ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರಕಾರ ರಚನೆಗೆ ಬಿಜೆಪಿಗೆ ಆಹ್ವಾನ ನೀಡಿದ ರಾಜ್ಯಪಾಲರು!

By Mahesh
|
Google Oneindia Kannada News

ಬೆಂಗಳೂರು, ಮೇ 15: ಮತದಾರ ಮಹಾಪ್ರಭು ನೀಡಿದ ಜನಾದೇಶ ನಮ್ಮ ಬಳಿ ಇದೆ. ನಾವೇ ಸರ್ಕಾರ ರಚಿಸಲು ಅರ್ಹರು ಎಂದು ಹೇಳುತ್ತಿರುವ ಬಿಜೆಪಿ ನಾಯಕರು ರಾಜಭವನಕ್ಕೆ ತೆರಳಿ, ವಜುಭಾಯಿ ವಾಲರನ್ನು ಭೇಟಿ ಮಾಡಿದ್ದಾರೆ.

104 ಶಾಸಕರ ಬೆಂಬಲವಿರುವ ಎರಡು ಪತ್ರಗಳನ್ನು ರಾಜ್ಯಪಾಲರಿಗೆ ಸಲ್ಲಿಕೆ ಮಾಡಿರುವ ಯಡಿಯೂರಪ್ಪ ಅವರು ಸರ್ಕಾರ ರಚನೆಗೆ ಮೊದಲು ಅವಕಾಶ ನೀಡಬೇಕು. ಗುರುವಾರ(ಮೇ 17) ದಂದು ಪ್ರಮಾಣ ವಚನ ಸ್ವೀಕರಿಸಿ, ಒಂದು ವಾರದೊಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸುವುದಾಗಿ ಕೋರಿದ್ದಾರೆ.

ರಾಜ್ಯಪಾಲ ವಜುಭಾಯಿ ವಾಲ ಮುಂದಿರುವ ನಾಲ್ಕು ಆಯ್ಕೆಗಳುರಾಜ್ಯಪಾಲ ವಜುಭಾಯಿ ವಾಲ ಮುಂದಿರುವ ನಾಲ್ಕು ಆಯ್ಕೆಗಳು

ಆದರೆ, ಅತಂತ್ರ ವಿಧಾನಸಭೆ ಸೃಷ್ಟಿಯಾದ ಹಿನ್ನಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸಾಧ್ಯತೆ ಉಂಟಾಗಿದ್ದು, ಸರ್ಕಾರ ರಚನೆ ಕಸರತ್ತು ಮುಂದುವರೆದಿದೆ.

Karnataka Assembly Election 2018 Results : BS Yeddyurappa elected as Legislative Party leader

ಈ ನಡುವೆ ಬುಧವಾರ ಬೆಳಗ್ಗೆ ನಡೆದ ಬಿಜೆಪಿ ನೂತನ ಶಾಸಕರ ಜತೆಗಿನ ಸಭೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ, ಶಿಕಾರಿಪುರದ ಶಾಸಕ, ಶಿವಮೊಗ್ಗದ ಸಂಸದ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು.

ಯಾರು ಅಧಿಕಾರ ಸ್ವೀಕರಿಸಲಿದ್ದಾರೆ? ಇನ್ನೂ ಸ್ಪಷ್ಟವಾಗಿಲ್ಲ. ಚೆಂಡು ಈಗ ರಾಜ್ಯಪಾಲ ವಜುಭಾಯಿ ವಾಲ ಅವರ ಅಂಗಳದಲ್ಲಿದೆ. ಮೂಲಗಳ ಪ್ರಕಾರ ಮೊದಲು ಮನವಿ ಸಲ್ಲಿಸುವ ಬಿಜೆಪಿಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ.

15ನೇ ವಿಧಾನಸಭೆಗಾಗಿ ಮೇ 12ರಂದು ಚುನಾವಣೆ ನಡೆದಿದ್ದು, ಮೇ 15ರಂದು ಫಲಿತಾಂಶ ಹೊರಬಂದಿದೆ. ಬೆಂಗಳೂರಿನ ಜಯನಗರದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಅವರ ನಿಧನ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ಮುಂದೂಡಿಕೆಯಿಂದಾಗಿ 224ಕ್ಷೇತ್ರಗಳ ಬದಲಿಗೆ 222 ಕ್ಷೇತ್ರಗಳಲ್ಲಿ ಮಾತ್ರ ಮತದಾನವಾಗಿತ್ತು.

ಈಗ 222 ಕ್ಷೇತ್ರಗಳ ಫಲಿತಾಂಶ ಇಲ್ಲಿದೆ
* ಬಲಾಬಲ 222/224: ಬಿಜೆಪಿ 104, ಕಾಂಗ್ರೆಸ್ 78, ಜೆಡಿಎಸ್ 38, ಇತರೆ 2
* ಅಧಿಕಾರ ಸ್ಥಾಪನೆಗೆ ಬೇಕಾದ ಸಂಖ್ಯೆ : 112

English summary
Karnataka Assembly Election 2018 Results : BS Yeddyurappa elected as Legislative Party leader
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X