ಹಳೆ ನೋಟು ವಿನಿಮಯ, ಡಿಕೆಶಿ ಮೇಲೆ 'ಇಡಿ' ಕಣ್ಣು

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಆಗಸ್ಟ್ 04:ಇಂಧನ ಸಚಿವ ಡಿ.ಕೆ ಶಿವಕುಮಾರ್ ಅವರ ಶಾಲೆಯಲ್ಲಿ ಅಪನಗದೀಕರಣದ ನಂತರವೂ ಹಳೆ ನೋಟುಗಳ ಚಲಾವಣೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ಸಾಕ್ಷ್ಯ ಕಲೆ ಹಾಕಲು ಜಾರಿ ನಿರ್ದೇಶನಾಲಯ ಮುಂದಾಗಿದೆ.

ಅಪನಗದೀಕರಣದ ನಂತರ ನಿಷೇಧಿತ ನೋಟುಗಳನ್ನು ಅಕ್ರಮವಾಗಿ ಚಲಾವಣೆ ಮಾಡಿರುವ ಆರೋಪದ ಕೇಳಿ ಬಂದಿದ್ದು, 2,000 ಕೋಟಿ ರು ಅವ್ಯವಹಾರದ ಶಂಕೆ ವ್ಯಕ್ತವಾಗಿದೆ.

D K Shivakumar stares at arrest as ED seeks evidence in Rs 2,000 crore demonetised notes case

ಡಿ. ಕೆ ಶಿವಕುಮಾರ್ ಅವರ ವಿರುದ್ಧ ಜಾರಿ ನಿರ್ದೇಶನಾಲಯದಲ್ಲಿ ಮತ್ತೊಂದು ದೂರು ದಾಖಲಾಗಿದೆ. ಆದರೆ, ಗುರುವಾರದಂದು ದಾಖಲಾದ ದೂರಿಗೂ ಐಟಿ ದಾಳಿಗೂ ಸಂಬಂಧವಿಲ್ಲ.

ಗುರುಪ್ರಸಾದ್ಎಂಬುವರು ನೀಡಿದ ದೂರಿನ ಅನ್ವಯ, ಕನಕಪುರ ಕ್ಷೇತ್ರದಲ್ಲಿ ಆಯ್ದ ವ್ಯಕ್ತಿಗಳಿಗೆ ಅಪನಗದೀಕರಣದ ನಂತರ ನಿಷೇಧಿತ ನೋಟುಗಳನ್ನು ಹಂಚಲಾಗಿದ್ದು, ನೋಟುಗಳನ್ನು ಚಲಾವಣೆ ಮಾಡುವುದು, ಹೊಸ ಕರೆನ್ಸಿಯಾಗಿ ಪರಿವರ್ತಿಸಲು ಆದೇಶಿಸಲಾಗಿದೆ. ಮನಿಲಾಂಡ್ರಿಂಗ್ ಮೂಲಕ 2,000 ಕೋಟಿ ರು ಗೂ ಅಧಿಕ ನೋಟುಗಳನ್ನು ಚಲಾವಣೆಗೆ ಬಿಡಲಾಗಿದೆ.

ರೈತರ ಹೆಸರಿನಲ್ಲಿ ಬೇನಾಮಿ ಹೆಸರಿನಲ್ಲಿ ರೈತರ ಭೂಮಿ ವಶಕ್ಕೆ ಪಡೆದಿರುವುದು, ಸೋಲಾರ್ ಪವರ್ ಕಾರ್ಪೊರೇಷನ್ ಆಪ್ ಇಂಡಿಯಾಕ್ಕೆ ಇದೇ ಭೂಮಿಯನ್ನು ಗುತ್ತಿಗೆಗೆ ನೀಡಿರುವುದು ಸೇರಿದಂತೆ ಹಲವು ಆರೋಪಗಳನ್ನು ಡಿಕೆ ಶಿವಕುಮಾರ್ ಮೇಲೆ ಹೊರೆಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Enforcement Directorate is all set to step in to investigate a case relating to D K Shivakumar. An ED official confirmed to OneIndia that it has sought evidence following a complaint made against Karnataka's Energy Minister.
Please Wait while comments are loading...