'ಜಂಗಮರು ಶಾಪ ಹಾಕುತ್ತಿದ್ದೇವೆ': ಸಿಎಂ ಬೊಮ್ಮಾಯಿ ಅಧಿಕಾರ ಕಳೆದುಕೊಳ್ಳಲಿದ್ದಾರೆ!

ಬೆಳಗಾವಿ, ಡಿ 21: ಒಂದು ಕಡೆ ಎಂಇಎಸ್ ಪುಂಡರು, ಇನ್ನೊಂದು ಕಡೆ ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ಶಿವಸೇನೆ ಕಾರ್ಯಕರ್ತರ ದಬ್ಬಾಳಿಕೆ, ಇನ್ನೊಂದು ಕಡೆ ಚಳಿಗಾಲದ ಅಧಿವೇಶನ. ಈ ರೀತಿಯ ಹತ್ತು ಹಲವಾರು ಸಮಸ್ಯೆಗಳಿಂದ ಬಹುಷಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಿದ್ದೆಯಿಲ್ಲದ ರಾತ್ರಿಯನ್ನು ಕಳೆದಿರಬಹುದು.

ಇದೆಲ್ಲಾ ಒಂದು ಕಡೆಯಾದರೆ, ಮತಾಂತರ ನಿಷೇಧ ಕಾಯಿದೆಯನ್ನು ಸರಕಾರ ಅಧಿವೇಶನದಲ್ಲಿ ಮಂಡಿಸಿದೆ. ನಾಳೆ ಸ್ಪೀಕರ್ ಕಾಗೇರಿಯವರು ಚರ್ಚೆಗೆ ಅವಕಾಶವನ್ನು ನೀಡಿದ್ದಾರೆ. ಕಾಯಿದೆಯ ಕರಡು ಪ್ರತಿ ಕೈಗೆ ಸಿಕ್ಕ ಕೂಡಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅದನ್ನು ಹರಿದು ಬಿಸಾಕಿದ್ದಾರೆ. ಬಿಲ್ ಅನ್ನು ಸದನದಲ್ಲಿ ಮಂಡಿಸಿದ ರೀತಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಕೂಡಾ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ನಾಳೆ ಈ ಸಂಬಂಧ ಸದನದಲ್ಲಿ ಚರ್ಚೆ ನಡೆಯಲಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ದೊಡ್ಡ ಮಟ್ಟದ ತಿಕ್ಕಾಟ ನಡೆಯುವ ಸಾಧ್ಯತೆಯಿದೆ. ಮತ್ತೊಂದು ಕಡೆ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಜೊತೆ ಮೊಟ್ಟೆ ನೀಡುತ್ತಿರುವ ಸರಕಾರದ ಕ್ರಮವನ್ನು ಕೆಲವು ಸಮುದಾಯದ ಪೀಠಾಧಿಪತಿಗಳು ತೀವ್ರವಾಗಿ ಖಂಡಿಸುತ್ತಿದ್ದಾರೆ. ಈ ಸಂಬಂಧ, ದೊಡ್ಡ ಪ್ರತಿಭಟನೆಯೂ ನಡೆದಿದೆ.

ಇಂತದ್ದೊಂದು ವಿದ್ಯಮಾನ ಬೆಳಗಾವಿಯಲ್ಲಿ ಸೋಮವಾರ (ಡಿ 20) ನಡೆದಿದ್ದು, ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಮೆರವಣಿಗೆಯನ್ನು ಅಡ್ಡಪಡಿಸಿದ್ದಕ್ಕಾಗಿ, ಪೀಠಾಧಿಪತಿಗಳು ಸರಕಾರ ಮತ್ತು ಪೊಲೀಸ್ ಇಲಾಖೆಯ ವಿರುದ್ದ ಫುಲ್ ಗರಂ ಆಗಿದ್ದಾರೆ.

 ಕೂಡಲಸಂಗಮ ಬಸವ ಧರ್ಮ ಪೀಠದ ಬಸವಪ್ರಕಾಶ ಸ್ವಾಮೀಜಿ

ಕೂಡಲಸಂಗಮ ಬಸವ ಧರ್ಮ ಪೀಠದ ಬಸವಪ್ರಕಾಶ ಸ್ವಾಮೀಜಿ

ಕೂಡಲಸಂಗಮ ಬಸವ ಧರ್ಮ ಪೀಠದ ಬಸವಪ್ರಕಾಶ ಸ್ವಾಮೀಜಿಯವರು ಸರಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಇನ್ನು ಒಂದು ತಿಂಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿದ್ದಾರೆ ಎಂದು ಶಾಪವನ್ನು ಹಾಕಿದ್ದಾರೆ. ಇವರ ಶಾಪಕ್ಕೆ ಪೀಠದ ದಯಾನಂದ ಸ್ವಾಮೀಜಿ, ಡಾ. ಗಂಗಾನಾಥ ಸ್ವಾಮೀಜಿಗಳೂ ಧ್ವನಿಗೂಡಿಸಿದ್ದಾರೆ. ಪೊಲೀಸರನ್ನು ಬಿಟ್ಟು ಖಾವಿಧಾರಿಗಳಿಗೆ ಸರಕಾರ ಅವಮಾನ ಮಾಡಿದೆ ಎಂದು ಮೂವರೂ ಬೊಮ್ಮಾಯಿ ಸರಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಅರವಿಂದ್ ಬೆಲ್ಲದ ಮತ್ತು ಮಹೇಶ್ ಕಮಟಳ್ಳಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು

