ಬೊಂಬಾಟ್ ಬ್ಲಾಗಿಂಗ್ ತಾಣ ಟ್ವಿಟ್ಟರ್ ಗೆ 10ರ ಸಂಭ್ರಮ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 21: ಬ್ಲಾಗುಗಳ ಕಾಲ ಮುಗಿದೇ ಹೋಯ್ತು ಎನ್ನುವಾಗ ಮೈಕ್ರೋ ಬ್ಲಾಗಿಂಗ್ ಹೆಸರಿನಲ್ಲಿ ಜನಪ್ರಿಯಗೊಂಡ ಸಾಮಾಜಿಕ ಜಾಲತಾಣವೇ ಟ್ವಿಟ್ಟರ್. ಈ ಟ್ವಿಟ್ಟರ್ ಎಂಬ ಹಕ್ಕಿಗೆ ಈಗ 10 ವರ್ಷದ ಹರೆಯ. ಮಾರ್ಚ್ 21 ರಂದು ಈ ಸಂಭ್ರಮಾಚರಣೆಯಲ್ಲಿ ನೀವು ಪಾಲ್ಗೊಳ್ಳಿ ನಿಮಗನಿಸಿದ್ದು ಟ್ವೀಟ್ ಮಾಡಿ #LoveTwitter ಎಂದು ಟ್ಯಾಗ್ ಹಾಕಲು ಮರೆಯಬೇಡಿ.[ಜಲಪ್ರಳಯಕ್ಕೆ ನೆರವಾಗುತ್ತಿರುವ ಟ್ವಿಟ್ಟರ್ ಮಿತ್ರರು]

ಸೆಲೆಬ್ರಿಟಿಗಳು, ಜನ ಸಾಮಾನ್ಯರು, ಸುದ್ದಿ ಸಂಸ್ಥೆಗಳ ನೆಚ್ಚಿನ ಹಾಗೂ ನಂಬುಗೆಯ ತಾಣವಾಗಿ ಟ್ವಿಟ್ಟರ್ ಬೆಳೆದು ಬಂದಿದೆ. 140 Characterಗಳಲ್ಲಿ ನೀವು ಹೇಳಬೇಕಾದ್ದನ್ನು ಹೇಳಿ ಮುಗಿಸಿಬಿಡಬಹುದು. ದಿನವೊಂದಕ್ಕೆ 500 ಮಿಲಿಯನ್ ಟ್ವೀಟ್ಸ್, ವರ್ಷಕ್ಕೆ 200 ಬಿಲಿಯನ್ ಟ್ವೀಟ್ಸ್ ಲೆಕ್ಕಾಚಾರದಲ್ಲಿ ಸುಮಾರು 320 ಮಿಲಿಯನ್ ಬಳಕೆದಾರರು ಇದ್ದಾರೆ ಎಂದು ಅಂದಾಜಿಸಲಾಗಿದೆ.[#asksundar ಎಂದ್ರೇ, ಕಟ್ಟಪ್ಪ, ಸಲ್ಮಾನ್ ಬಗ್ಗೆ ಪ್ರಶ್ನೆ ಕೇಳೋದಾ?]

Twitter sends 140-character message to users on 10th birthday

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೇಂದ್ರ ಕಚೇರಿ ಹೊಂದಿರುವ ಟ್ವಿಟ್ಟರ್ ತನ್ನ 10ನೇ ವಾರ್ಷಿಕೋತ್ಸವವನ್ನು ಸಂಭ್ರಮವನ್ನು ಬಳಕೆದಾರರ ಜೊತೆ ಆಚರಿಸುತ್ತಿದೆ. ಪ್ರತಿ ಖಾತೆದಾರರಿಗೂ ಸಂದೇಶ ರವಾನೆಯಾಗಿದೆ. 140 ಪದಮಿತಿಯನ್ನು ಹೆಚ್ಚಿಸುವ ಬಗ್ಗೆ ಬೇಡಿಕೆ ಇದ್ದರೂ ಈಗಿರುವ ಇತಿ ಮಿತಿಯೇ ಸುಂದರವಾಗಿದೆ. ಬಲಿಷ್ಠವಾಗಿದೆ ಎಂದು ಸಿಇಒ ಜಾಕ್ ಡೊರ್ಸೆ ಹೇಳಿದ್ದಾರೆ.

ವೈಯಕ್ತಿಕ ಸಂದೇಶಗಳು, ಹಿತವಚನಗಳು, ಸಲಹೆ ಸೂಚನೆಗಳು, ಹವಾಮಾನ ವರದಿ, ರಾಜಕೀಯ, ಕ್ರೀಡೆ, ಮನರಂಜನೆ, ಚುನಾವಣೆ ಫಲಿತಾಂಶ, ಬ್ರೇಕಿಂಗ್ ನ್ಯೂಸ್ ಜೊತೆಗೆ ಕಳೆದುಹೋದವರನ್ನು ಹುಡುಕಿಕೊಡುವಲ್ಲಿ ಕೂಡಾ ಟ್ವಿಟ್ಟರ್ ಯಶಸ್ವಿಯಾಗಿದೆ. [ಟ್ವಿಟ್ಟರ್ ನಲ್ಲಿ 'ಕನ್ನಡ ರಾಜ್ಯೋತ್ಸವ' ಟ್ರೆಂಡಿಂಗ್]


ಭೂಕಂಪ ಸೇರಿದಂತೆ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಟ್ವಿಟ್ಟರ್ ಮೂಲಕ ನೆರವು ಪಡೆದುಕೊಂಡು ಬದುಕು ಕಟ್ಟಿಕೊಂಡವರು ಅನೇಕ ಮಂದಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The micro-blogging site Twitter on Monday wrote a 140-character thank you note to its users as it celebrated its 10th anniversary."On March 21, ten years ago, it began with a single Tweet. Since then, every moment of every day, people connect about the things they care about most - all over the world," Twitter said.
Please Wait while comments are loading...