'ರುದ್ರೇಶ್ ಹತ್ಯೆಗೂ ಪಿಎಫ್ಐಗೂ ಯಾವುದೇ ಸಂಬಂಧವಿಲ್ಲ'

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 03: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಮುಖ್ಯ ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ. ಪಾಪುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಆಶೀಮ್ ಷರೀಫ್ ಬಂಧಿತ ಆರೋಪಿ. ಆದರೆ, ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಪಿಎಫ್ಐನ ಅಧ್ಯಕ್ಷರು, 'ರುದ್ರೇಶ್ ಹತ್ಯೆಗೂ ಪಿಎಫ್ಐಗೂ ಯಾವುದೇ ಸಂಬಂಧವಿಲ್ಲ', ಒತ್ತಡದಿಂದ ಪಿಎಫ್ ಐ ಮೇಲೆ ಸುಳ್ಳು ಆರೋಪ ಹೊರೆಸಲಾಗಿದೆ ಎಂದಿದ್ದಾರೆ.

ಇದಕ್ಕೂ ಮುನ್ನ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI)ಕ್ಕೆ ಸೇರಿದ ನಾಲ್ವರು ಸದಸ್ಯರನ್ನು ಬಂಧಿಸಲಾಗಿತ್ತು.[ರುದ್ರೇಶ್ ಹತ್ಯೆ, ಬೆಂಗಳೂರಲ್ಲಿ ನಾಲ್ವರ ಬಂಧನ]

Rudresh murder - PFI District President detained

ಅಕ್ಟೋಬರ್ 16ರಂದು ಕಾಮರಾಜ ರಸ್ತೆಯಲ್ಲಿ ಪಥಸಂಚಲನ ನಡೆಯುತ್ತಿದ್ದಾಗ ಇಬ್ಬರು ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಕೊಲ್ಲಲು ಸಂಚು ರೂಪಿಸಿದ್ದೆವು.[ಕೊಲೆಯ ಕಾರಣ ಬಾಯ್ಬಿಟ್ಟ ಆರೋಪಿಗಳು!]

ಆದರೆ, ಒಂಟಿಯಾಗಿ ಸಿಕ್ಕ ರುದ್ರೇಶ್ ಕತ್ತನ್ನು ವಾಸಿಂ ಕತ್ತರಿಸಿದ, ಇನ್ನೊಬ್ಬ ಕಾರ್ಯಕರ್ತನನ್ನು ಕೊಲ್ಲಲು ಆಗಲಿಲ್ಲ ಎಂದು ವಿಚಾರಣೆ ವೇಳೆ ಬಂಧಿತ ಆರೋಪಿಗಳು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a major development the Bengaluru District President of Popular Front of India, Ashim Shariff was on Thursday picked up by Commercial street police in connection with RSS member Rudresh murder case. The case that had created a political stir in Karnataka is almost coming to a close with Shariff's detainment.
Please Wait while comments are loading...