ಕೆಲವೇ ದಿನಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕನ್ನಡದ ದೀಪ?

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,15: ಕಚೇರಿಯಲ್ಲಿ ಕನ್ನಡದಲ್ಲಿಯೇ ವ್ಯವಹರಿಸಿ ಎಂಬ ಸೂಚನಾ ಫಲಕವಿದ್ದರೂ ಕನ್ನಡ ಬಳಸುವುದು ತೀರಾ ಕಡಿಮೆ. ಇದನ್ನು ಗಮನಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒಂದು ದಿಟ್ಟ ನಿರ್ಧಾರಕ್ಕೆ ಬಂದಿದ್ದು, ಸರ್ಕಾರಿ ಕಚೇರಿಯ ಎಲ್ಲಾ ರೂಪ ರಚನೆಗಳನ್ನು ಕನ್ನಡಮಯವಾಗಿಸಲು ಹೊರಟಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರಿ ಕಚೇರಿಯಲ್ಲಿ ಕನ್ನಡವನ್ನು ಆಡಳಿತಾತ್ಮಕ ಭಾಷೆಯಾಗಿ ಜಾರಿಗೆ ತರಬೇಕೆಂದು ಸರ್ಕಾರಕ್ಕೆ ಮನವಿ ಮಾಡಿತ್ತು. ಇದಕ್ಕೆ ಸಮ್ಮತಿ ಸೂಚಿಸಿದ ಸರ್ಕಾರ ಅತೀ ಶೀಘ್ರದಲ್ಲಿಯೇ ಈ ವ್ಯವಸ್ಥೆಯನ್ನು ಜಾರಿಗೆ ತರುವ ಭರವಸೆ ನೀಡಿದೆ.[ಗ್ರಾಹಕ ಸೇವೆ ಹಿಂದಿಯಲ್ಲೇ ಏಕೆ? ಕನ್ನಡದಲ್ಲೇ ಇರ್ಲಿ]

Kannada to replace all languages in all government forms in Karnataka?

ಖಾಸಗಿ ಕಚೇರಿಗಳಲ್ಲದೇ ಸರ್ಕಾರಿ ಕಚೇರಿಗಳಲ್ಲೂ ಕನ್ನಡ, ಇಂಗ್ಲೀಷ್, ಕೆಲವೊಮ್ಮೆ ಹಿಂದಿ ಭಾಷೆಯ ಬಳಕೆ ಮಾಡಲಾಗುತ್ತಿತ್ತು. ಇದನ್ನು ಮನಗಂಡ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಈ ನಿರ್ಣಯಕ್ಕೆ ಬಂದು ಕನ್ನಡ ಉಳಿಸಿ ಬೆಳೆಸುವ ಕೆಲಸಕ್ಕೆ ಮುಂದಾಗಿದೆ.

ಬೇರೆ ಭಾಷೆಗಳ ಹಾವಳಿಯಿಂದ ಕನ್ನಡ ಎಲ್ಲಿ ನಲುಗಿಹೋಗುವುದೋ ಎಂಬ ಆತಂಕದಲ್ಲಿ ಈ ನಿಲುವಿಗೆ ಬರಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹನುಮಂತಯ್ಯ ತಿಳಿಸಿದರು.[ಮೂಲ ಅಮೆರಿಕಾ ಜನಾಂಗದ ಭಾಷೆಯಲ್ಲಿ ಕನ್ನಡದ ಪ್ರಭಾವ]

ಪದವಿ ಹಂತದ ಎಲ್ಲಾ ವೃತ್ತಿಪರ ಕೋರ್ಸ್ ಗಳಲ್ಲಿ ಕನ್ನಡ ಬಾಷೆಯನ್ನು ಕಡ್ಡಾಯಗೊಳಿಸಬೇಕೆಂಬ ನಿಯಮಕ್ಕೆ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಇದು ಮುಂದಿನ ಶೈಕ್ಷಣಿಕ ವರ್ಷಗಳಲ್ಲಿ ಜಾರಿ ಬರಲಿದೆ ಎಂಬ ಮಾಹಿತಿ ನೀಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada is going to replace all languages in all government forms in Karnataka. Kannada Development Authority (KDA) has asked the government to implement Kannada as the official language of administration. Hence government forms in the state may soon be entirely in Kannada. Currently government applications can be filled in Kannada, English or, in some cases, Hindi.
Please Wait while comments are loading...