ಬೆಳಗಾವಿ: ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಗೆ ಪತಿ ಚಿತ್ರಹಿಂಸೆ!
ಬೆಳಗಾವಿ, ಮಾರ್ಚ. 27 : ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿ ಪತ್ನಿಗೆ ನೀಚ ಪತಿರಾಯನೊಬ್ಬ ಚಿತ್ರಹಿಂಸೆ ಕೊಡುತ್ತಿದ್ದ ಪ್ರಕರಣ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂಜೀವ ಭಾಗೋಜಿ ಎಂಬಾತ ಪ್ರತಿದಿನ ತನ್ನ ಪತ್ನಿಗೆ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ತೋರಿಸಿತ್ತಿದದನಲ್ಲದೆ ನಾಯಿ ಜತೆನೂ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಮಾಡಿದ್ದಾನೆ. ಪತಿಯ ಈ ವಿಕೃತಿಯನ್ನು ನಿರಾಕರಿಸಿದಕ್ಕೆ ಪ್ರತಿದಿನ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ.[ಅಣ್ಣನೊಂದಿಗೆ ಸಂಭೋಗಿಸಲು ಹೇಳಿದ ಗಂಡನ ಹತ್ಯೆ!]

ಮತ್ತೆ ಭಾನುವಾರ ತನ್ನ ಪತ್ನಿಗೆ ನಾಯಿ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ನಿರಾಕರಿಸಿದಕ್ಕೆ ಪತ್ನಿ ಮತ್ತು ತನ್ನ ಎರಡು ಮಕ್ಕಳನ್ನು ಮನೆಯಿಂದ ಹೊರ ಹಾಕಿದ್ದಾನೆ.
ಇದರಿಂದ ರೋಸಿ ಹೋದ ಮಹಿಳೆ ಗಂಡನ ವಿರುದ್ಧ ಪೊಲೀಸ್ ಮೆಟ್ಟಿಲೇರಿದ್ದಾಳೆ. ಕಟಕೋಳ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ498( A),377,504,506 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ವಿಕೃತಕಾಮಿ ಆರೋಪಿ ಸಂಜೀವನನ್ನು ಬಂಧಿಸಿದ್ದಾರೆ.
ಸಧ್ಯ ಸಂತ್ರಸ್ತೆ ಮಹಿಳೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತದೆ.












Click it and Unblock the Notifications