ಏಪ್ರಿಲ್ 24 ರಿಂದ ಮೇ 23ರವರೆಗೆ 'ಖಾದಿ ಉತ್ಸವ', ಸಿಎಂ ಉದ್ಘಾಟನೆ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 15: ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಯೋಗದಲ್ಲಿ ರಾಷ್ಟ್ರಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ "ಖಾದಿ ಉತ್ಸವ"ವನ್ನು ಏಪ್ರಿಲ್ 24ರಿಂದ ಮೇ 23ರವರೆಗೆ ಬೆಂಗಳೂರಿನ ಗಾಂಧಿನಗರದ ಫ್ರೀಡಂ ಪಾರ್ಕ್ ನಲ್ಲಿ ಏರ್ಪಡಿಸಿದೆ.

ಏಪ್ರಿಲ್ 24ರಂದು ಫ್ರೀಡಂ ಪಾರ್ಕ್ ನ ಪೀಪಲ್ ಪ್ಲಾಜಾದಲ್ಲಿ ಸಂಜೆ 4ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವಸ್ತು ಪ್ರದರ್ಶನ ಉದ್ಫಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಗಾಂಧಿನಗರ ಕ್ಷೇತ್ರದ ಶಾಸಕರಾದ ಶ್ರೀ ದಿನೇಶ್ ಗುಂಡೂರಾವ್ ಅವರು ವಹಿಸಲಿದ್ದಾರೆ. ಮಳಿಗೆಗಳ ಉದ್ಫಾಟನೆಯನ್ನು ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ಮಾಡಲಿದ್ದಾರೆ.[ಕುಲ್ಫಿಯಷ್ಟೇ ತಂಪಾದ ಹಿಮಾಚಲದ ಚೆಲುವೆಯರ ಸೆಲ್ಫಿ!]

Siddaramaiah

ಪ್ರಾತ್ಯಕ್ಷಿಕೆ ಉದ್ಫಾಟನೆಯನ್ನು ಬೆಂಗಳೂರು ನಗರಾಭಿವೃದ್ಧಿ ಮತ್ತು ನಗರ ಯೋಜನಾ ಸಚಿವರಾದ ಕೆ.ಜೆ.ಜಾರ್ಜ್ ಮಾಡಲಿದ್ದಾರೆ. ಥೀಮ್ ಫೆವಿಲಿಯನ್ ಉದ್ಫಾಟನೆಯನ್ನು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವನಹಳ್ಳಿ ಎನ್. ರಮೇಶ್ ನೆರವೇರಿಸಲಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಮೇಯರ್ ಜಿ. ಪದ್ಮಾವತಿ, ಸಂಸದ ಪಿ.ಸಿ.ಮೋಹನ್ ಸೇರಿದಂತೆ ಅನೇಕರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Khadi utsav in Bengaluru from April 24th to May 23rd. Utsav will be inaugurate by chief minister Siddaramaiah.
Please Wait while comments are loading...