ಶೌಚಾಲಯ ಎಂದು ರೈಲಿನ ಬಾಗಿಲು ತೆರೆದು ಮೃತಪಟ್ಟ ಮಹಿಳೆ
ಬಳ್ಳಾರಿ, ನವೆಂಬರ್ 23: ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ತಾಳೇದಹಳ್ಳಿ ತಾಂಡಾದ ರೈಲ್ವೆ ಹಳಿ ಬಳಿ ನಡೆದಿದೆ.
ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ತಾಳೇದಹಳ್ಳಿ ಬಳಿ ಗದಗ ಜಿಲ್ಲೆ ನರಗುಂದದ ನಿವಾಸಿ ಚನ್ನವ್ವ (58) ಎಂಬ ಮಹಿಳೆಯ ಮೃತದೇಹ ದೊರಕಿದೆ. ನಿನ್ನೆ ಚನ್ನವ್ವ ತನ್ನ ಸೊಸೆಯೊಂದಿಗೆ ಕೊಪ್ಪಳದಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು.
ತಡರಾತ್ರಿ ಶೌಚಕ್ಕೆ ಹೋಗಲು ಎದ್ದು, ಶೌಚಾಲಯದ ಬಾಗಿಲು ಎಂದು ಭಾವಿಸಿ ರೈಲ್ವೆ ಬೋಗಿಯ ಬಾಗಿಲು ತೆರೆದು ಹೊರಗೆ ಕಾಲಿಟ್ಟಿದ್ದಾರೆ. ಈ ಸಂದರ್ಭ ಚಲಿಸುವ ರೈಲಿನಿಂದ ಬಿದ್ದು ಮೃತಪಟ್ಟಿದ್ದಾರೆ.

ಚನ್ನಮ್ಮನವರ ಸೊಸೆ ಅವರಿಗಾಗಿ ಹುಡುಕಾಟ ನಡೆಸಿ, ಕೊನೆಗೆ ಪೊಲೀಸರಿಗೆ ದೂರು ನೀಡಿದ್ದರು. ಇಂದು ತಾಳೇದಹಳ್ಳಿ ತಾಂಡದ ರೈಲ್ವೆ ಟ್ರಾಕ್ ಬಳಿ ಚನ್ನವ್ವ ಶವ ಪತ್ತೆಯಾಗಿದೆ. ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












Click it and Unblock the Notifications