ಉಪ ಚುನಾವಣೆ; ಬೆಳಗಾವಿಯಲ್ಲಿ ಶೇ 74.72ರಷ್ಟು ಮತದಾನ

ಬೆಳಗಾವಿ, ಡಿಸೆಂಬರ್ 6 : ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಗುರುವಾರ ಉಪ ಚುನಾವಣೆಗೆ ಮತದಾನ ನಡೆಯಿತು. ಎಲ್ಲಾ ಮತದಾನ ಕೇಂದ್ರಗಳಲ್ಲಿ ಶಾಂತಿಯುತವಾಗಿ ಜನರು ಮತ ಚಲಾವಣೆ ಮಾಡಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ಶೇ.74.72ರಷ್ಟು ಮತದಾನವಾಗಿದೆ.

ಜಿಲ್ಲೆಯ ಗೋಕಾಕ್, ಅಥಣಿ ಮತ್ತು ಕಾಗವಾಡ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಿತು. ಮತದಾನ ಮಾಡಲು ಅನುಕೂಲವಾಗುವಂತೆ ಆಯಾ ಕ್ಷೇತ್ರಗಳಲ್ಲಿ ರಜೆ ಘೋಷಣೆ ಮಾಡಲಾಗಿತ್ತು. ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ಕೆಲವು ಕಡೆ ವರದಿಯಾಗಿದ್ದು ಬಿಟ್ಟರೆ ಸಂಪೂರ್ಣ ಶಾಂತಿಯುತ ಮತದಾನ ನಡೆದಿದೆ.

ಅಥಣಿ ಕ್ಷೇತ್ರದಲ್ಲಿ 2,19,831 ಮತದಾರರು, ಕಾಗವಾಡದಲ್ಲಿ 1,86,190 ಮತ್ತು ಗೋಕಾಕ ಮತ ಕ್ಷೇತ್ರದಲ್ಲಿ ಒಟ್ಟು 2,44,313 ಮತದಾರರು ಇದ್ದರು. ಜಿಲ್ಲೆಯಲ್ಲಿ ಒಟ್ಟಾರೆ 6,50,334 ಮತದಾರರ ಪೈಕಿ 4,85,926 ಜನರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.

ಮೂರು ಕ್ಷೇತ್ರಗಳಲ್ಲಿ ಒಟ್ಟಾರೆ ಚುನಾವಣಾ ಪ್ರಕ್ರಿಯೆಯು ಸಂಪೂರ್ಣ ಶಾಂತಿಯುತವಾಗಿ ನಡೆಯಿತು. ಅಭ್ಯರ್ಥಿಗಳ ಭವಿಷ್ಯ ಮತಯತ್ರದಲ್ಲಿ ಭದ್ರವಾಗಿದ್ದು, ಡಿಸೆಂಬರ್ 9ರ ಸೋಮವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಗೋಕಾಕ್ ವಿಧಾನಸಭಾ ಕ್ಷೇತ್ರ

ಗೋಕಾಕ್ ವಿಧಾನಸಭಾ ಕ್ಷೇತ್ರ

ಮತದಾನ ಅಂತ್ಯಗೊಂಡ ಸಂಜೆ 6 ಗಂಟೆಯವರೆಗಿನ ಅವಧಿಯಲ್ಲಿ ಗೋಕಾಕ ಕ್ಷೇತ್ರದಲ್ಲಿ ಶೇ. 73.08 ರಷ್ಟು ಮತದಾನವಾಗಿತ್ತು. ಒಟ್ಟು 2,44,313 ಮತದಾರರು ಇದ್ದರು. ಇವರಲ್ಲಿ, 1,78,554 ಜನರು ಮತದಾನ ಮಾಡಿದ್ದಾರೆ.

ಅಥಣಿ ವಿಧಾನಸಭಾ ಕ್ಷೇತ್ರ

ಅಥಣಿ ವಿಧಾನಸಭಾ ಕ್ಷೇತ್ರ

ಅಥಣಿ ಕ್ಷೇತ್ರದಲ್ಲಿ 2,19,831 ಮತದಾರರು ಇದ್ದರು. ಕ್ಷೇತ್ರದಲ್ಲಿ ಒಟ್ಟು ಶೇ. 75.23 ಮತದಾನವಾಗಿದೆ. 1,65,370 ಜನರು ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ. ಬೆಳಗ್ಗೆ ನಿಧಾನಗತಿಯಿಂದ ಆರಂಭಗೊಂಡ ಮತದಾನ ಪ್ರಕ್ರಿಯೆಯು ಮಧ್ಯಾಹ್ನದ ವೇಳೆಗೆ ಚುರುಕುಗೊಂಡಿತು.

ಕಾಗವಾಡ ಕ್ಷೇತ್ರ

ಕಾಗವಾಡ ಕ್ಷೇತ್ರ

ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ 1,86,190 ಮತದಾರರು ಇದ್ದರು. 1,42,002 ಜನರು ಮತದಾನ ಮಾಡಿದ್ದು, ಶೇ. 76.27 ಮತದಾನವಾಗಿದೆ. ಮಧ್ಯಾಹ್ನ 3 ಗಂಟೆಯವರೆಗೆ ಕಾಗವಾಡದಲ್ಲಿ ಶೇ. 51.41ರಷ್ಟು ಮತದಾನವಾಗಿತ್ತು. ಬಳಿಕ ಮತದಾನ ಬಿರುಸುಗೊಂಡಿತು.

ಡಿಸೆಂಬರ್ 9ರಂದು ಫಲಿತಾಂಶ

ಡಿಸೆಂಬರ್ 9ರಂದು ಫಲಿತಾಂಶ

ಗುರುವಾರ ಬೆಳಗ್ಗೆ 7 ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆಯು ಸಂಜೆ 6 ಗಂಟೆಯವರೆಗೆ ನಡೆಯಿತು. ಮತದಾನ ಕೊನೆಗೊಳ್ಳುವ 6 ಗಂಟೆಯ ವೇಳೆಗೆ ಮತಗಟ್ಟೆ ಆವರಣದಲ್ಲಿ ಹಾಜರಿದ್ದ ಮತದಾರರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು. ಡಿಸೆಂಬರ್ 9ರಂದು ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+