ಸೆ.21ರಿಂದ ಬಳ್ಳಾರಿ-ಹೈದರಾಬಾದ್ ನಡುವೆ ವಿಮಾನ ಸೇವೆ
ಬಳ್ಳಾರಿ, ಸೆಪ್ಟೆಂಬರ್ 12 : ಸುಮಾರು 9 ವರ್ಷಗಳ ಬಳಿಕ ಬಳ್ಳಾರಿಯಲ್ಲಿ ವಿಮಾನಗಳ ಹಾರಾಟ ನಡೆಯಲಿದೆ. ಟ್ರೂ ಜೆಟ್ ಬಳ್ಳಾರಿ-ಹೈದರಾಬಾದ್ ನಡುವೆ ಸೆ.21ರಿಂದ ವಿಮಾನ ಸಂಚಾರ ಆರಂಭಿಸಲಿದೆ.
ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಟ್ರೂ ಜೆಟ್ ಎರಡು ನಗರಗಳ ನಡುವೆ ವಿಮಾನ ಸೇವೆ ಆರಂಭಿಸುತ್ತಿದೆ. ಹೈದರಾಬಾದ್‌ನಿಂದ ಮೊದಲ ವಿಮಾನ ಬಳ್ಳಾರಿಯ ವಿದ್ಯಾನಗರದಲ್ಲಿರುವ ವಿಮಾನ ನಿಲ್ದಾಣಕ್ಕೆ ಸೆ.21ರಂದು ಬಂದು ತಲುಪಲಿದೆ.

72 ಸೀಟಿನ ವಿಮಾನ ಬೆಳಗ್ಗೆ 6ಗಂಟೆಗೆ ಹೈದರಾಬಾದ್‌ನಿಂದ ಹೊರಡಲಿದ್ದು, 7.05ಕ್ಕೆ ಬಳ್ಳಾರಿ ತಲುಪಲಿದೆ. 7.30ಕ್ಕೆ ಬಳ್ಳಾರಿಯಿಂದ ಹೊರಡುವ ವಿಮಾನ 8.35ಕ್ಕೆ ಹೈದರಾಬಾದ್ ತಲುಪಲಿದೆ. ಪ್ರಯಾಣ ದರ 999 ರೂ. ನಿಗದಿಪಡಿಸಲಾಗಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ : ಬಳ್ಳಾರಿ-ಹೈದರಾಬಾದ್ ನಡುವೆ ವಿಮಾನ ಸಂಚಾರ ಆರಂಭವಾದರೆ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಹಂಪಿ, ತುಂಗಭದ್ರಾ ಡ್ಯಾಂ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಪ್ರವಾಸಿ ಸ್ಥಳಗಳಿದ್ದು, ಹೆಚ್ಚಿನ ಪ್ರವಾಸಿಗರು ಆಗಮಿಸಲು ಸಾಧ್ಯವಾಗುತ್ತದೆ.
Brilliance of architecture Fly 2 #Vidyanagar Bellary & #Hampi brought closer 2 u by #Trujet #Airlines #trujet #destination #fly #travel pic.twitter.com/mHjc0ohk4Q
— TruJet (@FlyTruJet) September 7, 2017












Click it and Unblock the Notifications