Social Media Toxic: "ಸೋಶಿಯಲ್ ಮೀಡಿಯಾ ನೋಡ್ತಿದ್ರೆ ಭಾರತದಲ್ಲಿ ಬಹಳಷ್ಟು ಜನರಿಗೆ ಮಾನಸಿಕ ಸಮಸ್ಯೆಗಳಿವೆ ಅನ್ಸುತ್ತೆ"
Social Media Toxic: ಸೋಶಿಯಲ್ ಮೀಡಿಯಾ ನೋಡ್ತಿದ್ರೆ ಭಾರತದಲ್ಲಿ ಬಹಳಷ್ಟು ಜನರಿಗೆ ಮಾನಸಿಕ ಸಮಸ್ಯೆಗಳಿವೆ ಅನ್ಸುತ್ತೆ - ಸೋಷಿಯಲ್ ಮೀಡಿಯಾದಲ್ಲಿ ಕೆಲವರ ವರ್ತನೆಯ ಬಗ್ಗೆ ಬರಹಗಾರ ಸುನೀಲ್ ಜೆ ಅವರ ಬರಹ ಇಲ್ಲಿದೆ.
ಸೋಶಿಯಲ್ ಮೀಡಿಯಾ ನೋಡ್ತಿದ್ರೆ ಭಾರತದಲ್ಲಿ ಬಹಳಷ್ಟು ಜನರಿಗೆ ಮಾನಸಿಕ ಸಮಸ್ಯೆಗಳಿವೆ ಅನ್ಸುತ್ತೆ. ನಾನು ತಮಾಷೆ ಮಾಡ್ತಿದೀನಿ ಅನ್ಕೊಬೇಡಿ. ಯಾರಾದ್ರೂ ಹುಡುಗಿಯರು ಅಥವಾ ಹೆಂಗಸರ ಫೋಟೋ ಕಂಡ್ರೆ ಸೂ*, ಲೌ* ಇತ್ಯಾದಿ ಕೆಟ್ಟಕೆಟ್ಟ ಕಮೆಂಟ್ ಹಾಕಿರ್ತಾರೆ. ಯಾವನೋ ಮತ್ತೊಬ್ಬನ ವೀಡಿಯೊ, ಫೋಟೋ ಅಥವಾ ವೈಯಕ್ತಿಕ ಮಾಹಿತಿ ತಗೊಂಡು ಅದೇನೋ ರೋಸ್ಟ್ ಮಾಡ್ತೀನಿ ಅಂತ ಕ್ರಿಂಜ್ ವೀಡಿಯೊಗಳನ್ನ ಮಾಡ್ತಾರಲ್ಲ ಅವರಿಗೆ "ನೀನು ಸೂಪರ್ ಗುರೂ, ಎಲ್ಲಿದ್ದೆ ಗುರೂ ಇಲ್ಲಿ ತನಕ" ಅಂತೆಲ್ಲ ಹೊಗಳೋದು.

