ಢಾಕಾದಲ್ಲಿ ಭಾರಿ ಸ್ಫೋಟ, 7 ಮಂದಿ ಮೃತ, ಹಲವರಿಗೆ ಗಾಯ
ಢಾಕಾ, ಜೂನ್ 28: ಇಲ್ಲಿನ ಮೋಘ್ ಬಜಾರ್ ಬಳಿ ಭಾರಿ ಸ್ಫೋಟ ಸಂಭವಿಸಿದೆ. ಭಾನುವಾರ ಸಂಜೆ ನಡೆದ ದುರ್ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿಗೆ ತೀವ್ರ ಗಾಯಗಳಾಗಿವೆ. ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.
''ಸ್ಫೋಟಕ್ಕೆ ಏನು ಕಾರಣ ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ, ವಾಣಿಜ್ಯ ಕಾಂಪ್ಲೆಕ್ಸ್ ಕಟ್ಟಡಲ್ಲಿರುವ ಹೋಟೆಲ್ ವೊಂದರಲ್ಲಿ ಅನಿಲ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದೆ, ಆದರೆ, ಯಾವುದೇ ಪುರಾವೆ ಲಭ್ಯವಾಗಿಲ್ಲ, ಇದು ಅಪಘಾತವೋ ಅಥವಾ ಹೊರಗಿನವರ ಕೈವಾಡವಿದೆಯೋ ಎಂಬುದು ಸದ್ಯಕ್ಕೆ ತಿಳಿಸಲು ಸಾಧ್ಯವಿಲ್ಲ,'' ಎಂದು ಢಾಕಾ ಪೊಲೀಸರು ಹೇಳಿದರು.

ಸ್ಫೋಟದ ತೀವ್ರತೆಗೆ ನಾಲ್ಕಂತಸ್ತಿನ ಕಟ್ಟಡ ಜಖಂಗೊಂಡಿದ್ದು, 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Recommended Video
''ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದು, ಉಗ್ರರ ಕೃತ್ಯದ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಹಾಗೂ ಯಾವುದೇ ಸಂಘಟನೆ ಕೂಡಾ ಇಲ್ಲಿ ತನಕ ಘಟನೆಯ ಹೊಣೆ ಹೊತ್ತುಕೊಂಡಿಲ್ಲ, ಇನ್ನಷ್ಟು ತನಿಖೆ ನಂತರ ವಿವರ ಸಿಗಲಿದೆ,'' ಎಂದು ಪೊಲೀಸ್ ಆಯುಕ್ತ ಶಫಿಕುಲ್ ಇಸ್ಲಾಂ ಹೇಳಿದರು. (AP, Reuters)












Click it and Unblock the Notifications