ಮಳೆ ಬಂತು, ಕೊಳಚೆ ನೀರಿನ ಕೆರೆಯಾದ ಬೆಂಗಳೂರು

Written By:
Subscribe to Oneindia Kannada

ಬೆಂಗಳೂರು, ಜುಲೈ, 29: ಬೆಂಗಳೂರಿಗೆ ಬಿಡದ ಮಳೆಯ ಕಾಟ, ಗುರುವಾರ ರಾತ್ರಿಯಿಂದ ಆರಂಭವಾದ ಮಳೆ ಶುಕ್ರವಾರವೂ ಮುಂದುವರಿದಿದೆ. ರಾತ್ರಿ ಜೋರಾಗಿದ್ದ ಮಳೆ ಬೆಳಗ್ಗೆ ಜಿಟಿ ಜಿಟಿ ಎಂದು ರಾಗ ಎಳೆಯುತ್ತ ಸಾಗಿದೆ.

ಮಳೆ ಪರಿಣಾಮವನ್ನು ಹೊಸದಾಗಿ ಹೇಳಬೇಕಿಲ್ಲ. ಸಿಲ್ಕ್ ಬೋರ್ಡ್, ನಾಯಂಡಹಳ್ಳಿಯಲ್ಲಿ ನೀರು ತುಂಬಿಕೊಂಡಿದೆ. ಮೆಜೆಸ್ಟಿಕ್, ಮಾರುಕಟ್ಟೆ, ಜಯನಗರ, ಬಸವನಗುಡಿ, ಕೆ ಆರ್ ಪುರ ಸೇರಿದಂತೆ ಎಲ್ಲ ಕಡೆ ಮಳೆಯಾಗುತ್ತಿದೆ.[ಬೆಂಗಳೂರಿನ ಜನಜೀವನವನ್ನು 'ಬಂದ್' ಮಾಡಿದ ಜಿಟಿಜಿಟಿ ಮಳೆ]

ಜೆ.ಪಿ.ನಗರದ ರಾಗಿಗುಡ್ಡ, ಹಳೆ ಏರ್‌ಪೋರ್ಟ್‌ ರಸ್ತೆಯ ಕಮಾಂಡೋ ಆಸ್ಪತ್ರೆ, ಬಿಟಿಎಂ ಬಡಾವಣೆಯಲ್ಲಿ ಮರಗಳು ಧರೆಗುರುಳಿವೆ. ಕೋಡಿಚಿಕ್ಕನಹಳ್ಳಿಯಲ್ಲಿ ರಸ್ತೆ ಮೇಲೆ 3 ರಿಂದ 4 ಅಡಿ ನೀರು ನಿಂತಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಬೆಂಗಳೂರಲ್ಲಿ ಮಳೆ ಆರ್ಭಟ ಹೇಗಿದೆ,, ಚಿತ್ರಗಳಲ್ಲಿ ನೋಡಿ..

ಹೊಸೂರು ರಸ್ತೆ

ಹೊಸೂರು ರಸ್ತೆ

ಬೆಂಗಳೂರಿನ ಪ್ರಸಿದ್ಧ ಹೊಸೂರು ರಸ್ತೆಯೇ ಸರೋವರವಾಗಿದೆ. ಮಳೆ ಮತ್ತು ಪರಿಣಾಮ ರಸ್ತೆಗೆ ನುಗ್ಗಿದ ನೀರು ಜನರಿಗೆ ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ಕಳೆಯುವ ಅವಕಾಶ ಮಾಡಿಕೊಟ್ಟಿದೆ.

ರಸ್ತೆ ಎಲ್ಲಿದೆ?

ರಸ್ತೆ ಎಲ್ಲಿದೆ?

ವೀರಸಂದ್ರದ ಬಳಿ ರಸ್ತೆ ಮೇಲೆ ನೀರು ನಿಂತಿದ್ದು ನೀರು ತೆಗೆದು ಸಂಚಾರಕ್ಕೆ ಅವಕಾಶ ಮಾಡಿಕೊಡಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟರು.