ಮಾಂಸಾಹಾರದ ರೆಸಿಪಿ ವೀಡಿಯೊಗಳ ಮೇಲೆ "ನೀನು ಹೇ* ತಿನ್ನು, ಹಂದಿ ಕ* ತಿನ್ನು" ಅಂತ ಕಮೆಂಟ್ ಹಾಕೋದು. ಇವೆಲ್ಲ ಬಿಡಿ ತಮಗೆ ಸಂಬಂಧವೇ ಇಲ್ಲದ ಯಾವ್ಯಾವ್ದೋ ಪೋಸ್ಟ್‌ಗಳ ಮೇಲೆ ಕೆಟ್ಟ ಕೊಳಕ ಬೈದು ಬಾಯಿಚಟ ತೀರಿಸಿಕೊಳ್ಳೋದು. ಮೊನ್ನೆ ಹೀಗೇ ಒಂದು ಪೋಸ್ಟ್ ಮೇಲೆ ನಂಗೆ ಮುಖಪರಿಚಯ ಇರೋ ವ್ಯಕ್ತಿಯ ಕಮೆಂಟ್ ಕಾಣಿಸ್ತು. ಆ ವೀಡಿಯೋದಲ್ಲಿ ಒಬ್ಬ ವ್ಯಕ್ತಿ ಚಿಕನ್ ತಿಂತಿದ್ದಾನೆ. ಅಲ್ಲಿ ನನ್ನ ಪರಿಚಯದವನ ಕಮೆಂಟ್ ಹೀಗಿತ್ತು - "ಅದೇನ್ ಹೊಲಸು ತಿಂತೀರಲೇ, ಚೈನೀಸ್ಗೆ ಹುಟ್ಟಿರೋ ಬೋಳಿಮಕ್ಳ" ಅಂತ. ನನಗೆ ತಿಳಿದಂತೆ ಈ ಕಮೆಂಟ್ ಹಾಕಿದ ವ್ಯಕ್ತಿಯೂ ತಿನ್ನೋವ್ನೆ. ಆದರೆ ಬೇರೆಯವನು ತಿನ್ನೋದನ್ನ ನೋಡಿ ಇವನಿಗ್ಯಾಕೆ ಉರಿತೋ ಗೊತ್ತಿಲ್ಲ. ಸೋಶಿಯಲ್ ಮೀಡಿಯಾ ಬಂದಮೇಲೆ ಜನಕ್ಕೆ ಹುಚ್ಚು ಹಿಡಿದಿದೆಯೋ ಅಥವಾ ಜನರಿಗೆ ಮೊದಲೇ ಇದ್ದ ಹುಚ್ಚಿಗೆ ಸೋಶಿಯಲ್ ಮೀಡಿಯಾ ಒಂದು ವೇದಿಕೆ ಆಗಿದೆಯೋ ಗೊತ್ತಿಲ್ಲ.
Social Media Toxic: ನೆಟ್ಟಿಗರು ಹೇಳಿದ್ದೇನು
ಸುನೀಲ್ ಜೆ ಅವರ ಅಭಿಪ್ರಾಯಕ್ಕೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ. ಬರಹಗಾರ ರಾಜೇಂದ್ರ ಪ್ರಸಾದ್ ಅವರು, ಬಹಳಷ್ಟು ಜನರಿಗೆ!? ಬಹುತೇಕ ಎಲ್ಲರಿಗೆ! ಎಂದಿದ್ದಾರೆ. ಅನಂತ ಪೈ ಎನ್ನುವವರು ಆದಿನ ಅದ್ಯಾರೋ ನಟಿ(ಹೆಸರು ನೆನಪಿಲ್ಲ, ಯಾರೋ ಶೆಟ್ಟಿ ಅಂತ...) ತನ್ನ ರೀಲ್ಸ್ ಹಾಕಿದ್ದಳು. She was looking amazing(at least to my eyes). ಆಕೆ ಕಪ್ಪಗಿದ್ದಳು. ಅದಕ್ಕೆ ಆಕೆಯ ಬಣ್ಣದ ಬಗ್ಗೆ ಒಂದಿಷ್ಟು ಜನ ಹಾಕಿರೋ ಕಮೆಂಟ್ ನೋಡಬೇಕಿತ್ತು. ನಾನು ಆ ಕಮೆಂಟ್ ಹಾಕಿರೋ ಒಂದಿಷ್ಟು ಪ್ರೊಫೈಲ್ ಜಾಲಾಡಿದೆ. ಒಂದಿಬ್ಬರದು ಲಾಕ್ ಆಗಿತ್ತು.
