ದೀಪಿಕಾ ಪಡುಕೋಣೆ ಸಹಾಯಕ್ಕೆ ಡಿಕೆಶಿ ಬರೆಯಲಿದ್ದಾರೆ ಪತ್ರ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 20 : ದೀಪಿಕಾ ಅವರ ತಲೆ ಕಡಿದವರಿಗೆ 10 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿರುವ ಹರಿಯಾಣಾದ ಬಿಜೆಪಿ ಮುಖಂಡ, ಬಿಜೆಪಿ ಮುಖ್ಯ ಮಾಧ್ಯಮ ಸಂಚಾಲಕ ಸೂರಜ್ ಪಾಲ್‌ ಅಮು ಅವರ ಹೇಳಿಕೆಗೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರೂ ಕೂಡ ದೀಪಿಕಾ ಪಡುಕೋಣೆ ಅವರನ್ನು ಬೆಂಬಲಿಸಿ ಸರಣಿ ಟ್ವೀಟ್ ಮಾಡಿದ್ದಾರೆ.

ಕರ್ಣಿ ಸೇನಾ ಏಟಿಗೆ ಡಿ.1 ಬಿಟ್ಟು ಮುಂದೆ ಓಡಿದ 'ಪದ್ಮಾವತಿ'

ಹರಿಯಾಣ ಬಿಜೆಪಿ ಮುಖಂಡನ ಹೇಳಿಕೆ ವಿರೋಧಿಸಿ ಕರ್ನಾಟಕ ರಾಜ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಸರಣಿ ಟ್ವೀಟ್ ಮಾಡಿದ್ದು, ಹಿಂಸೆಗೆ ಪ್ರಚೋದನೆ ನೀಡುವ ಬಿ.ಜೆ.ಪಿ ಯ ಸಂಸ್ಕೃತಿ ಇದೇನಾ? ಎಂದು ಪ್ರಶ್ನೆ ಮಾಡಿದ್ದಾರೆ.

ದೀಪಿಕಾ ಪಡುಕೋಣೆ ಅವರಿಗೆ ಬೆಂಬಲ ಸೂಚಿಸಿರುವ ಡಿ.ಕೆ.ಶಿ, ಸಿನಿಮಾ ಬಗ್ಗೆ ಆಕ್ಷೇಪವಿದ್ದರೆ ಸಿಬಿಎಫ್‌ಸಿ ಮೊರೆ ಹೋಗಬೇಕು. ಅದು ಬಿಟ್ಟು ಕಲಾವಿದರಿಗೆ ಬೆದರಿಕೆ ಹಾಕುವುದು ಯಾಕೆ? ಇಂಥಾ ಬೆದರಿಕೆಗಳು ಅದರಲ್ಲೂ ವಿಶೇಷವಾಗಿ ಮಹಿಳೆಗೆ ಬೆದರಿಕೆ ನೀಡುತ್ತಿರುವುದು ದೇಶದಲ್ಲಿ ಅಸಹಿಷ್ಣುತೆ ಮತ್ತು ಮತಾಂಧತೆ ಹೆಚ್ಚುತ್ತಿರುವುದರ ಸಂಕೇತ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ

ಶೂರ್ಪನಕಿ ಮೂಗು ಕತ್ತರಿಸಿದ ಹಾಗೆ ದೀಪಿಕಾಳ ಮೂಗು ಕತ್ತರಿಸುತ್ತೇವೆ'

ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಪತ್ರ ಬರೆದು ದೀಪಿಕಾ ಪಡುಕೋಣೆ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಮನವಿ ಮಾಡುತ್ತೇನೆ ಎಂದಿರುವ ಅವರು, ಭಾರತದ ಮಹಿಳಾ ಕಲಾವಿದರು ಇಂತಹಾ ಹಿಂಸಾತ್ಮಕ ಬೆದರಿಕೆಗಳ ವಿರುದ್ಧ ಧನಿ ಎತ್ತಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಈ ಕೂಡಲೇ ಹರಿಯಾಣದ ಬಿಜೆಪಿ ಮುಖಂಡ ಸೂರಜ್ ಪಾಲ್‌ ಅಮು ಅವರನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಟ್ವಿಟರ್ ನಲ್ಲಿ ಅವರು ಒತ್ತಾಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Power minister D.K.Shivakumar today November 20 express his support to movie 'Padmavathi' by tweeting. in his tweet he insist to arrest Hariyana BJP leader who offers to give 10 crores for choping Deepika Padukone's head.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