ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಬಂದ್: ವಾಟಾಳ್ ನಾಗರಾಜರಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ

|
Google Oneindia Kannada News

ಬೆಂಗಳೂರು, ಏಪ್ರಿಲ್ 6 : ಏಪ್ರಿಲ್ ಹನ್ನೆರಡನೇ ತಾರೀಕು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಕರ್ನಾಟಕ ಬಂದ್ ಗೆ ಕರೆ ನೀಡಿರುವುದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗುತ್ತದೆಯಾ? ಹೀಗೊಂದು ಚರ್ಚೆಯನ್ನು ಫೇಸ್ ಬುಕ್ ಮೂಲಕ ಹುಟ್ಟು ಹಾಕಿದ್ದಾರೆ ಆತ್ರಾಡಿ ಸುರೇಶ್ ಹೆಗ್ಡೆ.

ಜತೆಗೆ ಈ ಬಗ್ಗೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಸರ್, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವಾಗ ಕರ್ನಾಟಕ ಬಂದ್ ಗೆ ಕರೆ ನೀಡಿರುವುದು ನೀತಿ ಸಂಹಿತೆಯ ಉಲ್ಲಂಘನೆ. ಇದು ರಾಜಕೀಯ ಪ್ರೇರಿತ. ಏಕೆಂದರೆ ವಾಟಾಳ್ ನಾಗರಾಜ್ ಓರ್ವ ಸಕ್ರಿಯ ರಾಜಕಾರಣಿ.

ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?

ಹಾಗಾಗಿ ಬಂದ್ ಅನ್ನು ಮೇ ಹದಿನೈದರವರೆಗೆ ಮುಂದೂಡುವಂತೆ ನಿರ್ದೇಶಿಸಲು ವಿನಂತಿಸುತ್ತೇನೆ ಎಂದು ಆತ್ರಾಡಿ ಸುರೇಶ್ ಹೆಗ್ಡೆ ಮನವಿ ಮಾಡಿದ್ದಾರೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ಏಪ್ರಿಲ್ ಐದರಂದು ತಮಿಳುನಾಡಿನಲ್ಲಿ ರಾಜ್ಯ ಬಂದ್ ನಡೆದಿತ್ತು. ಇದಕ್ಕೆ ಪ್ರತಿಯಾಗಿ ಏಪ್ರಿಲ್ ಹನ್ನೆರಡನೇ ತಾರೀಕು ಕರ್ನಾಟಕ ರಾಜ್ಯ ಬಂದ್ ಗೆ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.

ಕಾವೇರಿ ವಿವಾದ : ಏಪ್ರಿಲ್ 12ರಂದು ಕರ್ನಾಟಕ ಬಂದ್ಕಾವೇರಿ ವಿವಾದ : ಏಪ್ರಿಲ್ 12ರಂದು ಕರ್ನಾಟಕ ಬಂದ್

English summary
Pro Kannada activist, former MLA Vatal Nagaraj called for Karnataka Bandh on April 12th to protest against Cauvery Management Board. Is it a violation of election code of conduct by Vatal Nagaraj? Here is the story about complaint through facebook to Karnataka chief election officer by Athradi Suresh Hegde.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X