ಅಥಣಿ ಗಣಪತಿ ಮಠ ಸ್ವಾಮೀಜಿ ನಿಗೂಢ ಸಾವು

ಅಥಣಿ,ಅ.12: 'ಮೂರು ದಿನಗಳ ನಂತರ ನಮ್ಮ ಸ್ವಾಮೀಜಿ ಮತ್ತೆ ಹುಟ್ಟಿ ಬರುತ್ತಾರೆ. ಸ್ವಾಮೀಜಿ ದೇಹವನ್ನು ಮುಟ್ಟಲು ಬಿಡುವುದಿಲ್ಲ. ಅವರ ಪವಾಡ ನಿಮಗೆ ತಿಳಿಯುವುದಿಲ್ಲ' ಎಂದು ಗಣಪತಿ ಮಠದ ಆನಂದಸ್ವಾಮೀಜಿ ಅವರ ಭಕ್ತರು ನಂಬಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಆನಂದ ಸ್ವಾಮೀಜಿ ಅವರ ಸಾವಿನ ನಿಗೂಢತೆ ಮುಂದುವರೆದಿದ್ದು ತಹಸೀಲ್ದಾರ್ ಕೂಡಾ ಸಾವಿನ ಬಗ್ಗೆ ಘೋಷಣೆ ಮಾಡಲು ವಿಳಂಬ ಮಾಡಿದ ಘಟನೆ ನಡೆದಿದೆ.

ಆಗಾಗ ಸಾವಿನ ಮನೆ ಹೊಕ್ಕು ಮೂರು ದಿನಗಳ ನಂತರ ಹುಟ್ಟಿ ಬರುವ ಸಾವಿನ ಆಟವಾಡುತ್ತಿದ್ದರು. ಹತ್ತು ಹಲವು ಪವಾಡಗಳನ್ನು ತೋರಿಸುತ್ತಿದ್ದ ಆನಂದ ಸ್ವಾಮೀಜಿ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಭಕ್ತರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಕೆಂಪವಾಡ ಗ್ರಾಮದ ಗಣಪತಿ ಮಠದಲ್ಲಿಯೇ ವಿಷ ಸೇವಿಸಿ ಶ್ರೀಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇಸಿಜಿ ಮೂಲಕ ಅವರನ್ನು 'ಕ್ಲಿನಿಕಲಿ ಡೆಡ್' ಎಂದು ಘೋಷಿಸಿದ್ದೇವೆ. ತಹಸೀಲ್ದಾರ್ ಎಸ್ ಎಸ್ ಪೂಜಾರಿ ಹಾಗೂ ಪೊಲೀಸರು ಮುಂದಿನ ಕ್ರಮ ಜರುಗಿಸಬಹುದು ಸರ್ಕಾರಿ ವೈದ್ಯಾಧಿಕಾರಿ ಡಾ. ಟಿ ಕಾಗೆ ಅವರು ಸ್ಪಷ್ಪಪಡಿಸಿದ್ದಾರೆ.

Athani Ganapati Mutt Seer Anand Swamy Death Mystery

ಪೊಲೀಸರ ದಾಖಲೆ ಪ್ರಕಾರ: ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ವಾಮೀಜಿ ಇದ್ದ ಕೋಣೆಯಲ್ಲಿ ವಿಷದ ಬಾಟಲಿ ಪತ್ತೆಯಾಗಿದೆ. 'ಕಲಿಯುಗದಲ್ಲಿ ನಾನು ಮತ್ತೆ ಹುಟ್ಟಿ ಬರುತ್ತೇನೆ. ಮೂರು ದಿನಗಳ ಕಾಲ ನನಗಾಗಿ ಕಾಯುತ್ತಿರಿ' ಎಂದು ಆಶ್ರಮದವಾಸಿಗಳಿಗೆ ತಿಳಿಸಿದ್ದರು. ಬೆಳಗ್ಗೆ 6 ಗಂಟೆಗೆ ಸ್ವಾಮೀಜಿ ಮೃತರಾಗಿದ್ದಾರೆ ಎಂದು ಸ್ಥಳೀಯ ವೈದ್ಯರು ಸುದ್ದಿ ನೀಡಿದರು. ಆಶ್ರಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ದಾಖಲಾಗಿದೆ ಎಂದು ಅಥಣಿ ತಹಸೀಲ್ದಾರ್ ಎಸ್ ಎಸ್ ಪೂಜಾರಿ ಹೇಳಿದ್ದಾರೆ.

40 ವರ್ಷಗಳಿಂದ ಆನಂದ್ ಸ್ವಾಮಿ ಆಥವಾ ಆನಂದ್ ಮಹಾರಾಜ್ ಅವರು ಪ್ರೈಮರಿ ಶಾಲೆ ಟೀಚರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.ಅದರೆ, ಗಣಪತಿ ದೇಗುಲ ಸೇರಿದ ಮೇಲೆ ಜಪ ತಪ ನಿರತರಾಗಿ ಎಲ್ಲವನ್ನು ತೊರೆದರು. ಭಕ್ತರಿಗೆ ಆಗಾಗ ದೇವರ ಮೇಲೆ ನಂಬಿಕೆ ಹುಟ್ಟುವ ಪವಾಡಗಳನ್ನು ಮಾಡಿ ತೋರಿಸುತ್ತಿದ್ದರು.

ಸಂಕಷ್ಟ ಚತುರ್ಥಿ ಸಂದರ್ಭದಲ್ಲಿ ಭಕ್ತರು ಜಾಗರಣೆ ಮಾಡುತ್ತಿದ್ದರು. ನಾನು ಹೊಸ ಪ್ರಯೋಗ ಮಾಡುತ್ತಿದ್ದೇನೆ, ಮರು ಹುಟ್ಟು ಬರುತ್ತೇನೆ ಎಂದು ಹೇಳಿ ಕೋಣೆಯೊಳಗೆ ಪ್ರವೇಶಿಸಿದ್ದಾರೆ. ಅದರೆ, ಭಾನುವಾರ ಬೆಳಗ್ಗೆ ಅವರಿದ್ದ ಕೋಣೆಯಲ್ಲಿ ಹತ್ತಿ ಬೆಳೆ ಸಿಂಪಡಿಸುವ ಕೀಟನಾಶಕ ಪತ್ತೆಯಾಗಿದೆ. ಸ್ವಾಮೀಜಿ ದೇಹ ಮಲಗಿದ್ದ ಸ್ಥಿತಿಯಲ್ಲಿ ಕಂಡು ಬಂದಿದೆ. ಅವರ ಸಾವಿನ ಬಗ್ಗೆ ನಿಖರವಾಗಿ ಹೇಳಲು ಬರುವುದಿಲ್ಲ. ಪೊಲೀಸ್ ತನಿಖೆ ನಡೆದ ಮೇಲೆ ತಿಳಿಯಬಹುದು ಎಂದು ಅಥಣಿ ತಹಸೀಲ್ದಾರ್ ಎಸ್ ಎಸ್ ಪೂಜಾರಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+