ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈ ಕನ್ನಡ ಉಚಿತ ಶಾಲೆಯಲ್ಲಿ ಅಚ್ಚರಿ ಖಚಿತ

By Ashwath
|
Google Oneindia Kannada News

ಬೆಂಗಳೂರು, ಜೂ.25: ಇಂಗ್ಲಿಷ್‌ ಕಲಿಯಲು ಸ್ಪೋಕನ್‌ ಇಂಗ್ಲಿಷ್‌ ಕ್ಲಾಸ್‌ಗೆ ಹೋಗುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈಗ ನಗರದಲ್ಲಿ ಕನ್ನಡ ಬಾರದ ಅನ್ಯಭಾಷಿಕರಿಗಾಗಿ ಸ್ಪೋಕನ್‌ ಕನ್ನಡ ಕೋಚಿಂಗ್‌ ತರಗತಿ ನಡೆಯುತ್ತಿದೆ.

ಬೆಂಗಳೂರಿನಲ್ಲಿ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಪ್ರಯತ್ನಗಳನ್ನು ವಿವಿಧ ಸಂಘ ಸಂಸ್ಥೆಗಳು ನಡೆಸಿಕೊಂಡು ಬಂದಿದೆ. ಈ ಮಧ್ಯೆ ನಗರದಲ್ಲೊಬ್ಬರು ಸದ್ದಿಲ್ಲದೇ ಅನ್ಯಭಾಷಿಕರಿಗೆ ಉಚಿತವಾಗಿ ಕನ್ನಡ ಕಲಿಸುತ್ತಿದ್ದಾರೆ.

ಎಚ್‌ಎಎಲ್‌ನ ನಿವೃತ್ತ ಅಧಿಕಾರಿಯಾಗಿರುವ ನಾಗಭೂಷಣ್‌ ಅವರು ಬೆಂಗಳೂರಿನಲ್ಲಿರುವ ಅನ್ಯಭಾಷಿಕರಿಗಾಗಿ ಕನ್ನಡ ಕಲಿಸುತ್ತಿದ್ದಾರೆ. ಐದು ವರ್ಷ‌ಗಳ ಹಿಂದೆ ಕನ್ನಡ ತರಗತಿ ಆರಂಭಗೊಂಡಿದ್ದು ಇದುವರೆಗೂ ಐನೂರಕ್ಕೂ ಹೆಚ್ಚು ಜನರಿಗೆ ಕನ್ನಡ ಕಲಿಸಿದ್ದಾರೆ.[ಕನ್ನಡೇತರರ ಕನ್ನಡ ಶಾಲೆಗೆ ವರ್ಷದ ಹರ್ಷ!]

ಇಂದಿರಾನಗರದ ನಿವಾಸಿಯಾಗಿರುವ ಇವರು ವಾರಾಂತ್ಯದ ಮೂರು ದಿನಗಳಲ್ಲಿ ಸಂಜೆ 5ರಿಂದ 6.30ರವರೆಗೆ ತಮ್ಮ ಮನೆಯಲ್ಲೇ ತರಗತಿಗಳನ್ನು ನಡೆಸುತ್ತಿದ್ದಾರೆ. 10-15 ಮಂದಿ ಸದಸ್ಯರ ತಂಡಕ್ಕೆ ಒಂದು ತಿಂಗಳ ಕಾಲ ಉಚಿತವಾಗಿ ವ್ಯವಹಾರಕ್ಕೆ ತಕ್ಕಷ್ಟು ಕನ್ನಡವನ್ನು ಕಲಿಸುತ್ತಿದ್ದಾರೆ.

Nagabhushan hal kannada class

ಎಚ್‌ಎಎಲ್‌ನಿಂದ ನಿವೃತ್ತನಾದ ಮೇಲೆ ಕನ್ನಡ ಸೇವೆ ಮಾಡಬೇಕು ಎಂದು ಯೋಚಿಸಿ ಈ ತರಗತಿಯನ್ನು ಆರಂಭಿಸಿದ್ದೇನೆ. ಈ ತರಗತಿಯಿಂದ ಬಹಳಷ್ಟು ಜನ ವ್ಯವಹಾರ ಜ್ಞಾನಕ್ಕಾಗುವಷ್ಟು ಕನ್ನಡ ಮಾತನಾಡಲು ಕಲಿತಿದ್ದಾರೆ ಎಂದು ನಾಗಭೂಷಣ್‌ ಹೇಳುತ್ತಾರೆ.

ಎಳವೆಯಲ್ಲೇ ಕನ್ನಡ ಸಾಹಿತ್ಯದ ಬಗ್ಗೆ ಅಭಿಮಾನ ಬೆಳೆಸಿಕೊಂಡಿದ್ದ ನಾಗಭೂಷಣ್‌ ಅವರು ವಿಮಾನಯಾನ ಮತ್ತು ನೌಕಾಯಾನ ಹೆಸರಿನ ಎರಡು ಕವನ ಸಂಕಲನವನ್ನು ಹೊರ ತಂದಿದ್ದಾರೆ. ಎಚ್‌ಎಎಲ್‌‌ನಲ್ಲಿ ಕನ್ನಡ ಸಂಘವನ್ನು ಹುಟ್ಟು ಹಾಕಿದ ಕೀರ್ತಿ‌ ಇವರಿಗೆ ಸಲ್ಲುತ್ತದೆ. ವರ್ತೂ‌ರು ವಿಧಾನಸಭಾ ವ್ಯಾಪ್ತಿಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಮೂರು ವರ್ಷ‌ಗಳ ಕಾಲ ಅಧ್ಯಕ್ಷರಾಗಿಯೂ ಕಾರ್ಯ‌ ನಿರ್ವ‌‌‌ಹಿಸಿದ್ದಾರೆ. ಉಡುಪಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಕನ್ನಡಶ್ರೀ ಪ್ರಶಸ್ತಿಯನ್ನು ಸಹ ಇವರು ಪಡೆದಿದ್ದಾರೆ. ಸೇವೆಯಿಂದ ನಿವೃತ್ತರಾದರೂ ಉಚಿತವಾಗಿ ಕನ್ನಡ ಕಲಿಸುವ ಇವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

ಉಚಿತವಾಗಿ ಕನ್ನಡ ಕಲಿಯುವ ಆಸಕ್ತರು ಈ ವಿಳಾಸಕ್ಕೆ ಭೇಟಿ ನೀಡಿ ಎನ್‌.ನಾಗಭೂಷಣ್‌ ಅವರನ್ನು ಸಂಪರ್ಕಿಸಬಹುದು.
ಎನ್‌.ನಾಗಭೂಷಣ್‌
"ಸ್ನೇಹ"
ಇಂದಿರಾ ನಗರ ಕ್ಲಬ್‌‌ ಹತ್ತಿರ
531, 4ನೇ ಕ್ರಾಸ್‌
9 ನೇ ಎಚ್‌ಎಎಲ್‌ 2 ನೇಹಂತ
ಇಂದಿರಾನಗರ- ಬೆಂಗಳೂರು
ದೂ: 080 2529-3664
ಮೊಬೈಲ್‌ : 98440-51067

free kannada class
English summary
Nagabhushan has successfully completed five years of teaching Kannada language for free. His classes are so effective that within a month, people who attended his class start conversing in Kannada.A resident of 9th Main, HAL 2nd stage, Indiranagar, Nagabhushan took it upon himself to teach Kannada language to one and all for free.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X