ಟ್ರಾಫಿಕ್ ಜಾಮ್

ಟ್ರಾಫಿಕ್ ಜಾಮ್

ಮಳೆ ಪರಿಣಾಮ ಟ್ರಾಫಿಕ್ ನಲ್ಲಿ ಸಿಕ್ಕಿಹಾಕಿಕೊಂಡವರು ಅತ್ತ ಕಚೇರಿಗೆ ತೆರಳಲಾರದೇ ಟ್ರಾಫಿಕ್ ಗೆ ಹಿಡಿಶಾಪ ಹಾಕಿದರು.

ಸಿಬ್ಬಂದಿಗೆ ನಮೋ

ಸಿಬ್ಬಂದಿಗೆ ನಮೋ

ವಾಹನ ಸಂಚಾರ ಸುಗಮಗೊಳಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮಿಸುತ್ತಿರುವುದು.

ರಸ್ತೆ ಮೇಲೆ ತುಂಬಿ ಹರಿದ ನೀರು

ರಸ್ತೆ ಮೇಲೆ ತುಂಬಿ ಹರಿದ ನೀರು

ವೀರಸಂದ್ರದ ಬಳಿಯ ರಸ್ತೆಯಲ್ಲಿ ನೀರು ತುಂಬಿದ್ದು ನಾಗರಿಕರು ಪರ್ಯಾಯ ಮಾರ್ಗ ಬಳಕೆ ಮಾಡಬೇಕು ಎಂದು ಬೆಂಗಳೂರು ಸಿಟಿ ಪೊಲೀಸರು ಮನವಿ ಮಾಡಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ರಸ್ತೆ

ಎಲೆಕ್ಟ್ರಾನಿಕ್ ಸಿಟಿ ರಸ್ತೆ

ಎಲೆಕ್ಟ್ರಾನಿಕ್ ಸಿಟಿಗೆ ತರಳುವ ರಸ್ತೆಯ ಸದ್ಯದ ಸ್ಥಿತಿ.

ಮೊಣಕಾಲುದ್ದ ನೀರು

ಮೊಣಕಾಲುದ್ದ ನೀರು

ರಸ್ತೆಯಲ್ಲಿ ಎರಡು ಅಡಿಗಿಂತಲೂ ಹೆಚ್ಚಿನ ನೀರು ನಿಂತಿದ್ದು ದ್ವಿಚಕ್ರ ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ.

 ಸಿಲ್ಕ್ ಬೋರ್ಡ್ ಪರಿಸ್ಥಿತಿ

ಸಿಲ್ಕ್ ಬೋರ್ಡ್ ಪರಿಸ್ಥಿತಿ

ಸಿಲ್ಕ್ ಬೋರ್ಡ್ ಸುತ್ತಮುತ್ತಲ ಭಾಗದಲ್ಲಿ ನೀರು ತುಂಬಿಕೊಂಡಿದ್ದು ರಸ್ತೆ ಮಧ್ಯೆ ಸಿಕ್ಕಿಹಾಕಿಕೊಂಡವರು ಅಲ್ಲಿಯೇ ಇದ್ದಾರೆ.

ಬಿಟಿಎಂ ಲೇಔಟ

ಬಿಟಿಎಂ ಲೇಔಟ

ಬಿಟಿಎಂ ಲೇಔಟ್ ಜಲಾವೃತವಾಗಿದ್ದು ಮನೆಗಳಿಗೂ ನೀರು ನುಗ್ಗಿದೆ.

ಅಶೋಕ ನಗರ

ಅಶೋಕ ನಗರ

ಬೃಹತ್ ಗಾತ್ರದ ಮರವೊಂದು ಅಶೋಕನಗರದಲ್ಲಿ ಧರೆಗುರುಳಿದ್ದು ಸಿಬ್ಬಂದಿ ತೆರವು ಮಾಡಿದರು.

ಟ್ರಾಫಿಕ್ ಜಾಮ್ ಜಾಮ್

ಟ್ರಾಫಿಕ್ ಜಾಮ್ ಜಾಮ್

ಬೆಂಗಳೂರಿನ ಎಲ್ಲ ಕಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು ಪರ ಊರಿಗೆ ತೆರಳುವವರು ಸಂಕಷ್ಟ ಪಡಬೇಕಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Heavy rain lashes Bengaluru on July 29, 2016 morning. Bengaluru grappling with water-logged streets, massive traffic jams due to heavy rain.
Please Wait while comments are loading...