ಮಿಕ್ಕವರದ್ದು ಫ್ಯಾಮಿಲಿ ಫೋಟೋ ಎಲ್ಲ ಹುಡುಕಿದಾಗ ಅವರ ಮನೆಯಲ್ಲಿಯೇ/ಅಥವಾ Extended Familyಯಲ್ಲಿ ಅಲ್ಲಲ್ಲಿ ಕಪ್ಪು ಬಣ್ಣದ ಚರ್ಮದವರು ಇದ್ದಾರೆ. ಅಲ್ಲ, ಇಲ್ಲಿ ಸೋಷಿಯಲ್ ಮೀಡಿಯಾದಲ್ಲೇ ಈತರ ಮಾತಾಡೋವ್ರು ಅವರ ಫ್ಯಾಮಿಲಿ ಮೆಂಬರ್‌ನ ಹೇಗೆ ಟ್ರೀಟ್ ಮಾಡಬಹುದು ಅನ್ನಿಸ್ತು ಅಥವಾ ನಿಜಬದುಕಿನಲ್ಲಿ ಸ್ವಲ್ಪ ಕಪ್ಪಗಿರೋ ಗೆಳೆಯರನ್ನು ಯಾವ ರೀತಿ ನೋಡ್ಕೋಬಹುದು ಅಂತ ಅನ್ನಿಸ್ತು ಎಂದು ಹೇಳಿದ್ದಾರೆ. ಪ್ರಕಾಶ್ ಹೆಬ್ಬಳ್ಳಿ ಎಂಬವರು
ಜನರ ಜೀವನದಲ್ಲಿ ಅಸಹನೆ, ಜಿಗುಪ್ಸೆ, ತಾತ್ತಾರ, ವೈಮನಸ್ಸು, ಅರಿವು ಹೆಚ್ಚಾಗುತ್ತಿದೆ. ಸಿಟ್ಟನ್ನು ಈ ರೀತಿ ಹೊರಗೆ ಹಾಕುತ್ತಿದ್ದಾರೆ ಅಂತ ಅಭಿಪ್ರಾಯಪಟ್ಟಿದ್ದಾರೆ.
ಶ್ರೀನಿವಾಸ ಮೂರ್ತಿ ಎನ್ನುವವರು, ಅಂಥ ಜನರ ಹುಟ್ಟುಗುಣ ಅದು. ಮೊದಲಿನಿಂದಲೂ ಅಂಥವರು ತುಂಬ ಜನ ಇಬ್ಬರು. ಸೋಷಿಯಲ್ ಮೀಡಿಯಾಗಳು ಇಲ್ಲದ ಕಾಲದಲ್ಲಿ ಅವರ ಮನಸ್ಸಿನ ಕುರೂಪ ಅವರೊಡನೆ ನೇರವಾಗಿ ಸಂಪರ್ಕದಲ್ಲಿರುವವರಿಗೆ ಮಾತ್ರ ಗೊತ್ತಾಗುತ್ತದೆ. ಆದರೆ ಈಗ ಫೇಸ್ ಬುಕ್, ಇನ್ಸ್ಟಾಗ್ರಾಮ್ ಇತ್ಯಾದಿಗಳು ಅಂಥವರ ಮನಃಸ್ಥಿತಿಯನ್ನು ಸಾರ್ವಜನಿಕವಾಗಿ ಬೆತ್ತಲಾಗಿಸುತ್ತಿವೆ, ಅಲ್ಲ, ಅವರೇ ತಮ್ಮ ಕೊಳಕು ಮನಸ್ಸುಗಳನ್ನು ಸಾರ್ವಜನಿಕವಾಗಿ ಮುಖವಾಡಗಳನ್ನು ಕಳಚಿ ಪ್ರದರ್ಶಿಸುತ್ತಿದೆ ಅಷ್ಟೆ ಎಂದಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಜನ ಮನಸ್ಸಿಗೆ ಬಂದಂತೆ ಕಮೆಂಟ್ ಮಾಡುತ್ತಿರುವುದಕ್ಕೆ ಕಾರಣವೇನು, ನಿಮ್ಮ ಅಭಿಪ್ರಾಯವೇನು. ಕಮೆಂಟ್‌ನಲ್ಲಿ ತಿಳಿಸಿ..












Click it and Unblock the Notifications