2000ರ ಚರ್ಚ್ ಬ್ಲಾಸ್ಟ್ ಆರೋಪಿ ಅಮೀರ್ ಅಲಿ ಬಂಧನ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 09: 2000ನೇ ಇಸ್ವಿಯಲ್ಲಿ ಬೆಂಗಳೂರಿನ ಎರಡು ಚರ್ಚ್ ಸೇರಿದಂತೆ ರಾಜ್ಯದ ವಿವಿಧೆಡೆ ಚರ್ಚ್ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಶೇಖ್ ಅಮೀರ್ ಅಲಿಯನ್ನು ಬಂಧಿಸಲಾಗಿದೆ.

ತೆಲಂಗಾಣದ ನಲ್ಗೊಂಡ ಮೂಲದ ದೀನ್ ದಾರ್ ಅಂಜುಮಾನ್ ಸಂಘಟನೆಯ ಶೇಖ್ ಅಮೀರ್ ಅಲಿ ವಿರುದ್ಧ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯದಿಂದ ಬಂಧನ ವಾರೆಂಟ್ ಹೊರಡಿಸಲಾಗಿತ್ತು. ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ ಚರ್ಚ್ ಮೇಲೆ ದಾಳಿ, ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೀರ್ ಅಲಿ ಆರೋಪಿಯಾಗಿದ್ದು, 16 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ.[ಮಲ್ಲೇಶ್ವರಂ ಸ್ಫೋಟ ಪ್ರಕರಣದ ಮುಖ್ಯ ಆರೋಪಿ ಡೇನಿಯಲ್ ಬಂಧನ]

ಚರ್ಚ್ ಗಳ ಮೇಲೆ ನಡೆದ ಬಾಂಬ್ ದಾಳಿಗಳಿಗೆ ಸಂಬಂಧಿಸಿದಂತೆ 11 ಆರೋಪಿಗಳಿಗೆ ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದೆ ಮತ್ತು 12 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2000 Church blast attacks : Bengaluru police Arrests Sheikh Aamir Ali

ನಗರದ ಹೊರವಲಯದಲ್ಲಿರುವ ಪರಪ್ಪನ ಅಗ್ರಹಾರದಲ್ಲಿ ಸೆರೆಯಲ್ಲಿಡಲಾಗಿದೆ. ಮೂವರು ಆರೋಪಿಗಳು ಸಾವನ್ನಪ್ಪಿದ್ದಾರೆ, ಏಳು ಜನ ತಪ್ಪಿಸಿಕೊಂಡಿದ್ದರು ಈ ಪೈಕಿ ಅಮೀರ್ ಅಲಿ ಬಂಧನವಾಗಿದೆ.ಇಬ್ಬರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.[ಮಲ್ಲೇಶ್ವರಂ ಸ್ಫೋಟ : 2 ಸಾವಿರ ರೂ.ಗೆ ಸ್ಫೋಟಕ ಮಾರಾಟ]

ಬೆಂಗಳೂರಿನ ಜೆಜೆ ನಗರದ ಸೈಂಟ್ ಪೀಟರ್ಸ್ ಹಾಗೂ ಸೈಂಟ್ ಪಾಲ್ ಚರ್ಚ್, ಗುಲಬರ್ಗಾ ಜಿಲ್ಲೆಯ ವಾಡಿ, ಹುಬ್ಬಳ್ಳಿಯ ಕೇಶ್ವಾಪುರ, ಬೆಂಗಳೂರಿನ ಜೆಜೆ ನಗರದ ಚರ್ಚ್ ಗಳಲ್ಲಿ ನಡೆಸಲಾದ ಬಾಂಬ್ ಸ್ಫೋಟಗಳು ಮತ್ತು ವ್ಯಾನ್ ಸ್ಫೋಟಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿತ್ತು.

ಮರಣದಂಡನೆಗೆ ಒಳಗಾದವರು : ಮೊಹಮ್ಮದ್ ಇಬ್ರಾಹಿಂ, ಶೇಖ್ ಹಷಮ್ ಅಲಿ, ಹಸನುಜಮಾ, ಅಬ್ದುಲ್ ರೆಹಮಾನ್ ಶೇಠ್, ಅಮಾನತ್ ಹುಸೇನ್ ಮುಲ್ಲಾ, ಮೊಹಮ್ಮದ್ ಶರ್ಫುದ್ದಿನ್, ಸೈಯದ್ ಮುನೀರುದ್ದಿನ್ ಮುಲ್ಲಾ, ಮೊಹಮ್ಮದ್ ಅಖಿಲ್ ಅಹ್ಮದ್, ಇಜಾಹರ್ ಬೇಗ್, ಸೈಯದ್ ಅಬ್ಬಾಸ್ ಅಲಿ ಮತ್ತು ಮೊಹಮ್ಮದ್ ಖಾಲಿದ್ ಚೌಧರಿ.

ಜೀವಾವಧಿ ಶಿಕ್ಷೆಗೆ ಗುರಿಯಾದವರು : ಮೊಹಮ್ಮದ್ ಫರೂಕ್ ಅಲಿ, ಮೊಹಮ್ಮದ್ ಸಿದ್ದಿಕಿ, ಅಬ್ದುಲ್ ಹಬೀಬ್, ಶಂಶುಜಮ್ಮಾ, ಶೇಖ್ ಫರ್ದಿನ್ ವಲಿ, ಸೈಯದ್ ಅಬ್ದುಲ್ ಖಾದರ್ ಜಿಲಾನಿ, ಮೊಹಮ್ಮದ್ ಗಿಯಾಸುದ್ದಿನ್, ಮೀರಾಸಾಬ್ ಕೌಜಲಗಿ, ರಿಷ್ ಹಿರೇಮಠ್, ಬಶೀರ್ ಅಹ್ಮದ್, ಮೊಹಮ್ಮದ್ ಹುಸೇನ್ ಮತ್ತು ಸಾಂಗಲಿ ಬಾಷಾ.

ತಪ್ಪಿಸಿಕೊಂಡವರು : ಜಿಯಾ-ಉಲ್-ಹಸನ್, ಸೈಯದ್ ಖಾಲಿದ್ ಪಾಷಾ, ಜಾಹೇದ್ ಉಲ್ ಹಸನ್, ಶಬಿ ಉಲ್ ಹಸನ್, ಖಾಲೀದ್ ಪಾಷಾ, ಶೇಖ್ ಅಮೀರ್ ಮತ್ತು ಸೈಯದ್ ವಹಾಬ್.

ಖುಲಾಸೆ ಆದವರು : ಮೊಹಮ್ಮದ್ ರಿಯಾಜುದ್ದಿನ್, ಮೊಹಮ್ಮದ್ ಜಾಫರ್, ಇಸ್ಮಾಯಿಲ್ ಅಕ್ಕಿ, ಅಮೀರ್ ಹಂಜಾ.

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Amir Ali an accused in the 2000 Church blast attacks has been arrested after 16 years by the police.
Please Wait while comments are loading...