Get Updates
Get notified of breaking news, exclusive insights, and must-see stories!

ಕುಟುಂಬ ಸಮೇತ ಪೇದೆ ಆತ್ಮಹತ್ಯೆ ಯತ್ನ: ಪತ್ನಿ, ಪುಟ್ಟ ಮಕ್ಕಳ ಸಾವು

ಪತ್ನಿ ವೀಣಾ, ಮೂರು ವರ್ಷದ ಮಗಳು ಮಾನ್ಯ ಹಾಗೂ ಒಂದೂವರೆ ವರ್ಷದ ಮಗು ಪೃಥ್ವಿಗೆ ವಿಷವುಣಿಸಿದ ಸಿಎಆರ್ ಪೇದೆ ಸುಭಾಷ್, ತಾನೂ ವಿಷ ಸೇವಿಸಿ ಆತ್ಮಹತ್ಯೆ ಪ್ರಯತ್ನಿಸಿರುವ ಸಿಎಆರ್ ಪೇದೆ ಸುಭಾಷ್.

ಬೆಂಗಳೂರು, ಮೇ 23: ಪತ್ನಿ ಮಕ್ಕಳಿಗೆ ವಿಷವುಣಿಸಿ ತಾವೂ ವಿಷ ಸೇವಿಸಿದ್ದ ಸಂಪಿಗೆ ಹಳ್ಳಿ ಠಾಣಾ ಪೇದೆ ಸುಭಾಷ್ ಅವರ ಆತ್ಮಹತ್ಯೆ ಪ್ರಯತ್ನ ಪ್ರಕರಣದಲ್ಲಿ ಪತ್ನಿ ಮತ್ತು ಮಕ್ಕಳು ಅಸುನೀಗಿದ್ದು, ಪೇದೆ ಸುಭಾಷ್ ಪರಿಸ್ಥಿತಿ ಗಂಭೀರವಾಗಿದೆ.

ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದ ಸುಭಾಷ್, ತಮ್ಮ ಪತ್ನಿ ವೀಣಾ, ಮೂರು ವರ್ಷದ ಮಗಳು ಮಾನ್ಯ ಹಾಗೂ ಒಂದೂವರೆ ವರ್ಷದ ಮಗು ಪೃಥ್ವಿಗೆ ವಿಷವುಣಿಸಿದ್ದರು.

Police constable tries to commit suicide with his family in Sampige halli

ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಪೊಲೀಸ್ ವಸತಿ ಗೃಹದಲ್ಲಿ ಈ ಘಟನೆ ನಡೆದಿದ್ದು ನೆರೆಹೊರೆಯವರು ಇದನ್ನು ಗಮನಿಸಿ ಪೇದೆ ಹಾಗೂ ಅವರ ಕುಟುಂಬವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತಾದರೂ, ಪತ್ನಿ ಮತ್ತು ಮಕ್ಕಳು ಬೆಳಗ್ಗೆ 9:45ರ ಸುಮಾರಿಗೆ ಅಸುನೀಗಿದರು. ಸುಭಾಷ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+