ಅರವಿಂದ್ ಬೆಲ್ಲದ ಮತ್ತು ಮಹೇಶ್ ಕಮಟಳ್ಳಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು

"ಎಲ್ಲಾ ಸಸ್ಯಾಹಾರಿ ಸಂಘಗಳ ಸಹಯೋಗದೊಂದಿಗೆ ಪ್ರತಿಭಟನೆ ನಡೆಸುವವರಿದ್ದೇವೆ ಎಂದು ಮೊದಲೇ ಪ್ರಕಟಿಸಿದ್ದೆವು. ಅದರಂತೆಯೇ, ಪ್ರತಿಭಟನೆ ಜೋರಾಗಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಶಾಸಕರಾದ ಅರವಿಂದ್ ಬೆಲ್ಲದ ಮತ್ತು ಮಹೇಶ್ ಕಮಟಳ್ಳಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಮೊಟ್ಟೆ ಕೊಡುವುದಕ್ಕೆ ನಮ್ಮ ವಿರೋಧವೂ ಇದೆ ಅಂದ

 ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ

ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ

"ಆಗ ನಾವು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ, ಪೊಲೀಸರು ಅವಾಚ್ಯ ಶಬ್ದಗಳಿಂದ ನಮ್ಮನ್ನೆಲ್ಲಾ ನಿಂದಿಸಿ, ಬೂಟುಗಾಲಿನಲ್ಲಿ ಒದ್ದು ನಮಗೆ ಅವಮಾನ ಮಾಡಿದ್ದಾರೆ. ಪೊಲೀಸ್ ಇಲಾಖೆಗೆ ನಮ್ಮ ಧಿಕ್ಕಾರವಿದೆ. ಆಗ ನಮ್ಮ ಕಾರ್ಯಕರ್ತರು ಮುನ್ನುಗ್ಗಲು ಬಂದಾಗ ಲಾಠಿಚಾರ್ಚ್ ಮಾಡಲಾಗಿದೆ. ಇದಕ್ಕೆ ಸರಕಾರವೇ ಹೊಣೆ ಹೊರಬೇಕಾಗುತ್ತದೆ. ಇವರೆಲ್ಲಾ ಆರಕ್ಷಕರಲ್ಲ, ನರಭಕ್ಷಕರು, ಸಂವಿಧಾನ ವಿರೋಧಿಗಳು. ಆಗ, ಶಾಂತಿಯುತವಾಗಿ ನಾವು ಮತ್ತು ನಮ್ಮ ಕಾರ್ಯಕರ್ತರು ನಮ್ಮಮ್ಮ ಮನೆ/ಮಠಕ್ಕೆ ಹೋಗಲು ಹೊರಟಾಗ ಅದಕ್ಕೂ ಪೊಲೀಸರು ಅವಕಾಶವನ್ನು ನೀಡಲಿಲ್ಲ"ಎಂದು ಬಸವಪ್ರಕಾಶ ಸ್ವಾಮೀಜಿಯವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

 ಜಂಗಮರು ಶಾಪ ಹಾಕುತ್ತಿದ್ದೇವೆ: ಸಿಎಂ ಬೊಮ್ಮಾಯಿ ಅಧಿಕಾರ ಕಳೆದುಕೊಳ್ಳಲಿದ್ದಾರೆ

ಜಂಗಮರು ಶಾಪ ಹಾಕುತ್ತಿದ್ದೇವೆ: ಸಿಎಂ ಬೊಮ್ಮಾಯಿ ಅಧಿಕಾರ ಕಳೆದುಕೊಳ್ಳಲಿದ್ದಾರೆ

"ಮುಂದಿನ ದಿನಮಾನಗಳಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳಲಿದ್ದಾರೆ. ನಮ್ಮೆಲ್ಲಾ ಸ್ವಾಮೀಜಿಗಳ ಶಾಪ ಮುಖ್ಯಮಂತ್ರಿಗಳನ್ನು ಸುಮ್ಮನೆ ಬಿಡುವುದಿಲ್ಲ. ಹರನ ರೂಪ ಜಂಗಮ ಎಂದು ಹೇಳಲಾಗುತ್ತದೆ, ಅಂತಹ ಜಂಗಮ ಮೂರ್ತಿಗಳನ್ನು ನಿಂದನೆ ಮಾಡಲಾಗಿದೆ. ಯಾಕೆ ಮುಖ್ಯಮಂತ್ರಿಗಳಿಗೆ ಕಿವಿಯಿಲ್ಲವೇ, ನಮ್ಮಂತಹ ಹಲವಾರು ಸ್ವಾಮೀಜಿಗಳ ಶಾಪ ಅವರಿಗೆ ತಟ್ಟಲಿದೆ"ಎಂದು ಬಸವಪ್ರಕಾಶ ಸ್ವಾಮೀಜಿಯವರು ಶಾಪ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+