ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಪ್ರವಾಹ ಸ್ಥಿತಿ ಸಾಧ್ಯತೆ, ಹವಾಮಾನ ಇಲಾಖೆ ಎಚ್ಚರಿಕೆ

By Manjunatha
|
Google Oneindia Kannada News

ಬೆಂಗಳೂರು, ಜೂನ್ 04: ನಗರದಲ್ಲಿ ಇನ್ನು 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ವಿಪತ್ತು ನಿಗಾ ಸಂಸ್ಥೆ ಎಚ್ಚರಿಕೆ ನೀಡಿದೆ.

ರಾಜರಾಜೇಶ್ವರಿ ನಗರ, ಬೆಂಗಳೂರಿನ ಪೂರ್ವ ಮತ್ತು ದಕ್ಷಿಣ ವಲಯ, ಮಹದೇವಪುರ ವಲಯ, ಬೊಮ್ಮನಹಳ್ಳಿ ವಲಯಗಳ ಜನಭಾರಿ ಸಮಸ್ಯೆ ಎದುರಿಸಲಿದ್ದಾರೆ, ನಗರದ ತಗ್ಗು ಪ್ರದೇಶಕ್ಕೆ ಭಾರಿ ನೀರು ನುಗ್ಗಿ ಜನಜೀವನ ಅಸ್ಥವ್ಯಸ್ಥವಾಗಬಹುದು ಎಂದು ರಾಷ್ಟ್ರೀಯ ವಿಪತ್ತು ನಿಗಾ ಸಂಸ್ಥೆ ಹೇಳಿದೆ.

ಸತತ ಮೂರನೇ ವರ್ಷವೂ ದೇಶಾದ್ಯಂತ ಸಾಮಾನ್ಯ ಮುಂಗಾರು! ಸತತ ಮೂರನೇ ವರ್ಷವೂ ದೇಶಾದ್ಯಂತ ಸಾಮಾನ್ಯ ಮುಂಗಾರು!

ಜೂನ್ 3 ರಿಂದ ಜೂನ್ 9 ರವರೆಗೂ ಇದೇ ಸ್ಥಿತಿ ಮುಂದುವರೆಯಲಿದ್ದು, ನಗರದಲ್ಲಿ ಭಾರಿ ಮಳೆ ಆಗಲಿದೆ ಎಂದಿದೆ ರಾಷ್ಟ್ರೀಯ ವಿಪತ್ತು ನಿಗಾ ಸಂಸ್ಥೆ. ಅಲ್ಲದೆ, ಕರ್ನಾಟಕದ 26 ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ ಎಂದು ಅದು ಹೇಳಿದೆ.

Flood alert for Bengaluru in 24 hours

ಈಗಾಗಲೇ ಮಳೆಯಿಂದಾಗಿ ಬೆಂಗಳೂರು ನಗರದ ಕೆಲವು ಭಾಗಗಳಲ್ಲಿ ಜನಜೀವನ ಅಸ್ಥವ್ಯವಸ್ಥವಾಗಿದ್ದು ಈ ಸ್ಥಿತಿ ಇನ್ನೂ ಬಿಗಡಾಯಿಸಲಿದೆ ಎಂದು ವಿಪತ್ತು ನಿಗಾ ಸಂಸ್ಥೆ ಹೇಳುತ್ತಿರುವುದು ನಗರವಾಸಿಗಳ ಆತಂಕಕ್ಕೆ ಕಾರಣವಾಗಿದೆ.

ಕುಂಭದ್ರೋಣ ಮಳೆ-ನೆರೆಗೆ ತತ್ತರಿಸಿ ಹೋಯಿತು ಮಂಗಳೂರು!ಕುಂಭದ್ರೋಣ ಮಳೆ-ನೆರೆಗೆ ತತ್ತರಿಸಿ ಹೋಯಿತು ಮಂಗಳೂರು!

ಈಗಾಗಲೇ ಮಳೆಯಿಂದಾಗಿ ನಗರದಲ್ಲಿ ಕೆಲ ಜೀವಗಳು ಬಲಿಯಾಗಿದ್ದು, ಮಳೆ ಕಾರಣದಿಂದ ಅಸುನೀಗಿದವರಿಗೆ 5 ಲಕ್ಷ ರೂಪಾಯಿಯನ್ನು ಮುಖ್ಯಮಂತ್ರಿಗಳು ಈಗಾಗಲೇ ಘೋಷಿಸಿದ್ದಾರೆ.

English summary
Natural Disaster Monitoring Centre issued alert of flood in Bengaluru in next 24 hours. It said Rajarajeshwari Nagar zone, East zone, South zone, Mahadevapura zone and Bommanahalli zone are vulnerable to flooding and are expected to get severely inundated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X