ಬೆಂಗಳೂರಿನ ಅಭಿವೃದ್ಧಿಗಾಗಿ ಅನಂತ್ ಪ್ರಯತ್ನ ನಿರಂತರ
ತಮ್ಮ ಕ್ಷೇತ್ರ ಮಾತ್ರವಲ್ಲ ಬೆಂಗಳೂರಿನ ಅಭಿವೃದ್ಧಿಗಾಗಿ ಅನಂತ್ ಕುಮಾರ್ ಅವರು ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಯೋಗದೊಂದಿಗೆ ಪ್ರಯತ್ನ ಮಾಡಿಲ್ಲದಿದ್ದರೆ ಬೆಂಗಳೂರು ದಕ್ಷಿಣ ಕ್ಷೇತ್ರದ ಜನತೆ ಅವರನ್ನು ಸತತ ಐದು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿ ಕಳುಹಿಸುತ್ತಿದ್ದರೆ? ತಮ್ಮ ಹುಟ್ಟೂರು ಬೆಂಗಳೂರು ಬಗೆಗಿನ ಅತೀತ ಪ್ರೀತಿ, ಕಾಳಜಿಯಿಂದಾಗಿ ಅನೇಕ ರಸ್ತೆಗಳು, ಫ್ಲೈಓವರುಗಳು, ಗ್ರೇಡ್ ಸೆಪರೇಟರ್ ಮುಂತಾದವು ಸಾಕಾರಗೊಂಡಿವೆ.
ಅನಂತ್ ಅವರು ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದಾಗ ಬೆಂಗಳೂರು ಮಹಾನಗರ ಪಾಲಿಕೆಗೆ 1 ಕೋಟಿ ರು.ಗಳನ್ನು ನೀಡಿತ್ತು. ಅಲ್ಪ ಕಾಲಾವಧಿಯ ಕಾಲ ಅವರು ಕೇಂದ್ರ ಸಚಿವರಾಗಿದ್ದರೂ, ಸಿಕ್ಕಷ್ಟು ಸಮಯದಲ್ಲಿಯೇ ಸಿಕ್ಕ ಎಲ್ಲ ಅವಕಾಶಗಳನ್ನು ಬೆಂಗಳೂರು ಅಭಿವೃದ್ಧಿಗಾಗಿ ಬಳಸಿಕೊಂಡ ಹೆಗ್ಗಳಿಕೆ ಅನಂತ್ ಅವರದು. ಈಗ, 1 ಸಾವಿರ ಕೋಟಿ ರು. ವೆಚ್ಚದಲ್ಲಿ ಬೆಂಗಳೂರು ನಗರವನ್ನು ಸುತ್ತಲಿನ ಉಪನಗರಗಳ ಜೊತೆ ಸಂಪರ್ಕಿಸುವ ಸಬರ್ಬನ್ ರೈಲು ಯೋಜನೆಯ ಸಾಕಾರಗೊಳಿಸುವ ಕನಸು ಹೊತ್ತಿದ್ದಾರೆ.

