ಐಎಸ್ಐಎಸ್ ನಂಟು ಶಂಕೆ:ಸಿಕ್ಕಿಬಿದ್ದ ಬೆಂಗಳೂರಿನ ಉಗ್ರ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು,ಡಿಸೆಂಬರ್ 18: ನಕಲಿ ಐಡಿ ತೋರಿದ ಬೆಂಗಳೂರಿನ ನಿವಾಸಿ 23 ವರ್ಷದ ವ್ಯಕ್ತಿಯೊಬ್ಬನ್ನು ಐಎಸ್ಐಎಸ್ ಉಗ್ರರೊಂದಿಗೆ ಸಂಬಂಧ ಇರುವ ಹಿನ್ನೆಲೆ ಹಿಮಾಚಲ ಪ್ರದೇಶದ ಕುಲ್ಲು ಎಂಬಲ್ಲಿ ಬಂಧಿಸಲಾಗಿದೆ.

ಶಂಕಿತ ವ್ಯಕ್ತಿಯನ್ನು ಅಬೀದ್ ಖಾನ್ ಎಂದು ಗುರುತಿಸಲಾಗಿದ್ದು ಪೊಲೀಸರು ಸಿಬಿಐ ಅಧಿಕಾರಿಗಳಿಗೊಪ್ಪಿಸಿದ್ದಾರೆ. ಸದ್ಯಕ್ಕೆ ಸಿಬಿಐ ಅಧಿಕಾರಿಗಳ ವಶದಲ್ಲಿಡಲಾಗಿದೆ.

ನಕಲಿ ಗುರುತಿನ ಚೀಟಿಯನ್ನು ತೋರಿಸಿ ಇಲ್ಲಿನ ಜನರೊಂದಿಗೆ ವಾಸಿಸುತ್ತಿದ್ದ ಐಎಸ್ಐಎಸ್ ಉಗ್ರರೊಂದಿಗೆ ಚಟುವಟಿಕಯಲ್ಲಿ ತೊಡಗಿದ್ದ ಎನ್ನಲಾದ ವ್ಯಕ್ತಿಯನ್ನು ಹಿಮಾಚಲ ಪ್ರದೇಶದ ಕುಲ್ಲು ಎಂಬಲ್ಲಿ ಸೆರೆಹಿಡಿಯಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಸಂಜಯ್ ಕುಮಾರ್ ತಿಳಿಸಿದರು.[ಜಮ್ಮು ಕಾಶ್ಮೀರದಲ್ಲಿ ದಾಳಿ: ಮೂವರು ಉಗ್ರರಿಗೆ ಚಿರಶಾಂತಿ]

terrorism

ಇನ್ನು ಗುಪ್ತಚರ ಇಲಾಖೆ ಆತನನ್ನು ವಿಚಾರಣೆಗೊಳಪಡಿಸಿದ್ದು ಅವರೊಂದಿಗೆ ಯಾವ ಸಂಭಾಷಣೆ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ.
ಆದರೆ ಗುಪ್ತಚರ ಇಲಾಖೆ ಹೇಳುವಂತೆ ಐಎಸ್ಐಎಸ್ ಸಿದ್ಧಾಂತಗಳಿಗೆ ಮಾರುಹೋಗಿ ಚಟುವಟಿಕೆಗಳಲ್ಲಿ ತೊಡಗಿದ್ದ ಎನ್ನಲಾಗಿದೆ.

ಖಾನ್ ದೆಹಲಿ ಮತ್ತು ಉತ್ತರ ಭಾರತದ ಕೆಲವೆಡೆ ತನ್ನ ಚಟುವಟಿಕೆಯನ್ನು ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದು, ಇದೇ ಮಾದರಿಯ ಅನೇಕ ಚಟುವಟಿಕೆಗಳಲ್ಲಿ ಬಹಳಷ್ಟು ಜನರ ಐಎಸ್ಐಎಸ್ ಉಗ್ರರು ಗುಪ್ತಚರ ಇಲಾಖೆಯ ಜಾಲಕ್ಕೆ ಸಿಕ್ಕಿಬಿದ್ದಿದ್ದಾರೆ ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 23 year old resident of Bengaluru with suspected links to the ISIS has been arrested at Kullu in Himachal Pradesh. The man identified as Abeed Khan was picked up by the police and is currently being interrogated by sleuths of the Intelligence Bureau.
Please Wait while comments are loading...