15 ವರ್ಷಗಳ ಹಿಂದೆ ಹಸಿರು ಬೆಂಗಳೂರು ಹೇಗಿತ್ತು?

By: ಮೈತ್ರೇಯಿ ರೋವಾ
Subscribe to Oneindia Kannada

ಬೆಂಗಳೂರು, ಜೂನ್ 04:ವಿಶ್ವ ಪರಿಸರ ದಿನ ಎದುರಾಗಿದೆ. ಹಿಂದಿನ ಬೆಂಗಳೂರು ಹೇಗಿತ್ತು? ಇಂದಿನ ಬೆಂಗಳೂರು ಹೇಗಿದೆ? ಹಸಿರು ಮಾಯವಾಗಿ ಕಾಂಕ್ರಿಟ್ ಕಾಡು ಹೇಗೆ ಮನೆ ಮಾಡಿದೆ ಎಂಬುದನ್ನು ತಿಳಿದುಕೊಳ್ಳಲೇಬೇಕು.

ಬಿಹಾರದಿಂದ ಬೆಂಗಳೂರಿಗೆ ನಾಲ್ಕು ದಶಕದ ಹಿಂದೆ ಬಂದು ನೆಲೆಸಿದ ನಿವೃತ್ತ ಸರ್ಕಾರಿ ನೌಕರ ನರೇಶ್ ಝಾ ಉದ್ಯಾನ ನಗರಿಯ ಅಂದಿನ ವಾತಾವಣ, ಪರಿಸರವನ್ನು ವಿವರಿಸಿದ್ದಾರೆ.[ಅನಂತ್ ಕುಮಾರ್ ಅವರ ಕನಸಿನ ಹಸಿರು ಬೆಂಗಳೂರು 1:1]

bengaluru

ದಶಕಗಳ ಕಾಲ ಬೆಂಗಳೂರಲ್ಲಿ ನೆಲಿಸಿದ ಝಾ ಕನ್ನಡವನ್ನು ಚೆನ್ನಾಗಿ ಮಾತನಾಡಲು ಕಲಿತಿದ್ದಾರೆ. ಬೆಂಗಳೂರು ಇಂದು ಕಾಂಕ್ರಿಟ್ ಕಾಡಾಗಿ ಪರಿವರ್ತನೆ ಆಗಿದೆ ಎಂದು ಝಾ ವಿಷಾದ ವ್ಯಕ್ತಪಡಿಸುತ್ತಾರೆ.

ಅವರ ಮಾತಿನಲ್ಲೇ ಬೆಂಗಳೂರ ವೈಭವ ಮತ್ತು ಇಂದಿನ ಸ್ಥಿತಿಯನ್ನು ಕೇಳಿಕೊಂಡು ಬರೋಣ....

ಅಭಿವೃದ್ಧಿ ಹೆಸರಲ್ಲಿ ಸಾವಿರಾರು ಮರಗಳನ್ನು ನಾವು ಕಳೆದುಕೊಂಡಿದ್ದೇವೆ. ಬೆಂಗಳೂರ ಕೆರೆಗಳು ಮಾಲಿನ್ಯದ ತಾಣವಾಗಿ ಬದಲಾಗಿವೆ. ವಾಯು ಮಾಲಿನ್ಯದ ಪ್ರಮಾಣವನ್ನು ಊಹಿಸಿಕೊಳ್ಳಲು ಅಸಾಧ್ಯ. ಟ್ರಾಫಿಕ್ ಸಮಸ್ಯೆಯಂತೂ ಕೇಳುವುದೇ ಬೇಡ. ಇದು ನಮ್ಮ ಇಂದಿನ ಬೆಂಗಳೂರು.[ನಾವು ಕೋಟಿ ಜನ, ಕೋಟಿ ಮರ ಬೇಕು]

bengaluru

15 ವರ್ಷಗಳ ಹಿಂದೆ ಹೀಗೆ ಇರಲಿಲ್ಲ. ಹಸಿರಿನ ತಾಣವಾಗಿದ್ದ ಅಂದಿನ ಬೆಂಗಳೂರನ್ನು ನಾವು ಕಳೆದುಕೊಂಡಿದ್ದೇವೆ. ಆದರೆ ನಾನು ಪರಿಸರ ಸಂರಕ್ಷಣೆಯಿಂದ ಎಂದಿಗೂ ವಿಮುಖನಾಗುವುದಿಲ್ಲ. ನಾನು ಮತ್ತು ನನ್ನ ಸ್ನೇಹಿತರು ಸೇರಿ ಹಳೆ ವಿಮಾನ ನಿಲ್ದಾಣ ರಸ್ತೆ ಪಕ್ಕ ಈ ಬಾರಿಯೂ ಗಿಡಗಳನ್ನು ನೆಡಲಿದ್ದೇವೆ ಎಂದು ಹೇಳುತ್ತಾರೆ.

ಪರಿಸರ ಮತ್ತು ಅರಣ್ಯ ಇಲಾಖೆ ಒಂದಾಗಿ ವಿಶ್ವ ಪರಿಸರ ದಿನದ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜೂನ್ 5, ಭಾನುವಾರ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ರಿಚ್ ಮಂಡ್ ಅಂಡ್ ಲ್ಯಾಂಗ್ ಫರ್ಡ್ ವೆಲ್ ಫೇರ್ ಅಸೋಸಸಿಯೇಶನ್ ಸದಸ್ಯರು ಜಾಗೃತಿ ಮೆರವಣಿಗೆ ಹೊರಡಲಿದ್ದಾರೆ. ಯುವ ಸೃಷ್ಟಿ ಸಂಘಟನೆ ಸಹ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

" ಗೋ ವೈಲ್ಡ್ ಫಾರ್ ಲೈಫ್" ಘೋಷ ವಾಕ್ಯದಡಿ ಈ ಬಾರಿಯ ಪರಿಸರ ದಿನಾಚರಣೆ ನಡೆಯಲಿದ್ದು ಜಾಗತಿಕ ತಾಪಮಾನ ಏರಿಕೆಯನ್ನು ಪ್ರಮುಖ ಅಂಶವನ್ನಾಗಿ ಇರಿಸಿಕೊಳ್ಳಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Naresh Jha (65), a retired government official, rues profusely how Bengaluru has lost its old green glory. Jha, a native of Bihar, who made the city his home almost four decades back, feels sad that Bengaluru has turned into a concrete jungle. On the eve of the World Environment Day, Jha, who speaks fluent Kannada, says, "How green was my city. Now, it's a concrete jungle.
Please Wait while comments are loading...