ಹೆಮ್ಮೆಯ ನಮ್ಮ ಮೆಟ್ರೋ : ಅನಂತ್ ಅವರು ಕೇಂದ್ರ ನಗರಾಭಿವೃದ್ಧಿ ಸಚಿವನಾಗಿದ್ದಾಗ ರಾಷ್ಟ್ರೀಯ ನಗರ ಸಾರಿಗೆ ನೀತಿಯನ್ನು ರಚನೆಗೊಂಡಿತ್ತು. ಅದರಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚು ಜನ ವಾಸ್ತವ್ಯವಿರುವ ಪ್ರದೇಶಗಳಲ್ಲಿ ಮೆಟ್ರೋ ಜಾರಿಗೊಳಿಸುವುದೂ ಸೇರಿತ್ತು. ಕೇಂದ್ರ ಮತ್ತು ರಾಜ್ಯ ಜಂಟಿ ಪಾಲುದಾರಿಕೆಯ ಈ ಯೋಜನೆ ನನಸಾಗಲು ಮೂಲ ಕಾರಣ ಡಿಎಂಆರ್‌ಸಿಯ ಶ್ರೀಧರನ್ ಮತ್ತು ಅನಂತ್ ಕುಮಾರ್. ಆ ದೂರದರ್ಶಿತ್ವದ ಫಲವಾಗಿ ಇಂದು ನಾವು ನಮ್ಮ ಮೆಟ್ರೋದಲ್ಲಿ ಸಂಚರಿಸುವಂತಾಗಿದೆ. ಇದು ನಗರದ ಸಂಚಾರ ವ್ಯವಸ್ಥೆಯ ದಿಕ್ಕನ್ನೇ ಬದಲಿಸಿದೆ ಎಂದರೆ ತಪ್ಪಾಗಲಾರದು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ : ಬೆಂಗಳೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿಲ್ಲ ಎಂಬ ಕೊರಗು ಜನರನ್ನು ಕಾಡುತ್ತಿತ್ತು. ಅನಂತ್ ಅವರ ಸತತ ಪ್ರಯತ್ನದ ಫಲವಾಗಿ ಆ ಕೊರಗು ಇಂದು ನಿವಾರಣೆಯಾಗಿದೆ. 1999ರಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿದ್ದಾಗ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈಗ ದೇವನಹಳ್ಳಿಯಲ್ಲಿ ಜಗತ್ತೇ ನಿಬ್ಬೆರಗಾಗುವಂತೆ ವಿಮಾನ ನಿಲ್ದಾಣ ತಲೆಯೆತ್ತಿ ನಿಂತಿದೆ. ಪ್ರತಿವರ್ಷ 1.25 ಕೋಟಿ ಜನರು ಸಂಚರಿಸುತ್ತಿದ್ದಾರೆ. ಕೆಂಪೇಗೌಡರ ಹೆಸರು ಜಗತ್ತಿನಾದ್ಯಂತ ಅಡ್ಡಾಡುತ್ತಿದೆ.
ಬೆಂಗಳೂರಿಗೆ ಒದಗಿಸಿದ ಇತರ ಯೋಜನೆಗಳು
* 2003ರಿ೦ದ ಬೆಂಗಳೂರಿನ 72,000ಕ್ಕಿ೦ತಲೂ ಅಧಿಕ ಮಕ್ಕಳಿಗೆ ಪ್ರತಿ ದಿನ ಪೌಷ್ಟಿಕ ಹಾಗೂ ಆರೋಗ್ಯಕರವಾದ ಮಧ್ಯಾಹ್ನದ ಬಿಸಿಯೂಟವನ್ನು ಒದಗಿಸುತ್ತಿದ್ದಾರೆ.
* ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 18 ಆರೋಗ್ಯ ಕೇ೦ದ್ರಗಳಲ್ಲಿ ಭಾರತದಲ್ಲಿಯೇ ಪ್ರಥಮ ಬಾರಿಗೆ ಇ-ಕ್ಷೇಮಾ ಎ೦ಬ ಆರೋಗ್ಯ ತಪಾಸಣಾ ಘಟಕಗಳ ಸ್ಥಾಪನೆ.
* ಬೆಂಗಳೂರಿನಲ್ಲಿ ಮಾಡರ್ನ್ ಆರ್ಟ್ ಗ್ಯಾಲರಿಯನ್ನು ಸ್ಥಾಪಿಸಿದ್ದಾರೆ.
* ಬೆಂಗಳೂರಿಗೆಂದೇ ಪ್ರತ್ಯೇಕ ವಿದ್ಯುತ್ ಸ್ಥಾವರ ಪಡೆಯಲು ಪ್ರಯತ್ನ ನಡೆಸುತ್ತಿದ್ದು, ಅದು ಸದ್ಯದಲ್ಲೇ ಸಾಕಾರಗೊಳ್ಳಲಿದೆ.
* ಬೆಂಗಳೂರಿನ ವಿಜಯನಗರದಲ್ಲಿ ರಾಷ್ಟ್ರೀಯ ಗುಣಮಟ್ಟ ಹೊ೦ದಿರುವ ಅಂಬೇಡ್ಕರ್ ಕ್ರೀಡಾ೦ಗಣವನ್ನು ನಿರ್ಮಿಸಿದ್ದಾರೆ.












Click it and Unblock the Notifications