತಿದ್ದು, ಜನರಿಂದ ರೈಲು ಸೇವೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಆದ್ದರಿಂದ ಒಂದು ತಿಂಗಳಿಗೆ ಸೀಮಿತವಾಗಿದ್ದ ಸೇವೆಯನ್ನು ಅಕ್ಟೋಬರ್ ತನಕ ವಿಸ್ತರಣೆ ಮಾಡಲಾಗಿತ್ತು.

ಬೆಳಗಾವಿ-ಬೆಂಗಳೂರು ನಡುವಿನ ಸುಮಾರು 610 ಕಿ.ಮೀ.ದೂರವನ್ನು ಈ ವಿಶೇಷ ರೈಲು 10 ಗಂಟೆಗಳಲ್ಲಿ ಕ್ರಮಿಸಲಿದೆ. ಆದ್ದರಿಂದ, ಜನರು ಬಸ್ ಸೇವೆಗಿಂತ ಈ ರೈಲು ಸೇವೆಯನ್ನು ಹೆಚ್ಚು ಬಳಸುತ್ತಿದ್ದು, ಪ್ರಯಾಣಿಕರಿಂದ ರೈಲು ತುಂಬಿದೆ.

Belagavi-Bengaluru tatkal train service extended till October 2019

852 ಜನರು ಪ್ರಯಾಣ ಮಾಡಬಹುದಾದ ರೈಲಿನಲ್ಲಿ ಜುಲೈ 1ರಂದು 732 ಜನರು, ಜುಲೈ 7ರಂದು 845 ಜನರು ಪ್ರಯಾಣ ಮಾಡಿರುವುದು ದಾಖಲೆಯಾಗಿದೆ. ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಸಹ ರೈಲು ಭರ್ತಿಯಾಗಿ ಸಂಚಾರ ನಡೆಸುತ್ತಿದೆ.

ವಾರಾಂತ್ಯದಲ್ಲಿ ಖಾಸಗಿ ಬಸ್‌ಗಳಲ್ಲಿ ಬೆಂಗಳೂರು-ಬೆಳಗಾವಿ ನಡುವಿನ ದರ ಹೆಚ್ಚಾಗಿರುತ್ತದೆ. ಆದ್ದರಿಂದ, ರೈಲು ಸೇವೆಯತ್ತ ಜನರು ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಬೆಳಗಾವಿ ಮತ್ತು ಹುಬ್ಬಳ್ಳಿಗೆ ತೆರಳುವ ಜನರೇ ಹೆಚ್ಚಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ.

ರೈಲಿನ ಪ್ರಯಾಣ ದರ : ಬೆಂಗಳೂರು-ಬೆಳಗಾವಿ ವಿಶೇಷ ರೈಲಿನಲ್ಲಿ 2 ಟೈರ್ ಎಸಿ ಪ್ರಯಾಣ ದರ 1,755 ರೂ., 3 ಟೈರ್ ಎಸಿ ಪ್ರಯಾಣ ದರ 1,235 ರೂ., ಸ್ಲೀಪರ್ ಕ್ಲಾಸ್‌ಗೆ 465 ರೂ. ದರವಿದೆ. ಬೆಳಗಾವಿಯಿಂದ ರಾತ್ರಿ 9ಕ್ಕೆ ಹೊರಡುವ ರೈಲು ಬೆಳಗ್ಗೆ 7 ಗಂಟೆಗೆ ಬೆಂಗಳೂರು ತಲುಪುತ್ತಿದೆ. ಬೆಂಗಳೂರಿನಿಂದ ರಾತ್ರಿ 9ಕ್ಕೆ ಹೊರಟು ಬೆಳಗ್ಗೆ 7ಕ್ಕೆ ಬೆಳಗಾವಿಗೆ ತಲುಪುತ್ತಿದೆ.

ನಿಲ್ದಾಣಗಳು : ಬೆಳಗಾವಿಯಿಂದ ಹೊರಡುವ ರೈಲು ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ಅರಸೀಕೆರೆ, ತುಮಕೂರು, ಯಶವಂತಪುರ ಮಾರ್ಗವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ತಲುಪುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+