ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಜುವ ಸಾಹಸಕ್ಕಿಳಿದು ಪ್ರಾಣ ಕಳೆದುಕೊಂಡ ವಿದ್ಯಾರ್ಥಿಗಳು

|
Google Oneindia Kannada News

ಬೆಂಗಳೂರು, ಏ. 24 : ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರು ಬಂಡೆ ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿದ್ದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ನಾಲ್ಕು ಶವಗಳು ಗುರುವಾರ ಪತ್ತೆಯಾಗಿದ್ದು, ಇನ್ನೊಂದು ಶವ ಶುಕ್ರವಾರ ಬೆಳಗ್ಗೆ ಸಿಕ್ಕಿದೆ.

ಮೃತರೆಲ್ಲರೂ ಚಿಕ್ಕಜಾಲದ ರೇವಣಸಿದ್ದೇಶ್ವರ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್ಸ್‌ನ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳು. ಗುರುವಾರ ಮಧ್ಯಾಹ್ನ ಊಟದ ಸಮಯದಲ್ಲಿ ಈಜಾಡಲೆಂದು 8 ವಿದ್ಯಾರ್ಥಿಗಳು ದೇವನಹಳ್ಳಿ ಸಮೀಪದ ಬೆಟ್ಟಹಲಸೂರು ಬಂಡೆಯ ಕ್ವಾರಿಗೆ ಆಗಮಿಸಿದ್ದರು.

Bettahalasur quarry

ಮೃತಪಟ್ಟವರನ್ನು ನೇಪಾಳ ಮೂಲದ ಖಾಮ್‌ಪಟಾ ಲಿಮ್ (19), ರಾಜೇಶ್ (20), ಬೆಂಗಳೂರಿನ ಗಂಗಾನಗರದ ಹರೀಶ್ (19), ವಿದ್ಯಾರಣ್ಯಪುರದ ಅರುಣ್ ಚಂದ್ರ ಶೆಟ್ಟಿ (19), ಅಮೃತಹಳ್ಳಿಯ ನಂದಕುಮಾರ್ (20) ಎಂದು ಗುರುತಿಸಲಾಗಿದೆ. [ಕಲ್ಲು ಕ್ವಾರಿಯಲ್ಲಿ ಮುಳುಗಿ ಮೂರು ಮಕ್ಕಳ ಸಾವು]

ರಾಜೇಶ್ ಮತ್ತು ಅರುಣ್ ಚಂದ್ರ ಶೆಟ್ಟಿ ಕಡಿಮೆ ಆಳವಿರುವ ಜಾಗದಲ್ಲಿ ಸ್ನಾನ ಮಾಡುತ್ತಿದ್ದರು. ರಾಜೇಶ್ ಸ್ನಾನ ಮಾಡುತ್ತಾ ಹೆಚ್ಚು ಆಳವಿರುವ ಸ್ಥಳಕ್ಕೆ ತೆರಳಿ ಮುಳುಗಿದ. ಈ ಸಂದರ್ಭದಲ್ಲಿ ಅವರನ್ನು ರಕ್ಷಿಸಲು ಹೋದ ಖಾಮ್‌ಪಟಾ ಲಿಮ್ ಸೇರಿದಂತೆ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. [ಅಕ್ರಮ ಕಲ್ಲು ಗಣಿಗಾರಿಕೆ ವಿರೋಧಿಸಿ ಪ್ರತಿಭಟನೆ]

ಎಂಟು ವಿದ್ಯಾರ್ಥಿಗಳ ಪೈಕಿ ಈಜು ಬಾರದ ಸಿ.ಪಿ.ಕಾರ್ತಿಕ್‌, ಹರಿನಂದನ್‌ ಮತ್ತು ನಿತಿನ್‌ ಜೈನ್‌ ಅವರು ದಡದಲ್ಲಿದ್ದರು. ಸ್ನೇಹಿತರು ನೀರಿನಲ್ಲಿ ಮುಳುಗಿದ್ದನ್ನು ಕಂಡ ಅವರು ಸ್ಥಳೀಯರು ಮತ್ತು ಪೊಲೀಸರಿಗೆ ವಿಷಯ ಮುಟ್ಟಿಸಿದರು.

ಹರೀಶ್ ಶವ ಇಂದು ಬೆಳಗ್ಗೆ ಪತ್ತೆ : ಹರೀಶ್ ಶವ ಗುರುವಾರ ರಾತ್ರಿಯ ತನಕ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ನಾಲ್ವರ ಮೃತ ದೇಹಗಳನ್ನು ಅಗ್ನಿ ಶಾಮಕ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಹೊರಗೆ ತೆಗೆದಿದ್ದರು, ಇಂದು ಬೆಳಗ್ಗೆ ಹರೀಶ್ ಶವ ದೊರಕಿದೆ. [ಪಿಟಿಐ ಚಿತ್ರ]

English summary
Five engineering students of Sri Revanna Siddeshwara Engineering College have drowned and died when they went to swim in a stone-quarry pit in Bettahalasur of Chikkajala, Bengaluru on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X